'ಸಾಧನೆಗೆ ದೈವೀ ಬಲವೂ ಅಗತ್ಯ'
ಸಾಗರ: ಮನುಷ್ಯ ಸಾಧನೆಗೆ ಪೂರ್ವದಲ್ಲಿ ದೈವೀಶಕ್ತಿಯ ಬಲವೂ ಬೇಕು ಎಂದು ಶೃಂಗೇರಿ ಜಗದ್ಗುರು ಭಾರತೀತೀರ್ಥ ಸ್ವಾಮಿ ಹೇಳಿದರು.
ತಾಲೂಕಿನ ಹೊಸಗುಂದದ ಶ್ರೀ ಉಮಾಮಹೇಶ್ವರ ದೇವಾಲಯ ನಗರಿಯಲ್ಲಿ ಶುಕ್ರವಾರ ಗೋಶಾಲೆಗೆ ಶಂಕುಸ್ಥಾಪನೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು. ರಾಗದ್ವೇಷ ಅತೀತರಾಗಿ ನಾವು ಪರಮಾತ್ಮನನ್ನು ಆಶ್ರಯಿಸುವುದರಿಂದ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಈಗಿನ ಕಾಲದಲ್ಲಿ ಬಡವನಷ್ಟು ನೆಮ್ಮದಿಯಾಗಿ ಶ್ರೀಮಂತ ನಿದ್ದೆ ಮಾಡುತ್ತಿಲ್ಲ. ಯಾವುದೆ ಚಿಂತೆಯಲ್ಲಿದ ಬಡವ ನಿದ್ರೆ ಮಾಡಿದರೆ ಶ್ರೀಮಂತ ಯಾವ ಆಪತ್ತು ಬರುವುದೋ ಎನ್ನುವ ಚಿಂತೆಯಲ್ಲಿ ದಿನ ಕಳೆಯಬೇಕಾಗುತ್ತದೆ. ನೆಮ್ಮದಿಯೆ ಇಲ್ಲದಿದ್ದರೆ ಅಷ್ಟೈಶ್ವರ್ಯ ಇದ್ದರೂ ಫಲವಿಲ್ಲ ಎಂದರು.
ಮಕ್ಕಳಿಗೆ ಬಾಲ್ಯದಲ್ಲಿಯೆ ಧಾಮರ್ಕ ಸಂಸ್ಕಾರಗಳನ್ನು ಕಲಿಸಿಕೊಡುವುದರಿಂದ ಭವಿಷ್ಯದಲ್ಲಿ ಅವರು ಸನ್ಮಾರ್ಗದಲ್ಲಿ ನಡೆಯುತ್ತಾರೆ. ಪೂಜೆಗೆ ಶಾಸ್ತ್ರದಲ್ಲಿ ಯಾವುದೆ ನಿಬಂಧನೆ ಇಲ್ಲ. ಜನರು ದೇವರ ನೆಪ ಹೇಳಿ ಕರ್ತವ್ಯ ಮರೆತರೆ ಅದು ತಪ್ಪು. ನ್ಯಾಯಯುತ ಮಾರ್ಗದಲ್ಲಿ ಸಂಪಾದನೆ ಹಾಗೂ ಧರ್ಮಪರಿಪಾಲನೆ ಮಾಡಿದಾಗ ಮಾತ್ರ ಮನುಷ್ಯಜನ್ಮ ಸಾರ್ಥಕವಾಗುತ್ತದೆ ಎಂದರು.
ಹೊಸ ದೇವಸ್ಥಾನಗಳನ್ನು ಕಟ್ಟುವುದಕ್ಕಿಂತ ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರ ಪುಣ್ಯದಾಯಕ ಕೆಲಸ. ಇಲ್ಲಿ ಉಮಾಮಹೇಶ್ವರ ಸೇವಾ ಟ್ರಸ್ಟಿನವರು ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ಅಭಿವೃದ್ಧಿಪಡಿಸುತ್ತಿರುವುದು ಮಾದರಿಯಾದ ಕೆಲಸ ಎಂದು ಶ್ಲಾಘಿಸಿದ ಶ್ರೀಗಳು ಇನ್ನುಳಿದ ಕಾರ್ಯಕ್ಕೆ ಶ್ರೀಮಠದಿಂದ ಎಲ್ಲಾ ರೀತಿಯ ನೆರವನ್ನು ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹೊಸಗುಂದ ಕುರಿತ ಕಿರುಹೊತ್ತಿಗೆ ಹಾಗೂ ಸಂಗೀತ ಧ್ವನಿ ಸುರಳಿಯನ್ನು ಶ್ರೀಗಳು ಬಿಡುಗಡೆ ಮಾಡಿದರು. ದೆಹಲಿಯ ಸವರ್ಣಾನಂದ ಸ್ವಾಮಿಗಳು, ಸಾಗರ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಎಸ್.ಆರ್. ತಿಮ್ಮಪ್ಪ, ಕಟ್ಟೆ ಶಂಕರಭಟ್, ಅಶ್ವಿನಿಕುಮಾರ್, ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಗಣೇಶ ಹೆಗಡೆ, ಕೆ. ದಿವಾಕರ, ಉಮಾಮಹೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎಂ.ಎನ್. ಶಾಸ್ತ್ರಿ, ಶೋಭಾ ಶಾಸ್ತ್ರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

