ಡೋಣಗಾಂವ್ ಬಸ್ ನಿಲ್ದಾಣಕ್ಕೆ ಕಲ್ಲು, ಮುಳ್ಳಿನ ದಾರಿ
ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮವು 4 ರಿಂದ 5 ಸಾವಿರ ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿ ದ್ದು, ಇಲ್ಲಿಗೆ ಚಿತ್ತಾಪುರದಿಂದ ಬಸ್ಗಳು ಅನೇಕ ಬಾರಿ ಬಂದು ಹೋಗುತ್ತವೆ. ಆದರೆ ಇಲ್ಲಿನ ನಿಲ್ದಾಣ ಜನರಿಗೆ ಇದ್ದರೂ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಇಲ್ಲಿ ಗ್ರಾಪಂ ವತಿಯಿಂದ ನಿಲ್ದಾಣವೇನೋ ನಿರ್ಮಿಸಿದ್ದಾರೆ. ಆದರೆ ಅದಕ್ಕೆ ಸರಿಯಾದ ನಿರ್ವಹಣೆ ಇಲ್ಲದಾಗಿದೆ. ನಿಲ್ದಾಣದ ಎದುರು ಅನೇಕ ತಿಂಗಳುಗಳಿಂದ ಕಲ್ಲು, ಪರಸಿಗಳನ್ನು ಹಾಕಿರುವುದರಿಂದ ಪ್ರಯಾಣಿಕರು ಹೋಗು ತೊಂದರೆಯಾಗುತ್ತಿದೆ.
ಇಲ್ಲಿಯವರೇ ಗ್ರಾಪಂ ಅಧ್ಯಕ್ಷರಾಗಿದ್ದು, ಪಿಡಿಒ ಹಾಗೂ ವಿವಿಧ ಇಲಾಖೆಗಳಅಧಿಕಾರಿಗಳು ಹಲವಾರು ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆದರೂ ಅವರ ಕಣ್ಣೆದುರು ಇರುವ ಸಮಸ್ಯೆಯ ಬಗ್ಗೆ ಗಮನಹರಿಸದಿರುವುದು ದುರಂತ.
ಮುಂದಾದರೂ, ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ಅರಿತು ನಿಲ್ದಾಣದ ಎದುರು ಇರುವ ಕಲ್ಲುಗಳನ್ನು ತೆಗೆಸಿ ಜನರಿಗೆ ಅನುಕೂಲ ಮಾಡಿಕೋಡಬೇಕೆಂದು ಗ್ರಾಮದ ಪ್ರಮುಖರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

