ವಿವಿಧ ಬೇಡಿಕೆ ಈಡೇರಿಕೆಗೆ ಹಮಾಲರ ಸಂಘ ಒತ್ತಾಯ
ಕ.ಪ್ರ. ವಾರ್ತೆ ಸಿಂಧನೂರು ಮಾ.5
ಹಮಾಲರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಮಾಲರ ಸಂಘದ (ಎಐಟಿಯುಸಿ)ಪದಾಧಿಕಾರಿಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸಣ್ಣಕರಿಯಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹಮಾಲರ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮನವಿ ಪತ್ರಗಳನ್ನು ಮೂಲೆಗೆಸೆದು ಬೇಜವಾಬ್ದಾರಿ ತೋರುತ್ತಿದ್ದಾರೆ. ಎರಡು ದಿನದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಎಪಿಎಂಸಿ ಕಚೇರಿಯ ಮುಂದೆ ಮಾ. 11ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಸಂಘದ ಅಧ್ಯಕ್ಷ ಬಾಷುಮಿಯಾ ಎಚ್ಚರಿಸಿದರು.
ಹೊಸಲಾಪುರ(ಡಿ) ಸರ್ವೆ ನಂ. 9/1ಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರಗಳನ್ನು ವಿತರಿಸಿ ರಾಜೀವ್ಗಾಂಧಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು. ಗಂಜ್ ಹಾಗೂ ಗ್ರಾಮಾಂತರ ಹಮಾಲರಿಂದ ಪಡೆಯಲಾಗಿರುವ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ಅವರಿಗೆ ನಿವೇಶನಗಳನ್ನು ಮಂಜೂರು ಮಾಡಿ ಮನೆಗಳನ್ನು ನಿರ್ಮಿಸಿ ಕೊಡಬೇಕು. ಹಮಾಲರಿಗಾಗಿ ಕಟ್ಟಿರುವ ಶ್ರಮಿಕ ಭವನವನ್ನು ದುರಸ್ತಿಗೊಳಿಸಬೇಕು.
ಪರವಾನಗಿ ಪಡೆದ ಎಲ್ಲ ಹಮಾಲರಿಗೆ ಕೂಡಲೇ ಸನ್ನದು ಪ್ರಮಾಣ ಪತ್ರ ನೀಡಬೇಕು. ಜನಶ್ರೀ ವಿಮಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದು ಮೃತ ಹಮಾಲರ ಕುಟುಂಬಗಳಿಗೆ ಪರಿಹಾರದ ಹಣ ಕೊಡಿಸಬೇಕು. ಆಮ್ ಆದ್ಮಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ ಹಮಾಲರ ಮಕ್ಕಳಿಗೆ ಹಣ ವೇತನ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಯಂಕನಗೌಡ ಗದ್ರಟಗಿ, ಉಪಾಧ್ಯಕ್ಷ ದಾವಲಸಾಬ, ಕಾರ್ಯದರ್ಶಿ ಶರಣಪ್ಪ ಗೊರೇಬಾಳ, ಖಜಾಂಚಿ ಮೋಹಿನುದ್ದೀನ್, ಜಿಲಾನಿಸಾಬ ಜವಳಗೇರಾ, ಮಹಿಳಾ ಘಟಕದ ಶಾಂತಮ್ಮ, ಭೀಮಾಬಾಯಿ, ಭವಾನೆಮ್ಮ, ನಾಗಮ್ಮ ಕಟ್ಟಿಮನಿ, ಗ್ರಾಮಾಂತರ ಘಟಕದ ಬೊಮ್ಮಣ್ಣ, ತಿಮ್ಮಣ್ಣ, ರಂಗಯ್ಯ, ಈರಪ್ಪ ಕುನ್ನಟಗಿಕ್ಯಾಂಪ್, ಎಐವೈಎಫ್ನ ಕುಮಾರ ಕಂಠಿ, ಎಐಎಸ್ಎಫ್ನ ಬಸವರಾಜ, ಶಿವಕುಮಾರ, ಸಂತೋಷ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

