ರಾಯಚೂರು

ತಹಸೀಲ್ದಾರ್ ಕಚೇರಿ ಯಾವ ವ್ಯಾಪ್ತಿಗೆ ಬರುತ್ತದೆ!

Published On :

ಸಿಂಧನೂರು: ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಕಳೆದ ಒಂದು ವರ್ಷದಿಂದ ನಾಡಗೌಡರ ಹೆಚ್ಚುವರಿ ಭೂ ಪ್ರಕರಣ ಸೇರಿದಂತೆ ಹಲವು ಭೂ ಪ್ರಕರಣಗಳ ನೈಜ ವರದಿಯನ್ನು ಕಳುಹಿಸುವಂತೆ ತಾಲೂಕ ಆಡಳಿತಕ್ಕೆ ಸೂಚಿಸಿದ್ದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ. ವರದಿ ತಯಾರಿಸಿದರೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ಮನಸ್ಸಿಲ್ಲದೆ ತಹಸೀಲ್ದಾರ ಬಿ.ಟಿ. ಕುಮಾರಸ್ವಾಮಿ ದೀರ್ಘ ರಜೆ ಹಾಕಿದ್ದಾರೆ. ತಹಸೀಲ್ದಾರ್ ಕಚೇರಿ ಗೌರ್ನಮೆಂಟ್ ವ್ಯಾಪ್ತಿಗೆ ಬರುತ್ತದೊ......ಗೌಡರ ವ್ಯಾಪ್ತಿಗೆ ಬರುತ್ತದೊ...... ಎಂದು ಟಿಯುಸಿಐನ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ ವ್ಯಂಗ್ಯವಾಡಿದರು.
ವಿಳಂಬ ನೀತಿ: ಅವರು ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತಾಲೂಕಿನ ಜವಳಗೇರಾ ನಾಡಗೌಡರ ಭೂ ಪ್ರಕರಣವನ್ನು ಮರುಪರಿಶೀಲನೆ ಮಾಡಿ ಸಾಗುವಳಿ ಮಾಡುತ್ತಿರುವ ಬಸಾಪೂರ, ನಿಡಿಗೋಳ ದಲಿತರಿಗೆ ಭೂಸ್ವಾಧೀನ ನೀಡುವಲ್ಲಿ ತಹಸೀಲ್ದಾರ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಬಸಾಪುರ ಗ್ರಾಮದ ಜಮೀನ ಸರ್ವೆ ನಂ.41,42,43 ಮತ್ತು 31ರಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಭೂ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಶಾಸಕರಾದ ಹಂಪನಗೌಡ ಬಾದರ್ಲಿ, ಮತ್ತು ಪ್ರತಾಪಗೌಡ ಪಾಟೀಲರು ತಾಲೂಕ ಆಡಳಿತಕ್ಕೆ ಸೂಚನೆ ನೀಡಿ ಬಡದಲಿತರಿಗೆ ಭೂಸ್ವಾಧೀನ ಕೊಡಿಸುವ ನಿಟ್ಟಿನಲ್ಲಿ ಗಮನಹರಿಸಬೇಕೆಂದು ಅವರು ಒತ್ತಾಯಿಸಿದರು. ಆರ್‌ವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ, ಟಿಯುಸಿಐ ಸಂಘಟನಾ ಕಾರ್ಯದರ್ಶಿ ಬಸಪ್ಪ ಕಡಬೂರ, ಕೆಆರ್‌ಎಸ್ ತಾಲೂಕಾಧ್ಯಕ್ಷ ರಮೇಶ ಪಾಟೀಲ್ ಬೇರಗಿ,ಮುಖಂಡರಾದ ಹುಚ್ಚಪ್ಪ ಬಳಗಾನೂರ, ರಾಜಾಸಾಬ, ಸುಭಾಷ ಬಸಾಪೂರ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.