ಪತ್ರಕರ್ತನ ಬಂಧನಕ್ಕೆ ಆಂದೋಲಾ ಶ್ರೀ ಆಗ್ರಹ
ಗುಲ್ಬರ್ಗ: ಪಂಚಪೀಠಾಧೀಶರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತವಿಶ್ವಾರಾಧ್ಯ ಸತ್ಯಂಪೇಟೆ ಅವರು ಅಡ್ನಾಡಿಗಳು ಎಂಬ ಅವಹೇಳಕಾರಿ ಶಬ್ದ ಬಳಸಿದ್ದಾರೆ. ಇದರಿಂದ ಪಂಚಪೀಠಾಧೀಶರ ಭಕ್ತರಿಗೆ ನೋವಾಗಿದ್ದು, ಪತ್ರಕರ್ತನನ್ನು ಬಂಧಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಮುಖ್ಯಸ್ಥ, ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ನಾಡಿಗಳು ಎಂಬ ಪದ ಪೀಠಾಧೀಶರ ವಿರುದ್ಧ ಬಳಸಿದ್ದು, ಅಪರಾಧ. ಅಂತಹವರು ಯಾರೇ ಆಗಿರಲಿ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತಹ ಈ ಕೆಲಸಗಳನ್ನು ಮಾಡಿದ್ದರೆ ಅವರನ್ನು ಸೈಬರ್ ಅಪರಾಧ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಪಂಚಪೀಠಗಳ ಬಗ್ಗೆಯಾಗಲಿ, ಬಸವಾದಿ ಶರಣರ ಬಗ್ಗೆಯಾಗಲಿ, ಯಾವುಪೇ ಧಾರ್ಮಿಕ ಮಹಾತ್ಮಾರ ವಿರುದ್ಧವೇ ಆಗಲಿ ಇಂತಹ ಪದಗಳ ಬಳಕೆ ಸರಿಯಾದದ್ದಲ್ಲ. ಇದು ಸಾಮಾಜಿಕ ಸ್ವಾಸ್ಥ್ಯ ಕದಡುವ ಪ್ರಯತ್ನ ಎಂದು ಆಂದೋಲಾ ಶ್ರೀಗಳು ಹೇಳಿದರು. ತಕ್ಷಣ ಪತ್ರಕರ್ತನನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಬರುವ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಪಂಚ ಜಿಲ್ಲೆಗಳ ಜನಪರ ಹೋರಾಟ ಸಮಿತಿಯ ಎಂ.ಎಸ್. ಪಾಟೀಲ್ ನರಿಬೋಳ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಶಿಷ್ಯವೇತನಕ್ಕೆ ಅನುಷಾ ಆಯ್ಕೆ
ಸಿಂಧನೂರು: ನಗರದ ದುದ್ದುಪುಡಿ ಮಹಿಳಾ ವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿನಿ ಕು. ಅನುಷಾ ತಂ.ಅಮರೇಶ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿ ಮಂಜೂರಾಗುವ ವಾರ್ಷಿಕ 80 ಸಾವಿರ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ ಎಂದು ದುದ್ದುಪುಡಿ ಸಂಸ್ಥೆ ಕಾರ್ಯದರ್ಶಿ ಆರ್.ಸಿ. ಪಾಟೀಲ್ ತಿಳಿಸಿದ್ದಾರೆ.
ಅಭಿನಂದನೆ: ಕು. ಅನುಷಾಗೆ ಕಾಲೇಜಿನ ಪ್ರಾಚಾರ್ಯ ಆನಂದ ಕೆ., ಉಪನ್ಯಾಸಕರಾದ ಪುರೋಹಿತ್, ಸೂಗೂರಯ್ಯ ಸಾಲಿಮಠ, ಕಾಲೇಜಿನ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

