ರಾಯಚೂರು

ಆಹಾರ ಭದ್ರತೆ ಸುಗ್ರೀವಾಜ್ಞೆಗೆ ಅಂಕಿತ; ಸ್ವಾಗತಾರ್ಹ

Published On :

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜು.7
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆಹಾರ ಭದ್ರತೆ ಸುಗ್ರೀವಾಜ್ಞೆಗೆ ಅಂಕಿತ ಹಾಕಿರುವುದು ಸ್ವಾಗತಾರ್ಹ. ಆದರೆ ಅನ್ನ ನೀಡುವ ರೈತರ ಆಹಾರ ಉತ್ಪಾದನೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಒತ್ತಾಯಿಸಿದ್ದಾರೆ.
ದೇಶಕ್ಕಾಗಿ ರೈತರು ಅಪಾರ ಕೊಡುಗೆ ನೀಡಿದ್ದು, ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಬೇರೆ ರಾಷ್ಟ್ರಗಳಿಂದ ಆಹಾರಧಾನ್ಯ ತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಹಸಿರು ಕ್ರಾಂತಿ ಜಾರಿಯಾದ ನಂತರ 20 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆ ಮಾಡಿ ಸರ್ವ ಜನರಿಗೆ ಆಹಾರ ಒದಗಿಸುವಲ್ಲಿ ರೈತರು ಸಹಕಾರಿಯಾಗಿದ್ದು ಅಲ್ಲದೆ ತಮ್ಮ ಜವಾಬ್ದಾರಿ ನಿರ್ವಹಿಸುವ ಮೂಲಕ ಹೆಚ್ಚು ಉತ್ಪಾದನೆ ಮಾಡಿ ದೇಶದ ಗೌರವ ಕಾಪಾಡಿದ್ದಾರೆ.
ರೈತ ಸಾಲಗಾರ- ವಿಷಾದ: ಕಡುಬಡ ಕುಟುಂಬಗಳಿಗೆ 3ರಂತೆ ಕೆಜಿ ಅಕ್ಕಿ, 2ರಂತೆ ಕೆಜಿ ಗೋದಿ, 1ರಂತೆ ಕೆಜಿ ಬೇಳೆ ಕಾಳು ನೀಡುವ ಮೂಲಕ ಹಸಿವು ನೀಗಿಸುವುದು ಹಾಗೂ ಗ್ರಾಮೀಣ ಭಾಗದ ಶೇ.50ರಷ್ಟು ಜನರನ್ನು ಈ ಯೋಜನೆ ವ್ಯಾಪ್ತಿಗೆ ತಂದು ಪ್ರತಿ ತಿಂಗಳು 5 ಕೆಜಿ ಸಹಾಯಧನದ ಆಹಾರಧಾನ್ಯ ದೊರಕಿಸಿ ಕೊಡುವ ಆಹಾರ ಭದ್ರತೆ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ ರಾಷ್ಟ್ರಪತಿಗಳ ಕ್ರಮ ಸಮಂಜಸವಾಗಿದೆ. ಆದರೆ ಆಹಾರ ಉತ್ಪಾದನೆ ಹೆಚ್ಚಿಸುವ ಮೂಲಕ ದೇಶದ ಮಾನ ಹರಾಜಾಗುವುದನ್ನು ತಡೆದ ರೈತರು ಸಾಲಗಾರರಾಗಿರುವುದು ವಿಷಾಧನೀಯ ಸಂಗತಿಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕುರಿತು ಗಂಭೀರವಾಗಿ ಪರಿಗಣಿಸಿ ಸಾಲಗಾರರಲ್ಲದ ಗ್ರಾಮಗಳನ್ನು ನಿರ್ಮಾಣ ಮಾಡುವ ಮೂಲಕ ದುಡಿಯುವ ವರ್ಗಕ್ಕೆ ಕೆಲಸ ಮತ್ತು ಉತ್ತೇಜನ ನೀಡುವತ್ತ ಗಮನ ಹರಿಸಬೇಕು. ರೈತರು ಬೆಳೆದ ಆಹಾರ ಉತ್ಪಾದನೆಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಖರೀದಿಸಿದರೆ ಒಕ್ಕಲುತನಕ್ಕೆ ಬೆನ್ನು ತಟ್ಟಿದಂತಾಗಲಿದೆ. ರೈತರು ಆರ್ಥಿಕವಾಗಿಯೂ ಸಬಲರಾಗಲು ಸಾಧ್ಯವಾಗಲಿದೆ ಎಂದು ಅಮರಣ್ಣ ಗುಡಿಹಾಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.