ಗ್ರಾಮಗಳ ಸ್ವಚ್ಛತೆ, ಅಭಿವೃದ್ಧಿಗೆ ಮುಂದಾಗಿ
ಸಿಂಧನೂರು: ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಗ್ರಾಮಸ್ಥರ ದೂರು ಬಂದಲ್ಲಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಜೋತ್ಸ್ನಾ ಎಚ್ಚರಿಸಿದರು.
ತಾಲೂಕು ಪಂಚಾಯಿತಿ ಕಾರ್ಯಾಲಯ ಸಭಾಂಗಣದಲ್ಲಿ ತಾಲೂಕಿನ ಪಿಡಿಒ ಪರಿಶೀಲನೆ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಿಸಿ ರಸ್ತೆ ಬಗ್ಗೆ ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು. ಪ್ರತಿ ಗ್ರಾಪಂ.ನಲ್ಲಿ ಕಾರ್ಯನಿರ್ವಹಣೆಗೆ 4 ಜನರಗಿಂತ ಹೆಚ್ಚಿನ ಸಿಬ್ಬಂದಿ ತೆಗೆದುಕೊಳ್ಳಲು ಅವಕಾಶವಿಲ್ಲ. ಕೆಲ ಪಂಚಾಯಿತಿಗಳಲ್ಲಿ 8 ಸಿಬ್ಬಂದಿ ಇರುವುದು ಕಂಡುಬಂದಿದ್ದು ಆವರಿಗೆ ಯಾವುದರಿಂದ ವೇತನ ನೀಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಬಪ್ಪೂರು, ಬಾದರ್ಲಿ, ದೇವರಗುಡಿ, ತುರುವಿಹಾಳ, ಸಾಲಗುಂದಾ ಬಸಾಪುರ ಉದ್ಬಾಳ(ಯು) ಗೋನ್ವಾರ ಸೇರಿದಂತೆ 12 ಗ್ರಾಪಂಗಳಲ್ಲಿ ಎನ್ಆರ್ಇಜೆ ಯೋಜನೆಯ ಅಭಿವೃದ್ಧಿ ಕಾಮಗಾರಿಗಳು ಪ್ರಗತಿ ಶೂನ್ಯದಲ್ಲಿದ್ದು ಸಂಬಂಧಪಟ್ಟ ಪಿಡಿಒಗಳ ಮೇಲೆ ಹರಿಹಾಯ್ದರು. ಯಾವುದೇ ಪಿಡಿಒ ಮತ್ತು ಸಂಬಂಧಪಟ್ಟ ಸಿಬ್ಬಂದಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಒತ್ತು ನೀಡಬೇಕೆಂದು ಹೇಳಿದರು. ಈ ವೇಳೆ ತಾಪಂ ಇಒ ಜಿ.ಬಿ. ಹೂಗಾರ, ಜಿಪಂ ಎಇಇ ಗೌಡೂರು ಇದ್ದರು.
ಸಂತಾಪ ಸಭೆ ಇಂದು
ರಾಯಚೂರು: ಇಲ್ಲಿನ ಎಲ್ಐಸಿ ವಿಭಾಗೀಯ ಕಚೇರಿಯ ವಿಮಾ ನೌಕರರ ಸಂಘದಿಂದ ಜೂ.5ರಂದು ಸಂತಾಪ ಸಭೆ ಆಯೋಜಿಸಲಾಗಿದೆ. ರಾಯಚೂರು ವಿಭಾಗೀಯ ಕಚೇರಿಯ ಸಂಘದ ಜಂಟಿ ಕಾರ್ಯದರ್ಶಿ ವೈ.ಬಸವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಮೃತರ ಗೌರವಾರ್ಥ ಅಂದು ಸಂಜೆ 5.31ಕ್ಕೆ ಎಲ್ಐಸಿಯ ವಿಭಾಗೀಯ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ ಎಂದು ಸಂಘ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

