ರಾಯಚೂರು

ಹಾಪಿನ ಸುಂಕದ ಹಾವಳಿ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

Published On :

ಲಿಂಗಸ್ಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ಕಸಬಾ ಲಿಂಗಸ್ಗೂರು ಗ್ರಾಮದ ಬಸ್ ನಿಲ್ದಾಣ ಹತ್ತಿರದ ಹೊಲ ಗದ್ದೆಗಳಲ್ಲಿ ಹಾಪು ಬೆಳೆದು ಅದರ ಸುಂಕ ಗ್ರಾಮದ ತುಂಬೆಲ್ಲಾ ಹರಡಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಎಸಿ ಕಚೇರಿ ಸಿಬ್ಬಂದಿಗೆ ಬುಧವಾರ ಮನವಿ ಸಲ್ಲಿಸಿದರು. ಗ್ರಾಮದ ಬಸ್‌ನಿಲ್ದಾಣ ಹತ್ತಿರದ ಖಾಸಗಿ ಪ್ರಭಾವಿ ವ್ಯಕ್ತಿಗಳ ಜಮೀನುಗಳಲ್ಲಿ ಹಾಪು ಬೆಳೆದು ನಿಂತಿದ್ದು, ಇದರಿಂದ ಬರುವ ಸುಂಕ ಗ್ರಾಮದ ತುಂಬೆಲ್ಲಾ ಹರಡಿ, ಸೇವಿಸುವ ಪದಾರ್ಥ ಹಾಗೂ ಕುಡಿಯುವ ನೀರಿನ ಮೇಲೆಲ್ಲಾ ಬೀಳುತ್ತಿದೆ. ಅಲ್ಲದೆ ಸಂಚರಿಸುವ ಜನತೆಯ ಕಣ್ಣುಗಳಲ್ಲಿ ಹೊಕ್ಕು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಿಸಿದ ಜಮೀನು ಮಾಲೀಕರ ಗಮನಕ್ಕೆ ತಂದರೆ ಕ್ಯಾರೆ ಎನ್ನುತ್ತಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಗ್ರಾಮದ ಸತೀಶ, ಚಂದ್ರಶೇಖರ, ರಾಜಶೇಖರಯ್ಯ, ರಮೇಶ ನಾಯಕ, ಯಂಕಪ್ಪ, ಭೀಮಣ್ಣ ನಾಯಕ, ಕುಪ್ಪಣ್ಣ ನಾಯಕ, ಹುಚ್ಚಪ್ಪ, ಯಮನಪ್ಪ, ಹನುಮಂತ, ವೀರಭದ್ರಪ್ಪ, ಯಮನೂರ, ಕುಪ್ಪಣ್ಣ ಗೌಂಡಿ, ಶಂಕ್ರಪ್ಪ ನಾಗಲೀಕರ, ಈರಪ್ಪ ಗೌಂಡಿ, ಮಲ್ಲಿಕಾರ್ಜುನ, ಮೀಯಾಸಾಬ, ರಾಘವೇಂದ್ರ ಇನ್ನಿತರರು ಇದ್ದರು.

ತಂಬಾಕು ಸೇವನೆಯಿಂದ ಆರೋಗ್ಯ ಹಾನಿ: ನ್ಯಾ. ಭಾರತಿ
ಸಿಂಧನೂರು: ಇತ್ತೀಚಿನ ದಿನಮಾನಗಳಲ್ಲಿ ತಂಬಾಕು, ಗುಟಕಾ, ಸಿಗರೇಟ್ ಚಟಕ್ಕೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವಿರಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಭಾರತಿ ರಾಯಣ್ಣವರ್ ಸಲಹೆ ನೀಡಿದರು. ನಗರದ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ತಂಬಾಕು ಸೇವನೆ ವಿರೋಧಿ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ತಂಬಾಕು, ಮದ್ಯ ಸೇವನೆಯಂತಹ ವ್ಯಸನಗಳು ತಾತ್ಕಾಲಿಕ ಸುಖ ನೀಡಿದರೂ ಶಾಶ್ವತವಾಗಿ ಮನುಷ್ಯನನ್ನು ಅನಾರೋಗ್ಯಕ್ಕೀಡು ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ತುಂಬಾಕು ಮುಕ್ತ ಸಮಾಜ ನಿರ್ಮಾಣದಲ್ಲಿ ಕೈ ಜೋಡಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ.ಈರನಗೌಡ, ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಸಹಾಯಕ ಸರ್ಕಾರಿ ಅಭಿಯೋಜಕ ಶೇಖರಪ್ಪ ಶಾಲಿಗನೂರು,ಶೇಖರಪ್ಪ ಧುಮತಿ ವಕೀಲರು ಇದ್ದರು. ಎಚ್. ವೀರಭದ್ರಪ್ಪ ವಕೀಲ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.