ಬುಕ್ಕಿಲ್ಲ, ಶಿಕ್ಷಕರೂ ಇಲ್ಲ!
ಕನ್ನಡಪ್ರಭ ವಾರ್ತೆ ಮುದಗಲ್ ಆ.30
ಲಿಂಗಸ್ಗೂರು ತಾಲೂಕಿನ ಕೊನೆ ಭಾಗದ ನಾಗರಹಾಳ ಸಿಆರ್ಸಿ ಮಟ್ಟದ 10 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕೊಠಡಿಗಳು, ಶಿಕ್ಷಕರು, ಪಠ್ಯಪುಸ್ತಕ ಕೊರತೆ ಸೇರಿದಂತೆ ಇತರ ಮೂಲ ಸೌಲಭ್ಯಗಳಿಲ್ಲದೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.
ಸಿಆರ್ಸಿ ಮಟ್ಟದ 10 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯ 354 ವಿದ್ಯಾರ್ಥಿಗಳು ಕನ್ನಡ ಹಾಗೂ ಇಂಗ್ಲಿಷ್, ಮೂರನೇ ತರಗತಿಯ 283 ವಿದ್ಯಾರ್ಥಿಗಳಿಗೆ ಕನ್ನಡ, ಪರಿಸರ ಪುಸ್ತಕಗಳಿಲ್ಲದೇ ವಂಚಿತರಾಗಿ ಮತ್ತು ಬಹುತೇಕ ಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ವಿಷಯವಾರು ಶಿಕ್ಷಕರಿಲ್ಲ, ಆದರೂ ಶಿಕ್ಷಣ ಇಲಾಖೆ ಇತ್ತ ಗಮನಹರಿಸಿಲ್ಲ. ಇಂಗ್ಲಿಷ್ನಂತಹ ಕಠಿಣ ವಿಷಯಕ್ಕೂ ಶಿಕ್ಷಕರನ್ನು ನೇಮಿಸಿ, ಪಠ್ಯಪುಸ್ತಕ ಒದಗಿಸಿಲ್ಲ.
ನಿರ್ವಹಣೆ ಕೊರತೆ: ಇಲ್ಲಗಳ ಆಗರದೊಳಗೆ ವಿದ್ಯಾರ್ಥಿಗಳು ಪ್ರಥಮ ಕಿರುಪರೀಕ್ಷೆ ಎದುರಿಸಿರುವುದು ವಿಪರ್ಯಾಸ. ಇದು ಪಾಲಕರಲ್ಲಿ ಚಿಂತೆ ಹೆಚ್ಚಿಸಿದೆ. ಬಹುತೇಕ ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಮಳೆ ಬಂದಾಗ ಕೊಠಡಿಗಳು ಸೋರುತ್ತಿವೆ. ನಿರ್ವಹಣೆ ಕೊರತೆಯಿಂದ ಮಳೆ ಬಂದರೆ ಶಾಲಾ ಆವರಣದಲ್ಲಿ ನೀರು ನಿಂತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಮಲತಾಯಿ ಧೋರಣೆ: ತಾಲೂಕಿನ ಹಟ್ಟಿ, ಗುರಗುಂಟಾ, ನಾಗಲಾಪುರ, ಮಾವಿನಭಾವಿ, ಬಯ್ಯಾಪುರ, ಮುದಗಲ್ ಹಾಗೂ ರೋಡಲಬಂಡಾ ಸಿಆರ್ಸಿ ವಲಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಪಠ್ಯಪುಸ್ತಕ ವಿತರಿಸಿದ್ದಾರೆಂದು ವರದಿಯಾಗಿದೆ. ಆದರೆ ಶಿಕ್ಷಣ ಇಲಾಖಾಧಿಕಾರಿಗಳ ಮಲತಾಯಿ ಧೋರಣೆಯಿಂದ ನಾಗರಹಾಳ ಸಿಆರ್ಸಿ ಮಟ್ಟದ ವಿದ್ಯಾರ್ಥಿಗಳಿಗೆ ಮುಖ್ಯ ವಿಷಯ ಕನ್ನಡ ಹಾಗೂ ಇಂಗ್ಲಿಷ್ ಪಠ್ಯಪುಸ್ತಕದಿಂದ ವಂಚಿತರಾಗಿದ್ದಾರೆ.
ಒಟ್ಟಾರೆ ನಾಗರಹಾಳ ಕ್ಲಷ್ಟರ್ ಮಟ್ಟದಲ್ಲಿ ವಿದ್ಯಾರ್ಥಿಗಳು ಶಿಕ್ಷಕ- ಪಠ್ಯಪುಸ್ತಕಗಳ ಕೊರತೆ ಹಾಗೂ ಕೊಠಡಿಗಳ ಅವ್ಯವಸ್ಥೆ, ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಂಬಂಧಿಸಿದ ಇಲಾಖಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನರಿತು ಗಮನಹರಿಸಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಸಹಕರಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

