ಸಾವಿರಾರು ಕುರಿಗಳ ಬಲಿ
ಮುದಗಲ್: ಸಮೀಪದ ತೊಂಡಿಹಾಳ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಕುರಿಗಳನ್ನು ದೇವರ ಹೆಸರಲ್ಲಿ ಬಲಿ ಕೊಟ್ಟ ಪ್ರಸಂಗ ಶನಿವಾರ ರಾತ್ರಿ ನಡೆದಿದೆ.
ಲಿಂಗಸ್ಗೂರು ತಾಲೂಕಾಡಳಿತ ದೇವರ ಹೆಸರಲ್ಲಿ ಪ್ರಾಣಿಬಲಿ, ದೇವದಾಸಿ ಪದ್ಧತಿ, ಅರೆಬೆತ್ತಲೆ ಸೇವೆ, ಮದ್ಯಪಾನ ನಿಷೇಧ ಸೇರಿದಂತೆ ಅನೇಕ ಅನಿಷ್ಟ ಪದ್ಧತಿಗಳನ್ನು ನಿಷೇಧಿಸಿ ಜಿಲ್ಲಾ, ತಾಲೂಕಾಡಳಿತ ಗ್ರಾಮಸ್ಥರಿಗೆ ಮುನ್ಸೂಚನೆ ನೀಡಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು. ಆದರೂ ಅದಾವುದನ್ನೂ ಲೆಕ್ಕಿಸದ ಭಕ್ತರು ದೇವರಿಗೆ ಕುರಿಗಳನ್ನು ಬಲಿ ಕೊಡುವ ಮೂಲಕ ತಮ್ಮ ಹರಕೆಯನ್ನು ತೀರಿಸಿಕೊಂಡರು.
ಅನಿಷ್ಟ ಪದ್ಧತಿ ಮುಂದುವರಿಕೆ: ವಿವಿಧ ಸಂಘಟನೆಗಳ ಪದಾಧಿಕಾರಿಗಳು ರಾತ್ರಿಯಿಡೂ ಗಸ್ತು ತಿರುಗಿದರೂ ಬಲಿ ಕೊಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಯಥಾವತ್ತಾಗಿ ಪ್ರಾಣಿಬಲಿ, ಮದ್ಯಸೇವನೆ, ಇಸ್ಟೀಟ್ ಸೇರಿ ಅನೇಕ ಅನಿಷ್ಟ ಪದ್ಧತಿಗಳು ಜಾರಿಯಲ್ಲಿರುವುದು ಶನಿವಾರ ರಾತ್ರಿ ಕಂಡುಬಂತು.
ಹರಕೆ ತೀರಿಸಿದ ಭಕ್ತರು: ಇನ್ನು ಕೆಲವು ಭಕ್ತರು ಕುರಿ, ಕೋಳಿ ದೇವಿಗೆ ಬಲಿಕೊಟ್ಟು, ಉರುಳು ಸೇವೆ ಮೂಲಕ ತಮ್ಮ ವಿಭಿನ್ನ ಹರಕೆ ತೀರಿಸಿದರು. ಶನಿವಾರ ರಾತ್ರಿ ಹತ್ತು ಘಂಟೆಯಿಂದ ಆರಂಭಗೊಂಡ ಪ್ರಾಣಿಗಳ ಮಾರಣ ಹೋಮ ಬೆಳಿಗಿನ ಜಾವ 5 ಗಂಟೆಯವರೆಗೂ ನಿರಾತಂಕವಾಗಿ ನಡೆಯಿತು. ತಹಸೀಲ್ದಾರ್ ಮಹಾಜನ್ ಸೇರಿದಂತೆ ವಿವಿಧ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಪೊಲೀಸ್ ತುಕಡಿಗಳನ್ನು ಜಾತ್ರೆಗೆ ನಿಯೋಜಿಸಲಾಗಿತ್ತು. ಬಂದೋಬಸ್ತ್ ಇದ್ದರೂ ಪ್ರಾಣಿಬಲಿ, ಉರುಳು ಸೇವೆ, ಇಸ್ಪೀಟ್ ನಡೆಯುತ್ತಲೇ ಇತ್ತು.
ಅಧಿಕಾರಿಗಳ ಗೈರು: ಸಹಾಯಕ ಆಯುಕ್ತ ಟಿ. ಯೋಗಿಶ್, ಪೊಲೀಸ್ ಇಲಾಖೆ ಡಿವೈಎಸ್ಪಿ ಹನಿತಾ ಅದ್ದಣ್ಣನವರು, ಜಾತ್ರೆಯಲ್ಲಿ ಪ್ರಾಣಿಬಲಿ ಪ್ರತಿ ವರ್ಷ ನಡೆಯುತ್ತಿದೆಂದು ಗೊತ್ತಿದ್ದರೂ ಅಧಿಕಾರಿಗಳ ಗೈರು ಮೇಲ್ನೋಟಕ್ಕೆ ಅನಿಷ್ಟ ಪದ್ಧತಿಗೆ ಸಹಕರಿಸಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

