ಜಿಲ್ಲಾ ಸಾಹಿತ್ಯ ಸಮ್ಮೇಳನ: ನೋಂದಣಿಗೆ ಮನವಿ
ಮಸ್ಕಿ: ಪಟ್ಟಣದಲ್ಲಿ ಫೆ.11 ಮತ್ತು 12ರಂದು ನಡೆಯಲಿರುವ 8ನೇ ರಾಯಚೂರು ಜಿಲ್ಲಾ ಕನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿಚ್ಛಿಸುವ ಪ್ರತಿನಿಧಿಗಳು ಆಯಾ ತಾಲೂಕು ಕಸಾಪ ಅಧ್ಯಕ್ಷರಲ್ಲಿ ಫೆ. 10ರೊಳಗೆ ತಮ್ಮ ಹೆಸರು ನೋಂದಾಯಿಸಲು ಜಿಲ್ಲಾ ಕಸಾಪ ಸೂಚಸಿದೆ. ಈ ಕುರಿತು ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ ಮಸ್ಕಿ ಪ್ರಕಟಣೆ ನೀಡಿ, ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಣ ಇಲಾಖೆಯ ಪ್ರತಿನಿಧಿಗಳಿಗೆ ಒಒಡಿ ಸೌಲಭ್ಯ ನೀಡಲಾಗುವುದು. ಅಲ್ಲದೇ ಕಿಟ್ ಮತ್ತು ಊಟದ ಚೀಟಿ ನೀಡಲಾಗುವುದು. ಪುಸ್ತಕ ಮತ್ತು ವಾಣಿಜ್ಯ ಮಳಿಗೆ ತೆರೆಯಲು ಇಚ್ಚಿಸುವವರು ಪರಶುರಾಮ ಕೋಡಗುಂಟಿ 9880132569 ಅವರನು ಸಂಪರ್ಕಿಸಲು ಕೋರಿದ್ದಾರೆ. ನಮ್ಮ ಸಂಸ್ಕೃತಿ ಹಾಗೂ ಐತಿಹಾಸಿಕ ಸ್ಥಳಗಳ ಕುರಿತು ಛಾಯಾ ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುವವರು ರು. 200 ಪ್ರವೇಶ ದರ ಪಾವತಿಸಿ, ಶಶಿಧರ ಹೊಸಮಠ 9945370913 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಅಮರೇಶ ವಜ್ರದ್ 9972164601 ಅವರನು ಸಂಪರ್ಕಿಸಲು ತಿಳಿಸಿದ್ದಾರೆ.
ಸೀಟು ಕಾಯ್ದಿರಿಸುವಿಕೆ: ಖಾಸಗಿ ನೇಮಕ
ರಾಯಚೂರು: ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ ವಿಭಾಗದ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರಯಾಣದ ಅನುಕೂಲಕ್ಕಾಗಿ ಸಂಸ್ಥೆಯ ಪ್ರತಿಷ್ಠಿತ, ದೂರದ ಮತ್ತು ರಾತ್ರಿ ಸಾರಿಗೆಗಳಿಗೆ ಮುಂಗಡ ಆಸನಗಳನು ಕಾಯ್ದಿರಿಸುವ ವ್ಯವಸ್ಥೆಯನು ಜಾರಿಗೊಳಿಸಿದ್ದು, ಖಾಸಗಿಯವರಿಂದ ಈ ನಿಟ್ಟಿನಲ್ಲಿ ಅರ್ಜಿ ಕರೆಯಲಾಗಿದೆ.
ಅವತಾರ(ಆಗಿಆಖಿಆಖ-ಆಟಿಣ ಝಿಜ್ಠಜ ಆಟಿಣ ಖ್ಝಿಟಜ ಆಜಢಛಟ್ಛಿಜ ಖಜಡಜ್ಠಢಛಡ್ಝ್ಟಿಟಿ) ಅಡಿಯಲ್ಲಿ ಸಂಸ್ಥೆಯ ಪ್ರಮುಖ ಪಟ್ಟಣ ನಗರಗಳ ಬಸ್ನಿಲ್ದಾಣಗಳಲ್ಲಿ ಸಂಸ್ಥೆಯ ಬುಕಿಂಗ್ ಕೌಂಟರ್ಗಳೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಬಡಾವಣೆ ಮತ್ತು ಸ್ಥಳಗಳಲ್ಲಿ ಖಾಸಗಿ ಅವತಾರ ಏಜೆಂಟರನು ಆಯ್ಕೆ ಮಾಡಲಾಗಿದ್ದು, ಸದರಿ ಬುಕ್ಕಿಂಗ್ ಕೌಂಟರ್ಗಳನೂ ಸಹ ಸಾರ್ವಜನಿಕರು ಉಪಯೋಗಿಸಿಕೊಳ್ಳಬಹುದಾಗಿದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

