ಜಡ್ಡುಗಟ್ಟಿದ ಸಾಹಿತ್ಯ ಕ್ಷೇತ್ರ: ಸಬಿತಾ ಬನ್ನಾಡಿ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.13
ಸಾಹಿತ್ಯ ಕ್ಷೇತ್ರ ಇಂದಿಗೂ ಜಡ್ಡುಗಟ್ಟಿದ ಸ್ಥಿತಿಯಲ್ಲಿದೆ ಎಂದು ಉಪನ್ಯಾಸಕಿ ಹಾಗೂ ವಿರ್ಮಶಕಿ ಡಾ. ಸಬಿತಾ ಬನ್ನಾಡಿ ಆತಂಕ ವ್ಯಕ್ತಪಡಿಸಿದರು.
ಅಂತಃಕರಣ ಪ್ರಕಾಶನ ಸಂಸ್ಥೆ ಶನಿವಾರ ಸಂಜೆ ನಗರದ ಕಮಲಾ ನೆಹರು ಮಹಿಳಾ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸರ್ಜಾಶಂಕರ ಹರಳಿಮಠ ಬರೆದಿರುವ -ಸುಡುಹಗಲ ಸೊಲ್ಲು- ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ಕ್ಷೇತ್ರ ವಿಸ್ತರಣೆಯಾದಂತೆ ಅದರಲ್ಲಿನ ಹುಳುಕುಗಳು ಕೂಡ ಹೆಚ್ಚಾಗುತ್ತಿವೆ ಎಂದು ವಿಷಾದಿಸಿದರು.
ಸಾಹಿತ್ಯಕ್ಕೆ ಜಾತಿ ವ್ಯವಸ್ಥೆಯನ್ನು ನಿರ್ಣಾಮ ಮಾಡುವ ಸಾಮರ್ಥ್ಯವಿದೆ. ಆದರೆ, ಕೇವಲ ಸಾಹಿತ್ಯದಿಂದ ಇಂತಹ ವ್ಯವಸ್ಥೆ ತೊಡೆದು ಹಾಕಬಹುದು ಎಂಬ ಕಲ್ಪನೆ ಸುಳ್ಳು. ಇದರೊಂದಿಗೆ ಆರ್ಥಿಕ ಸ್ಥಿತಿಯಲ್ಲಿಯೂ ಬದಲಾವಣೆ ತರಬೇಕಾಗುತ್ತದೆ ಎಂದರು.
ಬದಲಿಸುವ ಶಕ್ತಿ ಇಲ್ಲ: ಇಂದು ವಿಶ್ವದಲ್ಲಿ ಮಾರುಕಟ್ಟೆ ಕ್ಷೇತ್ರ ವಿಜೃಂಭಿಸುತ್ತಿದೆ. ಅದರೊಂದಿಗೆ ಮಾರುಕಟ್ಟೆ ಸಾಹಿತಿಗಳನ್ನು ಆಳುತ್ತಿದೆ. ಆದ್ದರಿಂದ ಸಾಹಿತ್ಯಕ್ಕೆ ಎಲ್ಲವನ್ನು ಬದಲಿಸುವ ಶಕ್ತಿ ಇಲ್ಲ. ಪ್ರಸ್ತುತ ಕಾರ್ಪೊರೇಟ್ ಕ್ಷೇತ್ರದಿಂದ ಸಾಹಿತಿಗಳು ಬರುತ್ತಿರುವುದು ಆಶಾದಾಯಕವಾಗಿದೆ. ಆದರೆ, ಸಾಹಿತ್ಯವನ್ನು ಕಾರ್ಪೋರೇಟೀಕರಣ ಮಾಡದಿದ್ದರಾಯಿತು ಎಂದರು.
ಪ್ರಶಸ್ತಿ ಪಡೆಯುವ ಉದ್ದೇಶದಿಂದ ಸಾಹಿತಿಗಳು ಹುಟ್ಟಿಕೊಳ್ಳುತ್ತಿದ್ದು, ಅದೇ ರೀತಿ ಪ್ರಶಸ್ತಿ ಹಾವಳಿ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕ ವಾತಾವರಣ ಸಹ ಸಾಹಿತ್ಯಾಸಕ್ತರಿಂದ ದೊರೆಯುತ್ತಿದೆ. ಒಂದು ಪ್ರಶಸ್ತಿ ಬಂತೆಂದರೆ ಸಾಕು, ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಗಳು, ಬ್ಯಾನರ್, ಫ್ಲೆಕ್ಸ್ಗಳನ್ನು ಹಾಕಿ ಹೆಚ್ಚಿನ ಪ್ರಚಾರ ನೀಡುವುದರಿಂದ ಪ್ರಶಸ್ತಿ ಪಡೆಯಚ್ಚಿಸುವ ಸಾಹಿತಿಗಳು ಹೆಚ್ಚಾಗುತ್ತಿದ್ದಾರೆ ಎಂದರು.
ಒಗ್ಗಟ್ಟು ಕಡಿಮೆ: ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾವಂತರು ಬದಲಾಗುತ್ತಿದ್ದಾರೆ. ಇಂದಿನ ವಿದ್ಯಾವಂತರಲ್ಲಿ ಒಗ್ಗಟ್ಟು ಎಂಬುದು ಕಡಿಮೆಯಾಗುತ್ತಿದೆ. ಶಾಲಾ, ಕಾಲೇಜುಗಳಲ್ಲಿ ಜಾತೀಯತೆ ಮುಂದುವರೆಯುತ್ತಿದೆ. ಇದು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆಂತಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಶ್ರೀಕಂಠ ಕೊಡಿಗೆ, ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ, ಲೇಖಕ ಸರ್ಜಾಶಂಕರ ಹರಳಿಮಠ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

