ಶಿವಮೊಗ್ಗ

ಪ್ರಸನ್ನಕುಮಾರ್ ಬೆಂಬಲಕ್ಕೆ ನಿಂತ ದಿವಾಕರ್

Published On :

ಶಿವಮೊಗ್ಗ: ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ. ದಿವಾಕರ್ ಅವರು ಶನಿವಾರ ಸಮಾವೇಶದಲ್ಲಿ  ವೇದಿಕೆ ಹಂಚಿಕೊಂಡು ಅಚ್ಚರಿ ಮೂಡಿಸಿದರು. ತಾವು ಮಾತನಾಡುವ ಸರದಿ ಬಂದಾಗ, ನಾನು ಶಿವಮೊಗ್ಗ  ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ. ಆದರೆ ಪಕ್ಷ ಪ್ರಸನ್ನಕುಮಾರ್ ಅವರನ್ನು ಗುರುತಿಸಿದೆ.  ತಾವು ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಅಷ್ಟೇ ಅಲ್ಲದೆ ಬಿಜೆಪಿ ನಾಯಕರ ವಿರುದ್ಧ ಇದೇ ಸಂದರ್ಭದಲ್ಲಿ ಹರಿಹಾಯ್ದರು. ಅಭಿವೃದ್ಧಿ ಎಂದರೆ ಕೇವಲ  ಗುಂಡಪ್ಪ ಶೆಡ್- ವಿನೋಬನಗರದ ಅಭಿವೃದ್ಧಿಯಲ್ಲ. ಸೀಗೆಹಟ್ಟಿ, ಬಿಬಿ ರಸ್ತೆ, ಅಂಗಳಯ್ಯನಕೆರೆ, ಪೆನ್ಷನ್  ಮೊಹಲ್ಲಾ ಕೂಡ ಅಭಿವೃದ್ಧಿಯಾಗಬೇಕು. ಈಶ್ವರಪ್ಪ ಯಡಿಯೂರಪ್ಪ ನೆಮ್ಮದಿಯಾಗಿದ್ದರೆ ಸಾಲದು. ಈ ನೆಲದ ಅತ್ಯಂತ ಬಡವ ನೆಮ್ಮದಿಯಿಂದಿರುವಂತಾಗಬೇಕು ಎಂದರು.
ಭ್ರಷ್ಟಾಚಾರಕ್ಕೆ, ಆಸ್ತಿ ಕಬಳಿಕೆಗೆ ಕಡಿವಾಣ ಬೀಳಬೇಕು. ಬಿಜೆಪಿಯಲ್ಲಿ ಎಲ್ಲಾ ಭ್ರಷ್ಟ ಮುಖಗಳನ್ನು ತೀರಾ ಹತ್ತಿರದಿಂದ ನೋಡಿ ಈಗ ಮಾತೃ ಪಕ್ಷಕ್ಕೆ ಬಂದಿದ್ದೇನೆ. ಖಂಡಿತ ಬಿಜೆಪಿ ಹಾಗೂ ಅದರ ನಾಯಕರ ಸಹವಾಸ ಬೇಡವೇ ಬೇಡ ಎಂದು ಅವರು ಒಂದು ಕ್ಷಣ ಭಾವುಕರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.