ಕೆ. ಅರುಣಪ್ರಸಾದ್ ನೇಮಕ: ಬುಗಿಲೆದ್ದ ಅಸಮಾಧಾನ
ಸಾಗರ: ಕೆ. ಅರುಣಪ್ರಸಾದ್ ಅವರನ್ನು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಸಂಬಂಧ ಪಕ್ಷದ ತಾಲೂಕು ಘಟಕದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪಕ್ಷದ ರಾಜ್ಯ ಕಾರ್ಯದರ್ಶಿ ಚಾಬೂಸಾಬ್, ಒಮ್ಮೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಕೆ. ಅರುಣಪ್ರಸಾದ್ ಅವರಿಗೆ ಏಕಾಏಕಿ ಪಕ್ಷದ ತಾಲೂಕು ಅಧ್ಯಕ್ಷ ಸ್ಥಾನ ನೀಡಿರುವುದು ಸರಿಯಲ್ಲ. ಅರುಣಪ್ರಸಾದ್ ಅವರ ನೇಮಕ ಕುರಿತು ನನಗೂ ತಿಳಿದಿಲ್ಲ ಎಂದರು.
ಗೋಪಾಲಕೃಷ್ಣ ಬೇಳೂರು ಜೆಡಿಎಸ್ಗೆ ಬಂದಿರುವುದರಿಂದ ಪಕ್ಷಕ್ಕೆ ಬಲ ಬಂದಿದೆ. ಅವರನ್ನು ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಹೃತೂರ್ವಕವಾಗಿ ಸ್ವಾಗತಿಸಿದ್ದಾರೆ. ಆದರೆ ಪಕ್ಷ ಬಿಟ್ಟು ಹೋಗಿದ್ದ ಅರುಣಪ್ರಸಾದ್ ಅವರಿಗೆ ಏಕಾಏಕಿ ಪಕ್ಷದ ತಾಲೂಕು ಘಟಕದ ಅಧ್ಯಕ್ಷಸ್ಥಾನ ನೀಡಿರುವುದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಎಚ್ಡಿಕೆ ಗಮನಕ್ಕೆ...: ಈಗಾಗಲೇ ಪಕ್ಷವು ಬಸವರಾಜ ಗೌಡ ಬೈದೂರು ಅವರನ್ನು ಪಕ್ಷದ ತಾಲೂಕು ಅಧ್ಯಕ್ಷರನ್ನಾಗಿ ನೇಮಿಸಿದೆ. ಅವರು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಯಾವುದೆ ಸೂಚನೆ ನೀಡದೆ ಹೊಸಬರನ್ನು ಅಧ್ಯಕ್ಷ ಸ್ಥಾನಕ್ಕೆ ತಂದಿರುವುದರ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪಕ್ಷದ ಯುವ ಘಟಕದ ಅಧ್ಯಕ್ಷ ಉಮೇಶ್, ಗೋಪಾಲಕೃಷ್ಣ ಬೇಳೂರು ಪಕ್ಷಕ್ಕೆ ಬಂದಿರುವುದನ್ನು ನಾವ್ಯಾರೂ ವಿರೋಧಿಸುವುದಿಲ್ಲ. ಅರುಣಪ್ರಸಾದ್ ಬಂದಿರುವುದೂ ಸ್ವಾಗತಾರ್ಹ. ಆದರೆ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿರುವುದು ಮಾತ್ರ ಸರಿಯಲ್ಲ. ಅರುಣಪ್ರಸಾದ್ ನೇಮಕ ಕುರಿತು ಜಿಲ್ಲಾ ಘಟಕ ನಮಗೆ ಯಾವುದೆ ಮಾಹಿತಿಯನ್ನು ನೀಡಿಲ್ಲ. ತಕ್ಷಣ ಅರುಣಪ್ರಸಾದ್ ನೇಮಕವನ್ನು ರದ್ದುಪಡಿಸಿ, ಹಿಂದಿನ ಸಮಿತಿಯ ಪದಾಧಿಕಾರಿಗಳನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ಕಾರ್ಯಾಧ್ಯಕ್ಷ ಬಸವರಾಜ ಗೌಡ ಬೈದೂರು, ಕನ್ನಪ್ಪ ಬೆಳಲಮಕ್ಕಿ, ಶೈಲೇಂದ್ರ ಬಂದಗದ್ದೆ, ಮಾಲಾ ರಾಘವೇಂದ್ರ, ದಿವಾಕರ್, ಕೆ.ಎಚ್. ಅಣ್ಣಪ್ಪ, ಧನರಾಜ್ ಹಾಜರಿದ್ದರು.
ಒಟ್ಟು 12 ನಾಮಪತ್ರ
ಸೊರಬ: ಪ್ರಸಕ್ತ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದ ಬುಧವಾರ, ಬಿಎಸ್ಪಿಯಿಂದ ಗುಡ್ಡಪ್ಪ, ಪಕ್ಷೇತರ ಅಭ್ಯರ್ಥಿಯಾಗಿ ಕೆ. ಗುರುಮೂರ್ತಿ ಓಟೂರು, ಬಿಎಸ್ಪಿ ಬಂಡಾಯ ಅಭ್ಯರ್ಥಿ ಗುಡವಿ ಬಸವಣ್ಯಪ್ಪ, ಸಂಯುಕ್ತ ಜನತಾದಳದಿಂದ ಸತ್ಯನಾರಾಯಣ್, ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಭೀಮಪ್ಪ ನಾಮಪತ್ರ ಸಲ್ಲಿಸಿದರು.
ಕೆಜೆಪಿ ಅಭ್ಯರ್ಥಿ ಹಾಲಪ್ಪ, ಬಿಜೆಪಿ ಅಭ್ಯರ್ಥಿ ಚಿಕ್ಕಾವಲಿ ನಾಗರಾಜಗೌಡ, ಬಿಎಸ್ಆರ್ ಕಾಂಗ್ರೆಸ್ನ ಬಾಸೂರು ಚಂದ್ರೇಗೌಡ, ಬಿ ಫಾರಂ ಸಲ್ಲಿಸಿದರು.
ಇಲ್ಲಿಯವರೆಗೆ 4 ರಾಷ್ಟ್ರೀಯ ಪಕ್ಷ 3 ಪ್ರಾದೇಶಿಕ ಪಕ್ಷ, 2 ಬಂಡಾಯ, 3 ಪಕ್ಷೇತರ, ಒಟ್ಟು 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

