ಭಯೋತ್ಪಾದನೆ ವಿರುದ್ಧ ಒಗ್ಗಟ್ಟು ಪ್ರದರ್ಶನ ಅವಶ್ಯ: ಸಂಜಯ
ಚಿತ್ತಾಪುರ: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ ಹೆಚ್ಚಾಗಿ ಭದ್ರತೆಗೆ ಧಕ್ಕೆಯುಂಟು ಮಾಡಲು ಕೆಲವು ದೇಶ ದ್ರೋಹಿಗಳು ಸಂಚು ನಡೆಸುತ್ತಿದ್ದಾರೆ. ಇವುಗಳನ್ನು ಹಿಮ್ಮೆಟ್ಟಿನಲು ದೇಶದ ಪ್ರತಿಯೊಬ್ಬರು ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿದಲ್ಲಿ ಜಯ ಸಾಧ್ಯ ಎಂದು ಆರ್ಎಸ್ಎಸ್ ಜಿಲ್ಲಾ ಪ್ರಚಾರಕ ಸಂಜಯ ನಾಯಕ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ನಡೆದ ಆರ್ಎಸ್ಎಸ್ ಪಥ ಸಂಚಲನ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಅನೇಕ ಮಹನೀಯರು ಹಿಂಸೆ ಮಾರ್ಗ ತೊರೆದು ಶಾಂತಿ ಮಾರ್ಗದ ಮೂಲಕ ದೇಶದ ಸ್ವಾತಂತ್ರ್ಯ ಗಳಿಸಿದರು. ಶಾಂತಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತುಪಡಿಸಿದರು ಎಂದರು.
ಚಿರಂಜೀವಿ ಶಿಲ್ಪಿ ಮತ್ತು ವಿಶ್ವನಾಥ ಸಿಂಪಿ ಪ್ರಾರ್ಥನೆ ಗೀತೆ ಹಾಡಿದರು. ರವಿ ಕುಲ್ಕರ್ಣಿ ಸ್ವಾಗತಿಸಿದರು. ರವೀಂದ್ರ ಹಡಪದ ವಂದಿಸಿದರು. ಅಕ್ಕಮಹಾದೇವಿ ಮಂದಿರದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚನ ನಡೆಸಲಾಯಿತು. ಸಂಚಲನ ಉದ್ದಕ್ಕೂ ಬೀದಿಯಲ್ಲಿ ಸ್ವಾಗತ, ರಂಗೋಲಿ ಹಾಗೂ ವಿವಿಧ ಚಿತ್ರಕಲೆಗಳು, ಹೂವಿನ ಸುರಿಮಳೆ ಹಾಗೂ ಜನರ ಜಯಘೋಷ ಆಕರ್ಷಕವಾಗಿತ್ತು. ನಾಗಾವಿ ಚೌಕಕ್ಕೆ ಆಗಮಿಸಿದ ಪಥ ಸಂಚಲನವನ್ನು ಆರತಿ ಮೂಲಕ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

