ನವ ವಸಾಹತುಶಾಹಿ ವಿರುದ್ಧ ಹೋರಾಡಿ: ಗಂಗಾಧರ
ಸಿಂಧನೂರು: ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿ ಹುತಾತ್ಮರಾದ ಭಗತ್‌ಸಿಂಗ್ ಅವರ ಆಶಯಗಳನ್ನು ಅನುಷ್ಠಾನಕ್ಕೆ ತರುವ ಹಿನ್ನೆಲೆಯಲ್ಲಿ ನವ ವಸಾಹತುಶಾಹಿ ವಿರುದ್ಧ ಯುವಕರು ಹೋರಾಡುವ ಅಗತ್ಯವಿದೆ ಎಂದು ಆರ್‌ವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಎಂ. ಗಂಗಾಧರ ಸಲಹೆ ನೀಡಿದರು.
ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ಭಗತ್‌ಸಿಂಗ್ ಅವರ 84ನೇ ಹುತಾತ್ಮ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ಕೋಮು ದಳ್ಳುರಿಯನ್ನು ಪ್ರಚೋದಿಸುವ ಶಕ್ತಿಗಳಿಗೆ ಪಾಠ ಕಲಿಸಬೇಕಾಗಿದೆ ಎಂದರು.
ರೈತ ಮುಖಂಡ ಜಿ.ರಂಗನಾಥ ಮಾತನಾಡಿ, ರಾಜಿರಹಿತ ಹೋರಾಟದಿಂದ ಜನರ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕಾಗಿದೆ ಎಂದು ಹೇಳಿದರು. ಆರ್‌ವೈಎಫ್‌ಐ ಜಿಲ್ಲಾಧ್ಯಕ್ಷ ಎಚ್.ಬಸವರಾಜ ಕವಿತಾಳ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ಪೂಜಾರ್, ರವಿಕುಮಾರ ಎಂ, ನೀರುಕುಮಾರ, ಕೆ.ರವಿಕುಮಾರ, ನಾಗೇಶ ಗಲಗಿನ, ಬಿ.ಗಂಗಪ್ಪ, ಯಲ್ಲಪ್ಪ ಉಟಕನೂರು, ಅಮೀನಸಾಬ ಇದ್ದರು.
ಭಗತ್‌ಸಿಂಗ್ ಹುತಾತ್ಮ ದಿನಾಚರಣೆ
ಸಿಂಧನೂರು: ನಗರದ ಭಗತ್‌ಸಿಂಗ್ ಆಟೋ ಚಾಲಕರ ಸಂಘ(ಟಿಯುಸಿಐ) ತಾಲೂಕು ಘಟಕದಿಂದ ಸುಕಾಲಪೇಟೆ ರಸ್ತೆಯಲ್ಲಿರುವ ಭಗತ್‌ಸಿಂಗ್ ನಾಮಫಲಕಕ್ಕೆ ಹೂವಿನಹಾರ ಹಾಕುವ ಮೂಲಕ ಗೌರವ ಸಲ್ಲಿಸುವುದರೊಂದಿಗೆ ಹುತಾತ್ಮ ದಿನವನ್ನು ಆಚರಿಸಲಾಯಿತು.
ಉಪನ್ಯಾಸಕ ನಾರಾಯಣ ಬೆಳಗುರ್ಕಿ ಮಾತನಾಡಿ, ಭಗತ್‌ಸಿಂಗ್ ಸ್ವಾತಂತ್ರ್ಯ ಮತ್ತು ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ಜೀವನ ಸಾಧನೆ ಪ್ರತಿಯೊಬ್ಬರಿಗೂ ಮಾದರಿ ಎಂದು ಹೇಳಿದರು.
ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡಿ ಮಾತನಾಡಿದರು. ಶಿಕ್ಷಕ ದುರುಗಪ್ಪ, ಎಂ.ಜಿಲಾನಿ, ಶಿವರಾಜ ಗಿರಿಜಾಲಿ, ಮಹೇಶ ಪೂಜಾರ್, ಹನುಮಂತ ಬಾಲಿ, ಬಾಬುಸಾಬ್, ನಾಗಪ್ಪ ಬಂಗಿ, ವೀರೇಶ ಚೀಕಲಪರ್ವಿ, ಶೇಖರಪ್ಪ ಇನ್ನಿತರರು ಉಪಸ್ಥಿತರಿದ್ದರು. ಕಮಲಬಾಬ ನಿರ್ವಹಿಸಿದರು. ಇದಕ್ಕೂ ಮುನ್ನ ಪಶು ಆಸ್ಪತ್ರೆಯ ಆಟೋ ನಿಲ್ದಾಣದವರೆಗೆ ಭಗತ್ಸಿಂಗ್ ಅವರ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು.
ದಿದ್ದಿಗಿಯಲ್ಲಿ...: ತಾಲೂಕಿನ ದಿದ್ದಿಗಿ ಗ್ರಾಮದ ವಿಶ್ವಚೇತನ ಪ್ರೌಢಶಾಲೆಯಲ್ಲಿ ಭಗತ್‌ಸಿಂಗ್, ರಾಜಗುರು, ಚಂದ್ರಶೇಖರ ಆಜಾದ್ ಅವರ ಹುತಾತ್ಮ ದಿನವನ್ನು ಆಚರಿಸಲಾಯಿತು. ಎಐಡಿವೈಒ ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪ ಉದ್ಬಾಳ ಮಾತನಾಡಿದರು. ಸಿಂಚನ ಸಂಸ್ಥೆ ಉಪಾಧ್ಯಕ್ಷ ಬಸವರಾಜ, ಮುಖಂಡರಾದ ಆದಪ್ಪ ಸಾಹುಕಾರ ಪಟ್ಟಣಶೆಟ್ಟಿ, ಡಾ. ಕುಲಕರ್ಣಿ, ಚನ್ನಪ್ಪ ಸಾಹುಕಾರ, ವೆಂಕೋಬ ಹುನುಗುಂದ, ಸಂಸ್ಥೆಯ ಅಧ್ಯಕ್ಷ ಮಲ್ಲನಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

