ಕೋರ್ಟ್ ಭಯ ಬೇಡ: ನ್ಯಾ.ಭಾರತಿ
ಸಿಂಧನೂರು: ದೈನಂದಿನ ಜೀವನದಲ್ಲಿ ಉಂಟಾಗುವ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳುವಲ್ಲಿ ಸಾರ್ವಜನಿಕರು ನ್ಯಾಯಾಲಯದ ಬಗ್ಗೆ ಯಾವುದೇ ರೀತಿಯ ಭಯದ ಮನೋಭಾವನೆ ಇಟ್ಟುಕೊಳ್ಳಬಾರದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಭಾರತಿ ರಾಯಣ್ಣವರ್ ಹೇಳಿದರು. ನಗರದ ಶಂಕರ್ ಟ್ರಸ್ಟ್ ಕಾಲೇಜಿನಲ್ಲಿ ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು- ನೆರವು ಸಪ್ತಾಹ ಕಾರ್ಯಕ್ರಮದಲ್ಲಿ ಪೀಡನೆ ವಿರೋಧಿ ವಿಷಯ ಕುರಿತು ಅವರು ಮಾತನಾಡಿದರು. ಎಲ್ಲರಿಗೂ ಸಮಾನ ಅವಕಾಶ ಕೊಡಿಸುವ ನಿಟ್ಟಿನಲ್ಲಿ ಹಾಗೂ ಅನ್ಯಾಯಕ್ಕೊಳಗಾದವರಿಗೆ ನೆರಳಾಗುವ ರೀತಿಯಲ್ಲಿ ನ್ಯಾಯಾಲಯ ಕೆಲಸ ಮಾಡುತ್ತದೆ. ನ್ಯಾಯಾಲಯದಲ್ಲಿ ಕಾನೂನು ಕ್ಲಿನಿಕ್ ವ್ಯವಸ್ಥೆ ಇರುತ್ತದೆ. ಅನ್ಯಾಯಕ್ಕೆ ಒಳಗಾದವರು ಸಲಹೆ, ಮಾರ್ಗದರ್ಶನವನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ನಾಗೇಶ ವಹಿಸಿದ್ದರು. ಜೆ.ರಾಯಪ್ಪ ವಕೀಲರು, ಶೇಖರಪ್ಪ ಧುಮುತಿ ವಕೀಲರು ಉಪನ್ಯಾಸ ನೀಡಿದರು. ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಖಾಜಿಮಲಿಕ್ ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ಜಿ.ತಿರುಪತಿ ಸ್ವಾಗತಿಸಿದರು. ಸವಿತಾ ಪ್ರಾರ್ಥಿಸಿದರು.
ಸೌಲಭ್ಯ ನೀಡಿಕೆಯಲ್ಲಿ
ತಾರತಮ್ಯ; ಆರೋಪ
ದೇವದುರ್ಗ: ತಾಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಮತ್ತು ಛಲವಾದಿ ಜನಾಂಗದವರು ವಾಸಿಸುವಲ್ಲಿ ಮೂಲ ಸೌಲಭ್ಯಗಳ ಅನುಷ್ಠಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಹೈದ್ರಾಬಾದ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಶಿವಪ್ಪ ಭಾವಿಮನಿ ಆರೋಪಿಸಿದ್ದಾರೆ. ಈ ಕುರಿತು ಅವರು ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ಸಲ್ಲಿಸಿದ್ದು, ತಾಲೂಕಿನ 28 ಗ್ರಾಪಂಗಳಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಮತ್ತು ಛಲವಾದಿ ಜನಾಂಗದವರು ವಾಸವಾಗಿದ್ದಾರೆ. ಆದರೆ ಅವರಿರುವ ಪ್ರದೇಶದಲ್ಲಿ ರಸ್ತೆ, ಚರಂಡಿ, ವಸತಿ ಯೋಜನೆ, ಬೀದಿ ದೀಪ ಸೌಲಭ್ಯ, ಸರ್ಕಾರದ ಮತ್ತು ಸಹಕಾರದ ಸಾಲದ ಸೌಲಭ್ಯ ಸೇರಿ ವಿವಿಧ ಸೌಲಭ್ಯ ಒದಗಿಸುವಲ್ಲಿ ಗ್ರಾಪಂ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಕೂಡಲೇ ಮೂಲ ಸೌಲಭ್ಯಗಳನ್ನು ನೀಡಬೇಕು. ಸಕಾಂರದ ಸೌಲಭ್ಯಗಳನ್ನು ನೀಡುವಲ್ಲಿ ಮಾದಿಗ ಮತ್ತು ಛಲವಾದಿ ಜನಾಂಗದವರಿಗೆ ನಿರ್ಲಕ್ಷಿಸದಂತೆ ಸಂಘಟನೆಯ ಮಲ್ಲಪ್ಪ ಪಡ್ತಲ್, ಭೀಮಣ್ಣ ಕಲ್ಮನಿ, ಶಿವಪ್ಪ ಬಲ್ಲಿದ್, ಭೀಮರಾಯ ಭಂಡಾರಿ, ಹನುಮಂತ ಬಾವಿಮನಿ, ಎಂ.ಡಿ. ಖಾಸಿಂ, ಪರುಶುರಾಮ ಮ್ಯಾಗಡಿ, ಮಲ್ಲಪ್ಪ ಜಡಿಮಳಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

