ಪದಾಧಿಕಾರಿಗಳ ಆಯ್ಕೆ
ರಾಯಚೂರು: ತಾಲೂಕಿನ ದಲಿತ ಸಾಹಿತ್ಯ ಪರಿಷತ್ತಿನ ವಿವಿಧ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು. ದಲಿತ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ತಾಯಪ್ಪ ಮಂಚ್ಲಾಪೂರು, ಕೋಶಾ ಧ್ಯಕ್ಷರಾಗಿ ಮಾರೆಪ್ಪ ಬಲ್ಲಟಗಿ, ಸಾಹಿತ್ಯಿಕ ಸಲಹೆಗಾರರಾಗಿ ಡಾ. ಗಾದೆಪ್ಪ, ಪ್ರಕಾಶನ ಸಲಹೆಗಾರರಾಗಿ ಪದ್ಮರಾಜ್ ಭಂಡಾರಿ, ನಿರ್ದೇಶಕರಾಗಿ ಮಲ್ಲೇಶ್ ನಾಯಕ ಇಡಪನೂರು, ಶರಣಪ್ಪ ದಿನ್ನಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಘವೇಂದ್ರ ಗಬ್ಬೂರು, ಮಲ್ಲೇಶ ಭೈರವ್, ಶ್ರೀನಿವಾಸ್ ಪಿ., ನರಸಪ್ಪ ಮರ್ಚೆಡ್, ಸಿದ್ಧಾರ್ಥ ವಲ್ಲಭ್ ರಾಯಚೂರು ಅವರನ್ನು ನೇಮಿಸಲಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಕೋರೆನಲ್ ತಿಳಿಸಿದ್ದಾರೆ.
ಡಿಪ್ಲೊಮಾ ಪ್ರವೇಶ: ಅವಧಿ ವಿಸ್ತರಣೆ
ರಾಯಚೂರು: ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶಕ್ಕೆ ಅವಕಾಶವನ್ನು ವಿಸ್ತರಿಸಲಾಗಿದೆ ಎಂದು ಪಾಲಿಟೆಕ್ನಿಕ್ ಕಾಲೇಜಿನ ಪ್ರಕಟಣೆ ತಿಳಿಸಿದೆ. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಸಕ್ತ ಸಾಲಿಗೆ ಪ್ರವೇಶ ಪಡೆಯಲು ಜು. 30ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ವೆಬ್ಸೈಟ್ ಢಿಢಿಢಿ.ಜಡಿಜ್ಞಛ್ಠಟಿಛಡಿಛ್ಞಛ.್ಝಟಿ ಮತ್ತು
ಢಿಢಿಢಿ.ಜ್ಝಠಟ್ಟಟಛಛಜ್ಝಟ್ಝಡಡ್ಝ್ಟಟಿ.್ಝಟಿ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
7ಕ್ಕೆ ತಾಪಂ ಸಭೆ
ರಾಯಚೂರು: ಇಲ್ಲಿನ ತಾಲೂಕು ಪಂಚಾಯತಿ10ನೇ ಸಾಮಾನ್ಯ ಸಭೆ ಆ.7 ರಂದು ನಡೆಯಲಿದೆ ಎಂದು ತಾಪಂ ತಿಳಿಸಿದೆ. ಅಂದು ಬೆಳಿಗ್ಗೆ 10.30ಕ್ಕೆ ನಗರದ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಪಿ. ಚಂದ್ರಶೇಖರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ಎಲ್ಲ ಅಧಿಕಾರಿಗಳು ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.
ನಿಷೇಧಾಜ್ಞೆ ಜಾರಿ
ರಾಯಚೂರು: ನಗರದಲ್ಲಿ ಜು.30 ರಂದು ನಡೆಯುವ ಡಿಇಡಿ ವಿಜ್ಞಾನ ಮತ್ತು ಗಣಿತ ವಿಷಯಗಳ ಮರು ಪರೀಕ್ಷೆಗಳ ಹಿನ್ನೆಲೆ ಪರೀಕ್ಷೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಈ ಬಗ್ಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶ ಹೊರಡಿಸಿದ್ದು, ನಗರದ ಪರೀಕ್ಷೆ ಕೇಂದ್ರಗಳಾದ ಟ್ಯಾಗೋರ್ ಸ್ಮಾರಕ ಪ್ರೌಢಶಾಲೆ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಸುತ್ತ ನಕಲು ಮತ್ತು ಅವ್ಯವಹಾರಗಳನ್ನು ತಡೆಯಲು 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

