ರಾಯಚೂರು

ಕಿರು ಕದನಕ್ಕೆ ಇಂದು ಮತದಾನ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.6
ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾ.7ರಂದು ಮತದಾನ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಜಿಲ್ಲೆಯ ಪಾಲಿಕೆ, ನಗರ- ಪುರಸಭೆಗಳು, ಪಟ್ಟಣ ಪಂಚಾಯ್ತಿ ಸೇರಿದಂತೆ 8 ಸ್ಥಳೀಯ ಸಂಸ್ಥೆಗಳಲ್ಲಿನ 213 ಸ್ಥಾನಗಳಿಗೆ 5.12 ಲಕ್ಷ ಮತದಾರರು ಮತದಾನ ಮಾಡಲಿದ್ದಾರೆ.
ಮತಗಳ ಏಣಿಕೆ- ಮಾರ್ಚ್ 11ರಂದು(ಬೆ.8 ಗಂಟೆಯಿಂದ)
ಈ 8 ಸ್ಥಳೀಯ ಸಂಸ್ಥೆಗಳಲ್ಲಿ 5,12,442 ಮತದಾರರು ಇದ್ದು, ಈ ಪೈಕಿ 2,62,481 ಪುರುಷ ಮತದಾರರು ಹಾಗೂ 2,59,187 ಮಹಿಳಾ ಮತದಾರರು ತಮ್ಮ ಮತದಾನದ ಅಧಿಕಾರ ಚಲಾಯಿಸಲಿದ್ದಾರೆ. ಈ ವ್ಯವಸ್ಥೆಗಾಗಿ 537 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಗುಲ್ಬರ್ಗ ಪಾಲಿಕೆ ಮತಗಟ್ಟೆಗಳ ನೋಟ
ಒಟ್ಟು ಮತಗಟ್ಟೆಗಳು- 368
ಸೂಕ್ಷ್ಮ ಮತಗಟ್ಟೆಗಳು- 76
ಅತಿಸೂಕ್ಷ್ಮ ಮತಗಟ್ಟೆಗಳು- 49
ಸಹಾಯವಾಣಿ: ಮತದಾರರಿಗೆ ಏನಾದರೂ ಸಂದೇಹಗಳಿದ್ದು, ಪರಿಹಾರಕ್ಕೆ 5 ಲೈನ್‌ಗಳ ಸಾಮರ್ಥ್ಯದ ದೂ. 08472- 223322 ಕರೆ ಮಾಡಬಹುದು. ಇದರ ಜೊತೆಗೆ 7 ತ್ವರಿತ ಕಾರ್ಯಾಚರಣೆ ಪಡೆಗಳ ರೂಪದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಮತದಾನ ದಿನದ ಅಗತ್ಯಕ್ಕನುಗುಣವಾಗಿ ಈ ತಂಡಗಳು ಕೆಲಸ ಮಾಡಲಿವೆ.
ಅಪರಾಧ ಹಿನ್ನೆಲೆಯ 45 ಮಂದಿ ಕಣದಲ್ಲಿ: ಗುಲ್ಬರ್ಗ ಮಹಾನಗರ ಪಾಲಿಕೆಯ 55 ಸ್ಥಾನಗಳಿಗಾಗಿ 328 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರ ಪೈಕಿ 45 ಜನ ವಿವಿಧ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಹೆಸರು ಪ್ರಸ್ತಾಪವಾದರೇ ಆಗಿದ್ದಾರೆ. ಇಂತಹ ಆತಂಕದ ಸಂಗತಿ ಜಿಲ್ಲೆಯ ಪೊಲೀಸ್ ನಡೆಸಿರುವ ವಿಶ್ಲೇಷಣೆಯಿಂದ ತಿಳಿದು ಬಂದಿದೆ.
ವಿಡಿಯೋ ಕಣ್ಣು: ಅತಿ ಸೂಕ್ಷ್ಮ ಮತಗಟ್ಟೆಗಳಿರುವ ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಯ ಇಡೀ ಮತದಾನ ಪ್ರಕ್ರಿಯೆ ವಿಡಿಯೋ ಚಿತ್ರಣ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಹೇಳಿದ್ದಾರೆ.

