ರಾಯಚೂರು

ಮಕ್ಕಳು ಚಿಕ್ಕವರಾದರೂ ಪ್ರತಿಭೆ ದೊಡ್ಡದು: ಭೋವಿ

Published On :

ಸಿಂಧನೂರು: ಮಕ್ಕಳು ಚಿಕ್ಕವರಾದರೂ ಅವರಲ್ಲಿ ಅಡಗಿರುವ ಪ್ರತಿಭೆ ನಿಜಕ್ಕೂ ದೊಡ್ಡದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಭೋವಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೀನಾಕ್ಷಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿಜ್ಞಾನ, ಕಲೆ, ಮತ್ತು ಕೌಶಲ್ಯ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆ ಮತ್ತು ಕೌಶಲ್ಯವನ್ನು ಹೊರಗೆಡವಿದ ಮೀನಾಕ್ಷಿ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ನಿಜಕ್ಕೂ ಪ್ರಶಂಸೆಗೆ ಅರ್ಹರು ಎಂದರು. ರಾಜೆಂದ್ರ ಶಾಲೆಯ ಆಡಳಿತಾಧಿಕಾರಿ ಸರಸ್ವತಿ ಪಾಟೀಲ್ ಸಾಮಾಜಿಕ ಕೌಶಲ್ಯ ಪ್ರದರ್ಶನ ಕೇಂದ್ರದ ಉದ್ಘಾಟನೆ ಮಾಡಿದರು. ಲಿಂಗಸ್ಗೂರಿನ ವೈದ್ಯರಾದ ಡಾ. ವನಮಾಲ ವಿಜಯಕುಮಾರ ಹೆಸರೂರು ಅವರು ಪೂರ್ವ ಪ್ರಾಥಮಿಕ ಮಕ್ಕಳ ಪ್ರದರ್ಶನ ಕೇಂದ್ರವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು  ಮೀನಾಕ್ಷಿ ಸಂಸ್ಥೆಯ ಅಧ್ಯಕ್ಷ ಶ್ಯಾಮಸುಂದರ್ ಕೀರ್ತಿ ವಹಿಸಿದ್ದರು. ಸಂಸ್ಥೆಯ ಖಜಾಂಚಿ ಲಕ್ಷ್ಮೀದೇವಿ ಕೀರ್ತಿ, ನಿರ್ದೇಶಕ ಪ್ರಕಾಶ ಝುಂಜುರವಾಡ, ಆಡಳಿತಾಧಿಕಾರಿ ಚಂದ್ರಕಲಾ ಪ್ರಕಾಶ, ಮುಖ್ಯೋಪಾದ್ಯಾಯರಾದ ಎಸ್.ಎಸ್. ಪಾಟೀಲ್ ಹಾಗೂ ಶಿಕ್ಷಕ ವೃಂದ, ಪಾಲಕರು, ರಾಜೆಂದ್ರ ಶಾಲೆ, ವೆಂಕಟೇಶ್ವರ ಪ್ರೌಢ ಶಾಲೆ, ರೆಡ್ಡಿ ಪ್ರೌಢಶಾಲೆ, ಆನಂದ ಪಬ್ಲಿಕ್ ಶಾಲೆ, ಆನಂದ ಹೆಗ್ಡೆ ಆದರ್ಶ ಶಾಲೆ, ಸಿ.ಪಿ.ಎಸ್ ಶಾಲೆ, ಅರುಣೋದಯ ಶಾಲೆ ಪಗಡದಿನ್ನಿ ಹಾಗೂ ಇನ್ನೂ ಅನೇಕ ಶಾಲೆಯ ಮಕ್ಕಳು ಕಾರ್ಯಕ್ರಮವನ್ನು ವೀಕ್ಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.