ರಾಯಚೂರು

ಬ್ಯಾಂಕ್ ಖಾತೆ ಹೊಂದಿದ ಕೂಲಿಕಾರರಿಗೆ ಕೆಲಸ 'ಖಾತ್ರಿ'

Published On :

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜೂ.4
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬ್ಯಾಂಕ್‌ಖಾತೆ ಹೊಂದಿದ ಕೂಲಿಕಾರರಿಗೆ ಮಾತ್ರ ಕೆಲಸ ನೀಡಿ ಕೂಲಿ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದೆಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶರಣಬಸಪ್ಪ ತಿಳಿಸಿದರು.
10-12 ಸಾವಿರ ಕುಟುಂಬಗಳು: ತಾಲೂಕು ಪಂಚಾಯತಿ ಕಚೇರಿಯಲ್ಲಿ ಸೋಮವಾರ ಜರುಗಿದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮತ್ತು ಕೂಲಿಕಾರ ಸಂಘಟನೆಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಸುಮಾರು 50ಸಾವಿರ ಕೂಲಿಕಾರರ 10-12 ಸಾವಿರ ಕುಟುಂಬಗಳು ಇನ್ನು ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದಾರೆ. ಸರ್ಕಾರ ಕೂಲಿಕಾರರ ಖಾತೆಗೆ ನೇರ ಕೂಲಿ ಹಣ ಜಮಾ ಮಾಡುವ ಇಎಂಎಫ್‌ಎಸ್ ಯೋಜನೆ ಜಾರಿಗೆ ತಂದಿದ್ದರಿಂದ ಕೂಲಿಕಾರರು ಸಂಬಂಧಿಸಿದ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು. ಇದರಿಂದ ಕೂಲಿಕಾರರಿಗೆ ಕೆಲಸ ನೀಡುವ ಜೊತೆಗೆ ಕೂಲಿ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.
ತಾಲೂಕಿನ ಯಾವುದೇ ಗ್ರಾಮದ ಕೂಲಿಕಾರರು ಕೆಲಸಕ್ಕೆ ಬೇಡಿಕೆ ಅರ್ಜಿ ಸಲ್ಲಿಸಿದರೆ ಅಂತಹವರಿಗೆ ಕೂಡಲೇ ಕೆಲಸ ನೀಡಲಾಗುತ್ತದೆ. 2013-14ನೇ ಸಾಲಿಗೆ ತಾಲೂಕಿನ 34 ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ಅನ್ವರಿ ಹಾಗೂ ಮಟ್ಟೂರ ಗ್ರಾಪಂಗಳಿಂದ ಕ್ರಿಯಾ ಯೋಜನೆ ಬಂದಿರುವುದಿಲ್ಲ. ತಾಲೂಕಿನಿಂದ 24.49 ಕೋಟಿ ಬೇಡಿಕೆ ಸಲ್ಲಿಸಲಾಗಿದ್ದು, ಈಗಾಗಲೇ ಕೆಲಸ ಆರಂಭವಾದಲ್ಲಿ ಅಂದಾಜು 10 ಲಕ್ಷ ಕೂಲಿ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.
ಬಾಕಿ ಕೂಲಿಹಣ ಪಾವತಿಗೆ ಒತ್ತಾಯ: ತಾಲೂಕಿನ ಹೊನ್ನಳ್ಳಿ, ಕೋಠಾ, ಗೌಡೂರ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡಿದ ಕೂಲಿಕಾರರಿಗೆ ಮೂರು ತಿಂಗಳಿಂದ ಕೂಲಿ ಹಣ ಪಾವತಿಸಿರುವುದಿಲ್ಲ. ಗ್ರಾಮೀಣ ಕೂಲಿಕಾರ ಸಂಘಟನೆ ಕೂಲಿಕಾರರಿಗೆ ಮಾತ್ರ ಕೂಲಿಹಣ ನೀಡಲಾಗಿದೆ. ಆದರೆ ನೊಂದ ಕೂಲಿಕಾರರ ಸಂಘಟನೆ ಕೂಲಿಕಾರರು ಬ್ಯಾಂಕ್ ಖಾತೆ, ಜಾಬ್ ಕಾರ್ಡ್ ಹೊಂದಿದ್ದರೂ ಅವರಿಗೆ ಕೂಲಿ ಹಣ ನೀಡದೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯ ಮಾಣಿಕ್, ಅಮರಗುಂಡಪ್ಪ ಹೊನ್ನಳ್ಳಿ, ಮಲ್ಲೇಶ ಸೇರಿದಂತೆ ಜಿಲ್ಲಾ ಯೋಜನಾ ನಿರ್ದೇಶಕ ಶರಣಪ್ಪ ಅವರಿಗೆ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.