ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಕೇಸ್ ದಾಖಲು
ಸಿಂಧನೂರು: ಮಾನವಿ ತಾಲೂಕಿನ ಬ್ಯಾಗವಾಟ ಗ್ರಾಮದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಸಂಜೆ ನಗರದ ವಿನಯ್ ರೆಸಿಡೆನ್ಸಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶರಣಪ್ಪ ತಂದೆ ಭೀಮಣ್ಣ ಅವರ ಪತ್ನಿ ಲಕ್ಷ್ಮೀ ತನ್ನ ಗಂಡನ ಸಾವಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ ಹಾಗೂ ಅವರ ಪತ್ನಿ ಲಲಿತಾ ಅವರೇ ಕಾರಣ ಎಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೃತ ಶರಣಪ್ಪ ಅವರ ತಾಯಿ ಬ್ಯಾಗವಾಟ ಗ್ರಾಮದ ಜಮೀನನ್ನು ಗ್ರಾಮದ ಸುವರ್ಣ ಗ್ರಾಮ ಯೋಜನೆ ಅಡಿ ಸೇರಿಸಲು ಒಪ್ಪಂದ ಮಾಡಿಕೊಂಡು ಬಸನಗೌಡ ಬ್ಯಾಗವಾಟ ಅವರಿಗೆ ಜಮೀನನ್ನು 45'ಎ' ಅಡಿ ಪೆಂಡಿಂಗ್ ನೋಂದಣಿ ಮಾಡಿಸಿದ್ದರು. ಆದರೆ ಜಮೀನು ಸ್ವಾಧೀನ ಮಾಡಿಕೊಂಡ ಬ್ಯಾಗವಾಟ ಅದನ್ನು ತಮ್ಮ ಸ್ವಂತಕ್ಕೆ ಮಾಡಿಕೊಂಡು ಅಭಿವೃದ್ಧಿ ಮಾಡಿಸಿದ್ದರು. ಇದರಿಂದ ಬೇಸತ್ತ ಶರಣಪ್ಪ ನ್ಯಾಯಾಲಯದಲ್ಲಿ ದಾವೆ ಹೂಡಿ ಆ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈ ಆದೇಶವನ್ನು ಬ್ಯಾಗವಾಟ ಮೇಲ್ಮನವಿ ಸಲ್ಲಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದರಿಂದ ನೊಂದ ಶರಣಪ್ಪ ಸಿಂಧನೂರಿನ ವಿನಯ್ ರೆಸಿಡೆನ್ಸಿಯಲ್ಲಿ ಜು.15ರಂದು ಕೊಠಡಿ ಬಾಡಿಗೆಗೆ ಪಡೆದಿದ್ದ. ಎರಡು ದಿನಗಳ ಕಾಲ ಅಲ್ಲಿದ್ದು ಡೆತ್ ನೋಟ್ ಬರೆದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಣೋತ್ತರ ಪತ್ರದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶರಣಪ್ಪ, ಹಣವಿದ್ದರೆ ಎಲ್ಲವನ್ನು ಖರೀದಿಸಬಹುದು ಎಂಬ ಅರ್ಥದಲ್ಲಿ ಬರೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೀ ನಗರ ಠಾಣೆಯಲ್ಲಿ ಸೆಕ್ಷನ್ 306ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ.
ಸಹಶಿಕ್ಷಕರ ಸಂಘಕ್ಕೆ ಆಯ್ಕೆ
ಸಿಂಧನೂರು: ತಾ. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆಯಲ್ಲಿ 11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ. ರವಿಯಪ್ಪ ತಿಳಿಸಿದ್ದಾರೆ. ಅಯ್ಯಪ್ಪ ಮೇಟಿ, ದುರ್ಗಾಪ್ರಸಾದ, ಬಾಲಪ್ಪ ದಾಸರ, ಬಿ.ಬಸವರಾಜ, ಬಸಪ್ಪ ಹ್ಯಾಟಿ, ಬೀರಪ್ಪ ಶಂಭೋಜಿ, ದಿನೇಶ, ವೆಂಕನಗೌಟ ವಟಗಲ್, ಶಿವಪ್ಪ, ಪಂಪಾಪತಿ ಕೆ.ಎಲ್, ಶೇಖರಗೌಡ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

