ರಾಯಚೂರು

ಸಂಪರ್ಕ ಸಾಧನವಾಗಿ ನಾಣ್ಯ, ಚೀಟಿ ಸಂಗ್ರಹ: ಜಯಣ್ಣ

Published On :

ರಾಯಚೂರು: ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಿಸುವುದು ಹಳೆ ಮತ್ತು ಹೊಸ ತಲೆಮಾರಿನ ವ್ಯವಸ್ಥೆಯ ಮಧ್ಯೆ ಸಂಪರ್ಕ ಕೊಂಡಿಯಾಗಿ ಗುರುತಿಸಲ್ಪಡುತ್ತದೆ. ಈ ನಿಟ್ಟಿನಲ್ಲಿ ವಾಸಪ್ಪ ಅವರ ಶ್ರಮ ಶ್ಲಾಘನೀಯ ಎಂದು ಐತಿಹಾಸಿಕ ಕೋಟೆ ಅಧ್ಯಯನ ಸಮಿತಿ ಗೌರವಾಧ್ಯಕ್ಷ ಜಯಣ್ಣ ಹೇಳಿದರು.
ನಗರದ ಜೇಸಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಈರಣ್ಣ ಬೆಂಗಾಲಿ ಅವರು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಕಾರ ವಾಸಪ್ಪ ಅವರ ಕುರಿತ ಸಂಪಾದಿತ ಕೃತಿ ಚಿನ್ನದ ನಾಣ್ಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಐತಿಹಾಸಿಕ ಪರಂಪರೆಯೊಂದಿಗೆ ಗುರುತಿಸಿಕೊಂಡು ಹೊಸ ತಲೆಮಾರಿನವರಿಗೆ ಗತಕಾಲದ ಇತಿಹಾಸದ ಕುರುಹುಗಳನ್ನು ಕಟ್ಟಿಕೊಡುವ ಕಾರ್ಯ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲಘಟ್ಟದ ಕಥೆ: ಪುಸ್ತಕದ ಕುರಿತು ಮಾತನಾಡಿದ ರಾಣಿ ಚೆನ್ನಮ್ಮ ವಿವಿಯ ಬಿಜಾಪುರದ ತೊರವಿ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಅಮರೇಶ ಯತಗಲ್, ವಾಸಪ್ಪ ಅವರು ನಾಣ್ಯಗಳ ಚಾರಿತ್ರಿಕ ಹಿನ್ನೆಲೆ ಬಿತ್ತರಗೊಳಿಸುವ ಕಾರ್ಯ ಮಾಡಿದ್ದಾರೆ. ಆ ಮೂಲಕ ಆಗಿನ ಕಾಲದ ನಾಣ್ಯದ ಹಿರಿಮೆ- ಗರಿಮೆ ಬಿಚ್ಚಿಡುವ ಪ್ರಯತ್ನ ಕೈಗೊಂಡಿರುವುದು ಶ್ಲಾಘನೀಯ ಎಂದರು.
ನಾಣ್ಯ ಸಂಗ್ರಹ ಮತ್ತು ಪ್ರದರ್ಶನದಿಂದ ಆಗಿನ ಕಾಲದ ವಾಸ್ತವದ ಕಥೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ. ಅಂತರಂಗದ ಒಡಲು ಬಯಲಾಗುತ್ತದೆ. ನಾಣ್ಯಗಳ ಚರಿತ್ರೆ ಎಲ್ಲರಿಗೂ ಅರಿಯಲು ನೆರವಾಗುತ್ತದೆ. ದೇಶ-ವಿದೇಶದ ನಾಣ್ಯಗಳ ಸಂಗ್ರಹದಿಂದ ಆಯಾ ದೇಶದ ಚರಿತ್ರೆಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಹವ್ಯಾಸ ರೂಢಿಸಿಕೊಳ್ಳಿ: ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹ ಹವ್ಯಾಸ ಇಂದು ಬೆರಳೆಣಿಕೆಯವರಲ್ಲಿ ಮಾತ್ರ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಇಂದಿನ ತಲೆಮಾರಿನವರಿಗೆ ವಾಸಪ್ಪ ಅವರ ಬದುಕು ಮಾದರಿಯಾಗಿದೆ. ಸಮಾಜದಲ್ಲಿನ ಎಲ್ಲರೂ ಇಂಥ ಹವ್ಯಾಸಗಳತ್ತ ಗಮನಹರಿಸಬೇಕಿದೆ ಎಂದು ಹೇಳಿದರು.
ಅತಿಥಿಗಳಾಗಿ ಹಿರಿಯ ಸಾಹಿತಿ ಶಾಶ್ವತಸ್ವಾಮಿ ಮುಕ್ಕುಂದಿಮಠ, ಪದವಿ ಪೂರ್ವ ಇತಿಹಾಸ ಉಪನ್ಯಾಸಕರ ಸಂಘದ ಅಧ್ಯಕ್ಷ ನರಸಪ್ಪ ಭಂಡಾರಿ, ಲೇಖಕ ಈರಣ್ಣ ಬೆಂಗಾಲಿ, ಸಾಹಿತಿ ವೀರಹನುಮಾನ್ ಸೇರಿದಂತೆ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.