ರಾಯಚೂರು

ಶಾಂತಿ ಪ್ರಕಾಶನ ರಜತ ಮಹೋತ್ಸವ: ಪುಸ್ತಕ ಮೇಳ

Published On :

ಸಿಂಧನೂರು: ಸಿಂಧನೂರಿನಲ್ಲಿ ಶಾಂತಿ ಪ್ರಕಾಶನದ ರಜತಮಹೋತ್ಸವದ ಅಂಗವಾಗಿ ಎರಡು ಬೃಹತ್ ಪುಸ್ತಕ ಪ್ರದರ್ಶನಗಳ ಮಳಿಗೆಗೆಳನ್ನು ವಳಬಳ್ಳಾರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು ಸೋಮವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಎಲ್ಲ ಸಂಪತ್ತಿಗಿಂತ ಜ್ಞಾನ ಸಂಪತ್ತು ದೊಡ್ಡದು. ಜ್ಞಾನಿಯಾದವನಿಗೆ ಬದುಕಿನ ಜಂಜಾಟ ಲವಲೇಶವೂ ಸುಳಿಯುವುದಿಲ್ಲ. ಪುಸ್ತಕಗಳು ಅತ್ಯುತ್ತಮ ಗೆಳೆಯರು. ಉತ್ತಮ ವಿಚಾರಗಳನ್ನು ಹೊಂದಿರುವ ಶಾಂತಿ ಪ್ರಕಾಶನದ ಪುಸ್ತಕಗಳನ್ನು ಸಾರ್ವಜನಿಕರು ಹೆಚ್ಚುಹೆಚ್ಚು ಖರೀದಿಸಿ ಪ್ರಕಾಶನಕ್ಕೆ ಸಹಾಯ ಮಾಡುವುದರ ಜೊತೆಗೆ ಬೌದ್ಧಿಕ ಸಂಪತ್ತನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಎಸ್. ಶರಣೇಗೌಡ, ಡಾ.ತಾಹೀರಅಲಿ, ಮಹ್ಮದ ಹುಸೇನ್ ಸಾಬ, ಬಾಬರ್ ಬೇಗ, ವೆಂಕನಗೌಡ ಗದ್ರಟಗಿ, ಡಿ.ಎಚ್. ಕಂಬಳಿ, ಕಲಿಗಣನಾಥ ಗುಡದೂರ ಮತ್ತಿತರರು ಪಾಲ್ಗೊಂಡಿದ್ದರು.
ಅಂಚೆ ಜೀವವಿಮಾ ಮೇಳ
ಸಿಂಧನೂರು: ತಾಲೂಕಿನ ಗೊರೇಬಾಳದ ಅಂಚೆ ಇಲಾಖೆ ವತಿಯಿಂದ ಗ್ರಾಮೀಣ ಅಂಚೆ ಜೀವವಿಮಾ ಮೇಳ ಆಚರಿಸಲಾಯಿತು.  ಅಂಚೆ ನಿರೀಕ್ಷಕ ಶಾಮೀದ್ ಸಾಬ್ ಕಲಮಂಗಿ ಮಾತನಾಡಿ ಜೀವವಿಮಾದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ವಿಎಸ್‌ಎಸ್‌ಎನ್ ಅಧ್ಯಕ್ಷ ಆರ್. ಮೋಹನರೆಡ್ಡಿ, ಕಾರ್ಯನಿರ್ವಾಹಕಾಧಿಕಾರಿ ಎಚ್.ಬಸವರಾಜಪ್ಪ, ಗ್ರಾ.ಪಂ.ಸದಸ್ಯ ಜಾಲವಾಡಗಿ ಮಲ್ಲಪ್ಪ, ರೈತ ಮುಖಂಡ ಜಿ.ಶರಣೇಗೌಡ, ಎಂ.ರುದ್ರಗೌಡ, ಗ್ರಾಮಸ್ಥರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.