ರಾಯಚೂರು

ಸಂಕ್ಷಿಪ್ತ ಸುದ್ದಿ

Published On :

ಶಾಸಕರ ಕಚೇರಿ ಉದ್ಘಾಟನೆ
ಸಿಂಧನೂರು: ಸಿಂಧನೂರು ಕ್ಷೇತ್ರ ಶಾಸಕ ಹಂಪನಗೌಡ ಬಾದರ್ಲಿ ಅವರು ಶಾಸಕರ ಕಚೇರಿಯನ್ನು ಪ್ರವೇಶಿಸುವ ಮೂಲಕ ಉದ್ಘಾಟಿಸಿದರು. ಇದಕ್ಕೂ ಮುನ್ನ ಶಾಸಕರ ಕಚೇರಿಯಲ್ಲಿ ವಿಶೇಷ ಪೂಜೆ ನಡೆಯಿತು. ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ, ನ್ಯಾಯವಾದಿ ಎಂ.ಅಮರೇಗೌಡ, ಜಿಪಂ ಸದಸ್ಯ ಶಿವನಗೌಡ ಎಲೆಕೂಡ್ಲಗಿ, ತಾಪಂ ಮಾಜಿ ಉಪಾಧ್ಯಕ್ಷ ಶಂಭುಲಿಂಗಪ್ಪ ದಢೇಸ್ಗೂರು, ವಿಶ್ವನಾಥಸ್ವಾಮಿ ಪಗಡದಿನ್ನಿ, ಶ್ರೇಣಿಕರಾಜಶೇಠ, ನಗರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಫರ್ ಜಾಗೀರದಾರ, ಶಿವಕುಮಾರ ಜವಳಿ, ಸುರೇಶ ಶೇಠ, ಬಸವರಾಜ ಸಾಹುಕಾರ ಕುರುಕುಂದಿ, ಅಡಿವೆಪ್ಪಗೌಡ ಗೋನ್ವಾರ, ಅಶೋಕ ಶೇಠ್ ಇದ್ದರು.
ಡಿ.ಇಡಿ ಪ್ರವೇಶಕ್ಕೆ
ಅರ್ಜಿ ಆಹ್ವಾನ
ಸಿಂಧನೂರು: 2013- 14ನೇ ಸಾಲಿನ ಡಿಇಡಿ ಪ್ರಥಮ ವರ್ಷಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ ಆಸಕ್ತರು ಡಿಇಡಿ ಪ್ರವೇಶ ಪಡೆಯಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ವೆಬ್‌ಸೈಟ್ ಮೂಲಕ ಭರ್ತಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. 08535-223317 ಸಂಪರ್ಕಿಸಬಹುದು ಎಂದು ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಸುಜಾತ ಹುನೂರು ತಿಳಿಸಿದ್ದಾರೆ.
ವಿಶೇಷ ಶಾಲೆ; ಪ್ರವೇಶಕ್ಕೆ ಕರೆ
ರಾಯಚೂರು:  ಬುದ್ಧಿಮಾಂದ್ಯ ಮಕ್ಕಳ ವಿಕಾಸಕ್ಕಾಗಿ ನಗರದ ನಿಜಲಿಂಗಪ್ಪ ಕಾಲನಿಯಲ್ಲಿ ಆಶಾದೀಪ ವಿಶೇಷ ಶಾಲೆ ತೆರೆಯಲಾಗಿದೆ. ವಿಶೇಷ ತರಬೇತಿ ಹೊಂದಿದ ಶಿಕ್ಷಕರಿರುವ ಈ ಶಾಲೆ ಪ್ರವೇಶ ಪಡೆಯಲು ಜೂ.15 ಕಡೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಗಂಗಮ್ಮ ಪಾಟೀಲ್, ಆಶಾದೀಪ ವಿಶೇಷ ಶಾಲೆ, ಎಂ-124, ನಿಜಲಿಂಗಪ್ಪ ಕಾಲೋನಿ, ರಾಯಚೂರು ಇಲ್ಲಿಗೆ ಅಥವಾ ದೂ. 08532-651477, 96633 24234ಗೆ ಸಂಪರ್ಕಿಸಬಹುದು.
