ರಾಯಚೂರು

ವಿದ್ಯಾವಂತರಿಂದಲೇ ಭ್ರಷ್ಟಾಚಾರ: ಚಿಂತಕ ಶಿವಣ್ಣ ಕಳವಳ

Published On :

ಸಿಂಧನೂರು: ಇತ್ತೀಚಿಗೆ ಬಹಳಷ್ಟು ಕಡೆ ವಿದ್ಯಾವಂತರಿಂದಲೇ ಭ್ರಷ್ಟಾಚಾರ, ಅತ್ಯಾಚಾರ ಹಾಗೂ ಅನ್ಯಾಯಗಳು ಹೆಚ್ಚಾಗುತ್ತಿರುವುದು ಕಳವಳದ ಸಂಗತಿ. ವಿದ್ಯಾರ್ಥಿಗಳಿಗೆ ಚಿಕ್ಕವರಿರುವಾಗಲೇ ಅವರಿಗೆ ನೈತಿಕ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳ ಗುಣಗಳನ್ನು ತಿಳಿಹೇಳಬೇಕು ಎಂದು ಬಸವ ಯೋಗ ಸಮಿತಿಯ ಅಧ್ಯಕ್ಷ, ಚಿಂತಕರಾದ ಶಿವಣ್ಣ ಹ. ಸಣ್ಣಪ್ಪನವರ ಹೇಳಿದರು.
 ಅವರು ನಗರದ ಆದಿತ್ಯ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕು ಕಸಾಪ ಇತ್ತೀಚೆಗೆ ಹಮ್ಮಿಕೊಂಡಿದ್ದ ದಿ.ಎಂ.ಎಸ್. ಗೌಡ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಶಿಕ್ಷಣದಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ವಿಷಯ ಕುರಿತು ತಿಳಿಸಿದರು.
 ತಾಲೂಕ ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ, ದತ್ತಿ ದಾನಿಗಳಾದ ದಿ.ಎಂ.ಎಸ್. ಗೌಡ ಸುಪುತ್ರ ಶ್ರೀರಾಮ, ಉಪನ್ಯಾಸಕ ಅಶೋಕ ಬೆನ್ನೂರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಉಪನ್ಯಾಸಕ ಹನುಮೇಶ ಸ್ವಾಗತಿಸಿದರು. ಉಪನ್ಯಾಸಕ ಶರಣಬಸವ ವಂದಿಸಿದರು. ಲಕ್ಷ್ಮೀಕಾಂತ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.