ರಾಯಚೂರು

ಕಂಪನಿ ಕೃಷಿ ವಿರೋಧಿಸಿ 48 ತಾಸು ಧರಣಿ

Published On :

ಡಿಸಿ ಕಚೇರಿ ಎದುರು ರೈತ- ಕೂಲಿಕಾರರ ಕೃಷಿ ರಕ್ಷಣೆಗೆ ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಟಿ ರಾಯಚೂರು ಟಿ ನ.7
ಕಂಪನಿ ಕೃಷಿ ವಿರೋಧಿಸಿ ಹಾಗೂ ರೈತ-ಕೂಲಿಕಾರರ ಕೃಷಿ ರಕ್ಷಣೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನ.7 ರಿಂದ 48 ಗಂಟೆಗಳ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಕೃಷಿ ಅವಲಂಬಿತ ರೈತರು ಮತ್ತು ಕೂಲಿಕಾರರು ಅನೇಕ ಕಷ್ಟಗಳನ್ನು ಎದುರಿಸುತ್ತಾ ಬದುಕುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರ ಸಹಾಯಕ್ಕೆ ಬರುತ್ತಿಲ್ಲ. ದೇಶ-ವಿದೇಶಗಳ ಶ್ರೀಮಂತರನ್ನು ಮತ್ತು ಬಂಡವಾಳಗಾರರನ್ನು ಖುಷಿ ಪಡಿಸಲು ನಮ್ಮ ಕೃಷಿಯನ್ನು ನಾಶಮಾಡುತ್ತಿವೆ. ರೈತರ ಭೂಮಿ ಕಿತ್ತು ಕೊಡುವಂತ ಭೂ ಸುಧಾರಣೆಯಂತಹ ಕರಾಳ ಕಾನೂನು ತರಲಾಗುತ್ತಿದೆ. ಈ ಕಾರಣದಿಂದ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆಗಳು: ಮನೆ, ನಿವೇಶನಗಳನ್ನು ರೈತರಿಗೆ, ಕೂಲಿಕಾರರಿಗೆ, ಅಸಂಘಟಿತ ಕಾರ್ಮಿಕರಿಗೆ ಮತ್ತು ಬಡವರಿಗೆ ಶೀಘ್ರವಾಗಿ ಕೊಡಬೇಕು. ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಉದ್ಯೋಗ ಖಾತ್ರಿ ಕೂಲಿಯನ್ನು ರು. 300ಕ್ಕೆ ಮತ್ತು ಕೆಲಸದ ದಿನಗಳನ್ನು ರು. 200ಕ್ಕೆ ಏರಿಸಬೇಕು. ನಂದವಾಡಗಿ ಏತ ನೀರಾವರಿ, 9ಎ ಕಾಲುವೆ, ಎನ್‌ಆರ್‌ಬಿಸಿ 95 ಕಿಮೀನಿಂದ ವಿಸ್ತರಿಸಬೇಕು. ಬೋಳಮಾನ ದೊಡ್ಡಿ ಏತನೀರಾವರಿ ಯೋಜನೆ ತಕ್ಷಣ ಆರಂಭಿಸಬೇಕೆಂಬ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಧರಣಿಯಲ್ಲಿ ಸಂಘದ ಅಧ್ಯಕ್ಷ ಮಲ್ಲಯ್ಯ ಜಾಲಹಳ್ಳಿ, ಕಾರ್ಯದರ್ಶಿ ನರಸಣ್ಣ ನಾಯಕ, ಉಪಾಧ್ಯಕ್ಷ ಕೆ.ಜಿ. ವೀರೇಶ, ಜಿಲ್ಲಾ ಮುಖಂಡರಾದ ಬಸವರಾಜ ತೇಕೂರ, ಹನುಮಂತಪ್ಪ ಮಂಡಲಗುಡ್ಡ, ಬಂದೇನವಾಜ ಮೀರಾಪೂರ, ರಂಗಪ್ಪ ಯಾಪಲದಿನ್ನಿ, ಧರಣಿ ಬೆಂಬಲಿತ ಸಿಐಟಿಯು ಅಧ್ಯಕ್ಷ ಎಚ್. ಪದ್ಮ, ಕಾರ್ಯದರ್ಶಿ ಶೇಕ್ಷಾಖಾದ್ರಿ, ಜಿಲ್ಲಾ ಮುಖಂಡರಾದ ಡಿ.ಎಸ್. ಶರಣಬಸವ, ಚನ್ನಬಸಯ್ಯ, ಎ. ವರಲಕ್ಷ್ಮೀ, ಪಾರ್ವತಿ, ಫರೀನಾ ಸೇರಿದಂತೆ ಇದ್ದರು.

ಶಿಥಿಲಾವಸ್ಥೆಯಲ್ಲಿ ನೀರಿನ ಟ್ಯಾಂಕ್
2000 ಜನಸಂಖ್ಯೆ ಇರುವ ಆಶಿಹಾಳ ತಾಂಡಾದಲ್ಲಿ ಅನಾಹುತದ ಆತಂಕ
ಮುದಗಲ್: ಪಟ್ಟಣ ಸಮೀಪದ ಆಶಿಹಾಳ ತಾಂಡಾದಲ್ಲಿರುವ ಕುಡಿವ ನೀರಿನ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದ್ದು, ಒಂದೇ ಕೊಳವೆ ಬಾವಿ ಇದೆ. ಕಳೆದ 20 ವರ್ಷಗಳಿಂದ 50 ಸಾವಿರ ಲೀಟರ್ ಕುಡಿಯವ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸಿಮೆಂಟ್ ಪದರ ಅಲ್ಲಲ್ಲಿ ಕಳಚಿಬಿದ್ದಿದೆ. ಕೆಲವು ಕಡೆ ನೀರು ಸೋರಿಕೆಯಾಗಿದ್ದು, ಗ್ರಾಮದ ಜನತಗೆ ಕುಡಿಯುವ ನೀರಿನ ಸಮಸ್ಯಯಾಗಿದೆ. ಟ್ಯಾಂಕ್ ಹತ್ತಿರ ಆಶ್ರಮ ಶಾಲೆ ಇದ್ದು, ವಿದ್ಯಾರ್ಥಿಗಳು ಶಿಥಿಲಾವಸ್ಥೆ ತಲುಪಿದ ಕುಡಿಯುವ ನೀರಿನ ಟ್ಯಾಂಕನಿಂದ ಅಪಘಾತವಾಗುವ ಸಂಭವವಿದೆ.  ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತಕಡೆ ಗಮನಹರಿಸಿ ಟ್ಯಾಂಕನ್ನು ಬೇರೆ ಕಡೆ ಸ್ಥಳಾಂತರಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಬೇಕೆಂದು ಗ್ರಾಮಸ್ಥರಾದ ರಾಜು, ಗಂಗಾಧರ, ತಾವರೆಪ್ಪ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.