ರಾಯಚೂರು

ಸಾಯಿಬಾಬಾ ಕೊಡುಗೆ ಅಪಾರ

Published On :

ಲಿಂಗಸ್ಗೂರು: ಸಮಾಜದಲ್ಲಿನ ಜಾತಿ, ಭೇದ ಮರೆದು ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ಮೂಲಕ ಆಸೆ, ಆಕಾಂಕ್ಷೆ ತೊರೆದು ನಿಸ್ವಾರ್ಥ ಬದುಕು ಸಾಗಿಸಿದ ಶಿರಡಿ ಸಾಯಿ ಬಾಬಾರ ಕೊಡುಗೆ ಅಪಾರ ಎಂದು ಮದ್ರಾಸಿನ ಸಾಫ್ಟ್‌ವೇರ್ ಕಂಪನಿ ಅಧ್ಯಕ್ಷ ಕೆ.ವಿ.ರಮಣಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸಾಯಿ ಮಂದಿರದ ಐದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಿರಡಿ ಸಾಯಿ ಸೇವಾ ಸಮಿತಿಯಿಂದ ಶನಿವಾರ ಸಂಜೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿರಡಿ ಸಾಯಿಬಾಬಾ ಅವರು ಎಲ್ಲ ಜಾತಿ, ಧರ್ಮದ ಜನಾಂಗವನ್ನು ಸಮಾರಂತೆ ಕಾಣುವ ಜೊತೆಗೆ ಅವರ ಸಮಾಜಕ್ಕಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯಿಂದ ಜನಮಾನಸದಲ್ಲಿ ಚಿರಾಯುವಾಗಿ ಉಳಿದಿದ್ದಾರೆ. ಶಿರಡಿ ಸಾಯಿ ಬಾಬಾರನ್ನು ಭಕ್ತಿ ಸಮರ್ಪಣಾ ಮನೋಭಾವದಿಂದ ಸ್ಮರಿಸಿ ಅವರ ದರ್ಶನ ಪಡೆದರೆ ದುಷ್ಟರು ಸನ್ಮಾರ್ಗದ ದಾರಿಯಲ್ಲಿ ನಡೆಯುತ್ತಾರೆ.
ಪ್ರತಿನಿತ್ಯ ಐದು ಮನೆಗಳಲ್ಲಿ ಭಿಕ್ಷೆ ಬೇಡಿ ಪ್ರಾಣಿಗಳು, ಗೆಳೆಯರೊಂದಿಗೆ ಹಂಚಿಕೊಂಡು ತಿನ್ನುವ ಬಾಬಾರವರ ದರ್ಶನ ಪಡೆದರೆ ಪುಣ್ಯ ಲಭಿಸುವುದಲ್ಲದೆ ಒದಗಿಬಂದ ಸಂಕಷ್ಟಗಳು ದೂರವಾಗಲಿವೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಿರಡಿಯ ಸಾಯಿ ಆಶ್ರಮ ನಿರ್ಮಾಣ ಮಾಡಲು 111 ಕೋಟಿ ದೇಣಿಗೆ ನೀಡಿದ ಕೆ.ವಿ.ರಮಣಿ ಅವರು 151 ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, 100 ಬಡ ಜನರಿಗೆ ರಗ್ಗು (ಬ್ಲಾಂಕೆಟ್) ವಿತರಿಸಿದರು.
ಸಮಾರಂಭದಲ್ಲಿ ಬೆಂಗಳೂರು ಮಲ್ಲೇಶ್ವರಂ ಸಾಯಿ ಮಂದಿರದ ವ್ಯವಸ್ಥಾಪಕ ಭಾಸ್ಕರ್, ನ್ಯಾಯಾಧೀಶ ಮಹಾದೇವಯ್ಯ, ಸಾಯಿ ಸೇವಾ ಸಮಿತಿ ಅಧ್ಯಕ್ಷ ಎಂ.ಪ್ರತಾಪಶೆಟ್ಟಿ, ಬಸವರಾಜಗೌಡ ಗಣೇಕಲ್, ಪ್ರಕಾಶ ಸಿಂಧೆ, ಶ್ರೀನಿವಾಸ ಕೊಳ್ಳಿ, ರಮೇಶ ಕಂಡೇಲವಾಲ, ಗುರುನಾಥ ರಾಯಭಾಗಿ, ರಾಚಣ್ಣ ಜಾಗಟಗಲ್, ಚಂದ್ರಶೇಖರ ಪಾಟೀಲ್ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.