ರಾಯಚೂರು

ತುರ್ತು ಚಿಕಿತ್ಸಾ ಕೇಂದ್ರ ಆರಂಭ

Published On :

ಸಿಂಧನೂರು: ತಾಲೂಕಿನ ಆರ್.ಎಚ್. ಕ್ಯಾಂಪ್ ನಂ. 5ರಲ್ಲಿ ಶಂಕಿತ ಡೆಂಘೀ ನಿಯಂತ್ರಣಕ್ಕಾಗಿ ಹಾಗೂ ಹೊರ ರೋಗಿಗಳನ್ನು ಪರೀಕ್ಷಿಸಲು ತುರ್ತು ಚಿಕಿತ್ಸಾ ಕೇಂದ್ರ ಆರಂಭಿಸಲಾಯಿತು. ಆರ್‌ಎಚ್ ಕ್ಯಾಂಪ್ನ್‌ಂ.2ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್.ಎಸ್.ಸುಂಕದ ಅವರು ಹೊರರೋಗಿಗಳ ಆರೋಗ್ಯ ತಪಾಸಣೆ ಮಾಡಿದರು. ಸುಮಾರು 19ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ರಾಯಚೂರಿಗೆ ಕಳುಹಿಸಲಾಯಿತು. ಅಲ್ಲದೇ ಗ್ರಾಪಂ ವತಿಯಿಂದ ಗ್ರಾಮಸ್ಥರ ಮನೆಗಳಲ್ಲಿ ಫಾಗಿಂಗ್ ಮಾಡಲಾಯಿತು. ಮನೆಗಳಲ್ಲಿ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿಗಳನ್ನು ಶುಚಿಗೊಳಿಸುವ ಕಾರ್ಯವನ್ನು ಜಿಲ್ಲಾ ಸಮೀಕ್ಷಾ ತಂಡದವರು ನಿರ್ವಹಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ್ ನೇತೃತ್ವದಲ್ಲಿ ಗ್ರಾಮದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವೂ ಈ ವೇಳೆ ನಡೆಸಲಾಯಿತು. ಗ್ರಾಪಂ ಸದಸ್ಯ ಸುಮಂತೊ ಮಂಡಲ್, ನರೋದ್ ಬೈರಾಗಿ, ಸರಳಾ ಶಿಶು ಮಂಡಲ್, ಶಶಿಕುಮಾರ, ಮುಖಂಡರಾದ ಸಪನ್ ಬಿಸ್ವಾಸ್, ಪ್ರಹ್ಲಾದ ಬಿಸ್ವಾಸ್, ಜಗನ್ನಾಥ, ಅಮರ, ದಿಲೀಪ್ ಮತ್ತಿತರರು ಸಹಕರಿಸಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಚಂದ್ರಣ್ಣ, ರೋಷನ್, ಪ್ರಯೋಗ ತಂತ್ರಜ್ಞೆ ಕನಕಾಚಲ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.