ಅಲೆಮಾರಿಗಳಿಗೆ ಹಕ್ಕುಪತ್ರ: ಪಟ್ಟಿ ಕೈಬಿಡಲು ಒತ್ತಾಯ
ರಾಯಚೂರು: ದೇವದುರ್ಗ ಪುರಸಭೆ ವ್ಯಾಪ್ತಿಯ ಸರ್ಕಾರಿ ಜಾಗೆ ಮಾಳೆಗಡ್ಡಿಯಲ್ಲಿ ವಾಸಿಸುವ 142 ಜನರ ಪೈಕಿ ಅಲೆಮಾರಿ ಜನಾಂಗಕ್ಕೆ ಸೇರಿದ 92 ಜನರಲ್ಲಿ 52 ಫಲಾನುಭವಿಗಳ ಹೆಸರನ್ನು ಹಕ್ಕುಪತ್ರ ವಿತರಣೆಯ ಆಯ್ಕೆ ಪಟ್ಟಿಯಿಂದ ಕೈಬಿಡುವಂತೆ ಒತ್ತಾಯಿಸಿ ರಾಜ್ಯ ಅಲೆಮಾರಿ ಬುಡ್ಗಜಂಗಮ(ಪರಿಶಿಷ್ಟ ಜಾತಿ) ಕ್ಷೇಮಾಭಿವೃದ್ಧಿ ಸಂಘ ಮನವಿ ಸಲ್ಲಿಸಿದೆ.
ಈ ಕುರಿತು ಬುಧವಾರ ನಗರದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ದೇವದುರ್ಗ ಪಟ್ಟಣದ ಸರ್ಕಾರಿ ಜಾಗ 8.15 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಗಳಿಗೆ ಸೇರಿದವರು ಕಳೆದ 25 ವರ್ಷದಿಂದ ವಾಸವಾಗಿದ್ದಾರೆ. ಇವರಲ್ಲಿ ಸುಡಗಾಡ ಸಿದ್ದರಿಗೆ ಮಾತ್ರ ಸರ್ಕಾರದ ಸೌಲಭ್ಯ ದೊರೆತಿವೆ.
ಅನೇಕರನ್ನು ಪುನಾ ಆಯ್ಕೆ: ಸರ್ಕಾರದಿಂದ ವಿವಿಧ ಸೌಲತ್ತುಗಳನ್ನು ಪಡೆದವರ ಹೆಸರನ್ನೂ ಆಡಳಿತ ಅವರಿರುವ ನಿವೇಶನದ ಹಕ್ಕುಪತ್ರ ನೀಡಲು ಸಿದ್ಧಪಡಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಅರ್ಹರನ್ನು ಕಡೆಗಣಿಸಿ ಈಗಾಗಲೇ ದೇವದುರ್ಗ ಪಟ್ಟಣದ ವಿವಿಧೆಡೆ ಸ್ವಂತ ಮನೆಗಳನ್ನು ನಿರ್ಮಿಸಿಕೊಂಡಿರುವ ಅನೇಕರನ್ನು ಪುನಾ ಆಯ್ಕೆ ಮಾಡಲಾಗಿದೆ ಎಂದು ದೂರಿದರು.
ಸೇರ್ಪಡೆ ಒತ್ತಾಯ: 2011ರಲ್ಲಿ ನಡೆಸಿದ ಜನಗಣತಿಯಂತೆ ಮಾಳೆಗಡ್ಡಿ ಪ್ರದೇಶದಲ್ಲಿ 142 ಅಲೆಮಾರಿ ಕುಟುಂಬಗಳಿದ್ದು, ಅವುಗಳಲ್ಲಿ ಸದ್ಯ ಕೇವಲ 52 ಅಲೆಮಾರಿ ಕುಟುಂಬಗಳ ಫಲಾನುಭವಿಗಳ ಪಟ್ಟಿ ತಯಾರಿಸಲಾಗಿದೆ. ಇನ್ನೂ 10 ಕುಟುಂಬಗಳು ಪಟ್ಟಿಯಿಂದ ಕೈಬಿಟ್ಟು ಹೋಗಿವೆ. ಸಂಘಟನೆಯಿಂದ ಅಂಥ 10 ಕುಟುಂಬಗಳ ವಿವರ ನೀಡಿದ್ದು, ಅವರ ಹೆಸರನ್ನು ಫಲಾನುಭವಿಗಳ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕು ಆಡಳಿತದಿಂದ ಮಾಳೆಗಡ್ಡಿ ಪ್ರದೇಶದ ಹಕ್ಕುಪತ್ರ ವಿತರಣೆಗೆಂದು ಸಿದ್ಧಪಡಿಸಿದ ಪಟ್ಟಿಯಲ್ಲಿ ಅನರ್ಹರು ಸೇರಿದ್ದಾರೆ. ಒಟ್ಟು 92 ಅಲೆಮಾರಿಗಳ ಕುಟುಂಬದ ಪೈಕಿ 62 ಕುಟುಂಬಗಳಿಗೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಡಿಸಿ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸಂಘಟನೆಯ ಶಿವರಾಜ್ ರುದ್ರಾಕ್ಷಿ, ಇಸ್ಮಾಯಿಲ್ ಕಾಲೇಗಾರ್, ಈರಣ್ಣ ರುದ್ರಾಕ್ಷಿ, ನರಸಪ್ಪ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

