ರಾಯಚೂರು

ಪ್ರಜಾಪ್ರಭುತ್ವ ಧರ್ಮ ಸಂವಿಧಾನ ಧರ್ಮಗ್ರಂಥ: ರಂಜಾನ್ ದರ್ಗಾ

Published On :

ಸಿಂಧನೂರು: ಪ್ರಜಾಪ್ರಭುತ್ವ ಧರ್ಮವಾಗಲಿ, ಸಂವಿಧಾನ ಧರ್ಮಗ್ರಂಥವಾಗಲಿ ಅಂದಾಗ ದೇಶದಲ್ಲಿ ಸುಭಿಕ್ಷೆ ನೆಲೆಸಲು ಸಾಧ್ಯ ಎಂದು ಖ್ಯಾತ ಚಿಂತಕ ರಂಜಾನ್‌ದರ್ಗಾ ಅಭಿಮತ ವ್ಯಕ್ತಪಡಿಸಿದರು.
ನಗರದ ಅನಿಕೇತನ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನ ವಿಧಾನಕ್ಕೆ ಧರ್ಮಗಳು ಸಹಕಾರಿಯಾಗಬೇಕು. ಋಗ್ವೇದದಲ್ಲಿ ಮೊದಲು ಮನುಷ್ಯರಾಗಿ ಎಂದು ಹೇಳುತ್ತದೆ. ಎಲ್ಲಾ ಧರ್ಮಗಳಲ್ಲಿ ವಿಶ್ವಸಂದೇಶ, ಶಾಂತಿ ಅಡಗಿದೆಯೇ ಹೊರತು ಬೇರೇನು ಇಲ್ಲ. ಧರ್ಮಗಳನ್ನು ಗುತ್ತಿಗೆ ಹಿಡಿದವರಿಂದ ಪ್ರಮಾದ ಆಗಿದೆಯೇ ಹೊರತು ಧರ್ಮಗ್ರಂಥಗಳಿಂದಲ್ಲ. ವಿಶ್ವ ಒಂದು ಗುಬ್ಬಿಗೂಡು. ಶಾಂತಿಯುತ ಸಹಬಾಳ್ವೆ ಮಾಡುವ ಮೂಲಕ ಜೀವನವನ್ನು ಪ್ರತಿಯೊಬ್ಬರು ಸಮೃದ್ಧಿಗೊಳಿಸಿಕೊಳ್ಳಬೇಕು ಎಂದರು.
ಕಾಲೇಜಿನ ಅಧ್ಯಕ್ಷ ಡಿ.ಎಚ್‌ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ವೈ.ಎಚ್.ರಕ್ಕಸಗಿ, ಪತ್ರಕರ್ತರಾದ ಶ್ಯಾಮಕುಮಾರ, ಪ್ರಹ್ಲಾದಗುಡಿ, ಚಂದ್ರಶೇಖರ ಬೆನ್ನೂರು, ಬಸವರಾಜ ಹಳ್ಳಿ, ಬಸವರಾಜ ಬಾದರ್ಲಿ, ಗ್ಯಾನಪ್ಪ ಕನ್ನಾಪೇಟೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾಗರಾಜ ಮುಕ್ಕುಂದಾ ಸ್ವಾಗತಿಸಿದರು. ತಿಮ್ಮಣ್ಣ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.