ರಿಯಾಯಿತಿ ಬಸ್‌ಪಾಸ್; ಅರ್ಜಿ ಕರೆ
ರಾಯಚೂರು: ಪ್ರಸಕ್ತ ಸಾಲಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸ್ ವಿತರಿಸಲಾಗುತ್ತಿದೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ತಿಳಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ಗಳನ್ನು ಜೂ.8ರಿಂದ ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ. ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಶುಲ್ಕದೊಂದಿಗೆ ಶಾಲಾ ಮುಖ್ಯಸ್ಥರಿಗೆ ಸಲ್ಲಿಸಬೇಕು.
ನಾಳೆಯಿಂದ ಪ್ರತಿಷ್ಠಾಪನೆ ವಾರ್ಷಿಕೋತ್ಸವ, ಆರಾಧನೆ
ರಾಯಚೂರು: ದೇವದುರ್ಗದ ಶ್ರೀಮದ್ಯಾತಗಿರಿ ಮಠದಲ್ಲಿ ವಿದ್ಯಾದಾಯಿನಿ ಶ್ರೀಸರಸ್ವತಿ ದೇವಿ ಪ್ರತಿಷ್ಠಾಪನೆ ತೃತೀಯ ವಾರ್ಷಿಕೋತ್ಸವ ಹಾಗೂ ಶ್ರೀಗುರು ಕಾಳಹಸ್ತೇಂದ್ರ ಮಹಾಸ್ವಾಮಿ ಆರಾಧನಾ ಮಹೋತ್ಸವ ಕಾರ್ಯಕ್ರಮಗಳು ಜೂ. 10ರಿಂದ 13ರವರೆಗೆ ನಡೆಯಲಿವೆ. ಜೂ.10ರಂದು ಶ್ರೀಸರಸ್ವತಿ ದೇವಿ ಪ್ರತಿಷ್ಠಾಪನಾ ತೃತೀಯ ವಾರ್ಷಿಕೋತ್ಸವ ಅಂಗವಾಗಿ ನವಕ ಕಲಾ ಹೋಮ, ನವಕ ಕಲಾಶಾಭಿಷೇಕ, ಪಂಚಾಮೃತಾಭಿಷೇಕ ನೆರವೇರಲಿದೆ. ಜೂ. 11ರಂದು ಪಂಚಾಮೃತಾಭಿಷೇಕ, ಮಹಾಪೂಜೆ ಆಯೋಜಿಸಿದ್ದು, ಜೂ. 13ರಂದು ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಪಂಚಾಮೃತಾಭಿಷೇಕ, ವೇದ ಪಾರಾಯಣ, ಮಹಾಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಾಲಿದ ವಿದ್ಯುತ್ ಪರಿವರ್ತಕ: ಅಪಾಯದ ಭೀತಿಯಲ್ಲಿ ಜನತೆ
ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನ ಬಿಸಿಎಂ ಹಾಸ್ಟೆಲ್ ಬಳಿ ವಿದ್ಯುತ್ ಪರಿವರ್ತಕ ಅಳವಡಿಸಿದ್ದರಿಂದ ಕಂಬಗಳು ವಾಲಿವೆ. ಸಾರ್ವಜನಿಕರು ಅಪಾಯದ ಭೀತಿ ಎದುರಿಸುತ್ತಿದ್ದಾರೆ. ಪರಿವರ್ತಕದ ಪಕ್ಕದಲ್ಲಿರುವ ಕಾಲುದಾರಿಯಲ್ಲಿ ಸಾರ್ವಜನಿಕರು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ವಾಲಿದ ಕಂಬದಿಂದಾಗಿ ಆತಂಕ ಉಂಟಾಗಿದೆ. ಕೆಲ ದಿನಗಳಿಂದ ಪರಿವರ್ತಕ ಇದೇ ಸ್ಥಿತಿಯಲ್ಲಿ ಇದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಯಾವುದೇ ರೀತಿಯ ಅಪಾಯ ಸಂಭವಿಸುವ ಮುಂಚೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಇದನ್ನು ಗಮನಿಸಿ ದುರಸ್ತಿಗೆ ಮುಂದಾಗಬೇಕೆನ್ನುವುದು ಸಾರ್ವಜನಿಕರು ಒತ್ತಾಯವಾಗಿದೆ.
ಗೌಡನಬಾವಿಯಲ್ಲಿ ಧರೆಗುರುಳಿದ ವಿದ್ಯುತ್ ಕಂಬಗಳು
ಸಿಂಧನೂರು: ತಾಲೂಕಿನ ಗೌಡನಬಾವಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆ ಹಾಗೂ ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಧರೆಗುರುಳಿವೆ. ಉರುಳಿ ಬಿದ್ದು ಒಂದು ವಾರವಾದರೂ ಜೆಸ್ಕಾಂ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಿಸಿಲ್ಲ. ಇದರಿಂದಾಗಿ ಆ ಗ್ರಾಮವು ವಾರದಿಂದ ಕತ್ತಲಲ್ಲಿದೆ. ವಿದ್ಯುತ್ ಪ್ರವಹಿಸುವ ತಂತಿಗಳು ರಸ್ತೆಯ ಮೇಲೆ ಬಿದ್ದಿರುವುದರಿಂದ ವಾಹನ ಚಾಲಕರು, ಪಾದಾಚಾರಿಗಳು ತಿರುಗಾಡಲು ಭಯಪಡುತ್ತಿದ್ದಾರೆ. ದನಗಾಹಿಗಳು ತಿಳಿಯದೇ ದನ ಕರುಗಳನ್ನು ಹೊಡೆದುಕೊಂಡು ಹೋದರೆ ಅವು ಪ್ರಾಣಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆಗಳಿವೆ. ಜೆಸ್ಕಾಂ ಅಧಿಕಾರಿಗಳು ಕೂಡಲೇ ವಿದ್ಯುತ್ ಕಂಬಗಳನ್ನು ಅವುಗಳ ಸ್ಥಾನಗಳಿಗೆ ನಿಲ್ಲಿಸಿ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮದ ಹನುಮಂತಪ್ಪ, ಬಸವರಾಜ, ತಿಪ್ಪಣ್ಣ ಮತ್ತಿತರರು ಒತ್ತಾಯಿಸಿದ್ದಾರೆ.
ಮುಖ್ಯ ರಸ್ತೆ ಕಂಬಗಳಿಗೆ ಬೆಳಕಿನ ಭಾಗ್ಯ ಎಂದು?  
ಸಿಂಧನೂರು: ನಗರದ ಮುಖ್ಯ ರಸ್ತೆಯ ವಿದ್ಯುತ್ಕ್‌ಂಬಗಳು  ಗರಡು ಗಂಬದಂತೆ ನಿಂತಿವೆ. ಅವುಗಳಿಗೆ ಬೆಳಕಿನ ಭಾಗ್ಯ ದೊರೆತಿಲ್ಲ. ಕಳೆದ ಮೂರ್ನಾಲ್ಕು ತಿಂಗಳಿಂದ ನಗರಸಭೆಯವರು ಮುಖ್ಯ ರಸ್ತೆಯ ವಿದ್ಯುತ್ ಕಂಬಳನ್ನು ಗಮನಿಸಿಲ್ಲವೆಂದು ಮುಖ್ಯ ರಸ್ತೆಯ ವ್ಯಾಪಾರಿಗಳು ದೂರಿದ್ದಾರೆ. ವಿದ್ಯುತ್ ಕಂಬಗಳಿಗೆ ಬಲ್ಬ್‌ಗಳನ್ನು ಹಾಕದೆ ಇರುವುದರಿಂದ ವಾಹನ ಸವಾರರಿಗೆ, ಪಾದಾಚಾರಿಗಳಿಗೆ ತೀವ್ರ ತೊಂದರೆಯಾಗಿದೆ.
ನಗರಸಭೆ ಸದಸ್ಯರು ಕಳೆದ ಎರಡು ತಿಂಗಳ ಹಿಂದೆ ಆಯ್ಕೆಯಾದರೂ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಸರ್ಕಾರ ಘೋಷಣೆ ಮಾಡದಿರುವುದರಿಂದ ನಗರಸಭೆಯಲ್ಲಿ ಅಧಿಕಾರಿಗಳದ್ದೇ ಕಾರುಬಾರಾಗಿದೆ. ರಾತ್ರಿ ವೇಳೆ ಸಂಚರಿಸುವುದು ಯಾತನಾದಾಯಕ. ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗುವವರಿಗೂ ತೀವ್ರ ತೊಂದರೆಯಾಗುತ್ತದೆ. ಇದರಿಂದ ಕೆಲವೊಮ್ಮೆ ಅಪಘಾತಗಳು ಉಂಟಾಗುವ ಸಂಭವವೂ ಇರುತ್ತದೆ. ನಗರಸಭೆ ಪೌರಾಯುಕ್ತ ನಾಸೀರ್ ಅಲಿ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.