ರಾಯಚೂರು

ಅನರ್ಹರ ಕೈ ಬಿಡಲು ಕ್ಷೇಮಾಭಿವೃದ್ಧಿ ಸಂಘ ಒತ್ತಾಯ

Published On :

ದೇವದುರ್ಗ: ಪಟ್ಟಣದ ಸರ್ಕಾರಿ ಜಾಗೆ ಮಾಳೇಗಡ್ಡಿ ಪ್ರದೇಶದಲ್ಲಿ ವಸತಿ ಯೋಜನೆಯಡಿ ಆಯ್ಕೆಯಾದ 142 ಜನ ಫಲಾನುಭವಿಗಳ ಪೈಕಿ 52 ಜನ ಅಲೆಮಾರಿ ಜನಾಂಗದವರ ಹೆಸರು ಪಟ್ಟಿಯಿಂದ ಕೈ ಬಿಡುವಂತೆ ಕರ್ನಾಟಕ ರಾಜ್ಯ ಅಲೇಮಾರಿ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನರಸಪ್ಪ ಬೈಲುಪತ್ತಾರ, ಪುರಸಭೆ ಮಾಜಿ ಸದಸ್ಯ ಈರಣ್ಣ ರುದ್ರಾಕ್ಷಿ ಒತ್ತಾಯಿಸಿದ್ದಾರೆ.
  ಈ ಕುರಿತು ಈಚೆಗೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿರುವ ಅವರು, ಈ ಜಾಗದಲ್ಲಿ 25 ವರ್ಷಗಳಿಂದ ವಿವಿಧ ಜಾತಿಯ ಅಲೆಮಾರಿಗಳಾದ ಬುಡ್ಗ ಜಂಗಮ, ಹಗಲು ವೇಷಗಾರರು, ಬೈಲುಪತ್ತಾರು, ಸಿಳ್ಳೆ ಕ್ಯಾತರು, ಮೋಡಿಕಾರರು, ಗೊಂದಳ್ಳಿ, ಗಿಸಾಡಿ, ಚನ್ನದಾಸರು, ಸುಡಗಾರು ಸಿದ್ದರು ವಾಸವಾಗಿದ್ದಾರೆ. ಅವರು ವಾಸವಿದ್ದ ಅಲೆಮಾರಿ ಗಳಿಗೆ ಕೋರ್ಟ್ ಆದೇಶದಂತೆ ಜಾಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
  52 ಜನ ಫಲಾನುಭವಿಗಳು ಮಾಜಿ ಶಾಸಕ ಯಲ್ಲಪ್ಪ ಅಕ್ಕರಕಿ ಅವರ ಅವಧಿಯಲ್ಲಿ ವಸತಿ ಯೋಜನೆಯಡಿ ಸೌಲಭ್ಯ ಪಡೆದಿದ್ದು, ಯಲ್ಲಾಲಿಂಗ ಕಾಲನಿ ನಿರ್ಮಾಣವಾಗಿದೆ. ರಾಜೀವ ಗಾಂಧಿ ನವ ನಗರದಲ್ಲಿ, ಮಾಜಿ ಸಚಿವರಾದ ಕೆ.ಶಿವನಗೌಡ ನಾಯಕ ಅವಧಿಯಲ್ಲಿ ವಾಜಪೇಯಿ ಆಶ್ರಯ ವಸತಿ ಯೋಜನೆಯಡಿ ಲಾಭ ಪಡೆದು ಪುನಹ ಮಾಳೆಗಡ್ಡಿ ಜಾಗದಲ್ಲಿ ವಸತಿ ಯೋಜನೆ ಅಡಿ ನಿವೇಶನಕ್ಕೆ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿದರು.
  ಈ ಹಿನ್ನೆಲೆಯಲ್ಲಿ ಕೂಡಲೇ ಸಂಪೂರ್ಣ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಸಂಘದ ಅಧ್ಯಕ್ಷ ನರಸಪ್ಪ ಬೈಲುಪತ್ತಾರ, ಮಾಜಿ ಪುರಸಭೆ ಸದಸ್ಯರಾದ ಈರಣ್ಣ ರುದ್ರಾಕ್ಷಿ,  ಇಸ್ಮಾಯಿಲ್ ಕಾಲೇಗಾರ, ಸಂಘದ ಜಿಲ್ಲಾ ಅಧ್ಯಕ್ಷ ಕೆ.ಶಿವರಾಜ ರುದ್ರಾಕ್ಷಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.