ಮತಗಟ್ಟೆಗಳ ಸಂಪೂರ್ಣ ವಿವರ

 ಗುಲ್ಬರ್ಗ ಮಹಾನಗರ ಪಾಲಿಕೆ- 55 ವಾರ್ಡ್, ಕಣದಲ್ಲಿ 328 ಅಭ್ಯರ್ಥಿಗಳು, ಮತಗಟ್ಟೆಗಳು- 356, ಒಟ್ಟು ಮತದಾರರು-3,63,423(ಪು- 1,84,742, ಮ- 1,77,681)
 ಶಹಾಬಾದ್ ನಗರಸಭೆ- 31 ವಾರ್ಡ್, ಕಣದಲ್ಲಿ 144 ಅಭ್ಯರ್ಥಿಗಳು- 35 ಮತಗಟ್ಟೆಗಳು(ಅಸೂ- 4, ಸೂ- 11), ಒಟ್ಟು ಮತದಾರರು 34,242(ಪು- 17,200, ಮ- 17,047)
 ಚಿತ್ತಾಪುರ ಪುರಸಭೆ- 23 ವಾರ್ಡ್, 26 ಮತಗಟ್ಟೆಗಳು(ಅಸೂ- 3, ಸೂ- 6), ಕಣದಲ್ಲಿ 101 ಅಭ್ಯರ್ಥಿಗಳು, ಒಟ್ಟು ಮತದಾರರು- 20,141(ಪು- 10,072, ಮ- 10,068)
 ಆಳಂದ ಪುರಸಭೆ- 23 ವಾರ್ಡ್, ಕಣದಲ್ಲಿ 101 ಅಭ್ಯರ್ಥಿಗಳು, 24 ಮತಗಟ್ಟೆಗಳು(ಅಸೂ- 4, ಸೂ- 8), 22,607(ಪು- 11,930, ಮ- 10,677)
 ಸೇಡಂ ಪುರಸಭೆ- 23 ವಾರ್ಡ್, ಕಣದಲ್ಲಿ 103 ಅಭ್ಯರ್ಥಿಗಳು, 23 ಮತಗಟ್ಟೆಗಳು(ಅಸೂ- 3, ಸೂ- 6), ಒಟ್ಟು ಮತದಾರರು 21,763 (ಪು- 11,031, ಮ- 10,732)
 ಚಿಂಚೋಳಿ ಪಪಂ- 18 ವಾರ್ಡ್‌ಗಳು, ಕಣದಲ್ಲಿ 93 ಅಭ್ಯರ್ಥಿಗಳು, 18 ಮತಗಟ್ಟೆಗಳು(ಅಸೂ- 3, ಸೂ- 6), ಒಟ್ಟು ಮತದಾರರು- 12,417(ಪು- 6,328, ಮ- 6,079)
 ಅಫಜಲ್ಪುರ ಪಪಂ- 20 ವಾರ್ಡ್‌ಗಳು, ಕಣದಲ್ಲಿ 66 ಅಭ್ಯರ್ಥಿಗಳು, 20 ಮತಗಟ್ಟೆಗಳು(ಅಸೂ- 3, ಸೂ- 6), ಒಟ್ಟು ಮತದಾರರು- 17,626(ಪು- 9,118, ಮ- 8,445)
 ಜೇವರ್ಗಿ ಪಪಂ- 20 ಸದಸ್ಯರು, ಕಣದಲ್ಲಿ 69 ಅಭ್ಯರ್ಥಿಗಳು, 20 ಮತಗಟ್ಟೆಗಳು(ಅಸೂ- 3, ಸೂ- 6), ಒಟ್ಟು ಮತದಾರರು- 13,601(ಪು- 6,730, ಮ- 6,871)
 1 ಮಹಾನಗರ ಪಾಲಿಕೆ, 1 ನಗರಸಭೆ, 3 ಪುರಸಭೆ, 3 ಪಟ್ಟಣ ಪಂಚಾಯ್ತಿಗಳ ಒಟ್ಟು ವಾರ್ಡ್‌ಗಳು 213, ಕಣದಲ್ಲಿ 1033 ಅಭ್ಯರ್ಥಿಗಳು, ಒಟ್ಟು ಮತದಾರರು- 5,12,442(ಪು- 2,62,481, ಮ- 2,59,187)
 ಒಟ್ಟು ಮತಗಟ್ಟೆಗಳು- 537
 ಅತಿ ಸೂಕ್ಷ್ಮ- 71
 ಸೂಕ್ಷ್ಮ- 133

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.