ಅನಾಥ ಶವ ಪತ್ತೆ
ಶಿಕಾರಿಪುರ: ಪಟ್ಟಣಕ್ಕೆ ಸಮೀಪದ ಎರೇಕಟ್ಟೆ ಗ್ರಾಮದಲ್ಲಿನ ಒನಕೆಮಟ್ಟಿ ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿನ ಅನಾಥ ಪುರುಷ ಶವ ಪತ್ತೆಯಾಗಿದೆ. ತಾಲೂಕಿನ ಎರೇಕಟ್ಟೆ ಗ್ರಾಮದ ಒನಕೆಮಟ್ಟಿ ಗುಡ್ಡದಲ್ಲಿ ಮಂಜುನಾಥ ಎಂಬ ಯುವಕ ಮೇಕೆಗಳನ್ನು ಮೇಯಿಸುತ್ತಿದ್ದಾಗ, ಸಮೀಪದಲ್ಲಿಯೇ ಅನಾಥವಾಗಿ ಅಂದಾಜು 4-5 ದಿನದ ಹಿಂದೆ ಮೃತಪಟ್ಟಿರುವ ಪುರುಷನ ಕೊಳೆತ ಶವವಾಗಿದೆ ಎಂದು ಪಟ್ಟಣದ ಗ್ರಾಮಾಂತರ ಠಾಣೆಗೆ ಯುವಕ ದೂರು ನೀಡಿದ್ದಾನೆ. ಅಂದಾಜು 35 ರಿಂದ 40 ವರ್ಷ ವಯಸ್ಸಿನ 5.5 ಅಡಿ ಎತ್ತರದ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಪ್ಯಾರಾಗಾನ್ ಚಪ್ಪಲಿ ಹಾಕಿದ್ದಾನೆ. ಎಂದು ತಿಳಿಸಿದ್ದಾರೆ.
ಮಟ್ಕಾ ಜೂಜಾಟ: ಬಂಧನ
ಭದ್ರಾವತಿ: ಸೀಗೆಬಾಗಿಯ ಶೃಂಗಾರ್ ಹೋಟೆಲ್ ಬಳಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಹಳೇನಗರ ಪೊಲೀಸರು ಅಬ್ಲುಲ್ ಹುಸೇನ್ ಎಂಬವನನ್ನು ಬಂಧಿಸಿ ರು. 400 ಮತ್ತು ಮಟ್ಕಾಕ್ಕೆ ಬಳಸಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ವಂಚನೆ ಪ್ರಕರಣ: ದೂರು
ಶಿವಮೊಗ್ಗದ ಮಾಮ್ಕೋಸ್ ವ್ಯವಸ್ಥಾಪಕ ರಾಘವೇಂದ್ರ, ಭದ್ರಾವತಿಯ ಮಾಮ್ಕೋಸ್ನ ಸತೀಶ ಮತ್ತು ಕೂಡ್ಲಿಗೆರೆಯ ಹಾಲೇಶ ಎಂಬವರಿಗೆ ಕೂಡ್ಲಿಗೆರೆಯ ಹಾಲಪ್ಪ ಎಂಬವರು ರು. 2,33,371 ಮೌಲ್ಯದ 20 ಚೀಲ ಅಡಕೆ ಮಾರಾಟ ಮಾಡಿದ್ದು, ಅದರಲ್ಲಿ ಒಂದು ಲಕ್ಷ ರು.ಗಳನ್ನು ನೀಡಿದ್ದ ಖರೀದಿದಾರರು ಬಾಕಿ ಹಣವನ್ನು ಬಡ್ಡಿ ಸಹಿತ ನೀಡುವುದಾಗಿ ಹೇಳಿ ಹಣವನ್ನು ನೀಡದೆ ವಂಚಿಸಿದ್ದಾರೆ ಎಂದು ಹಾಲಪ್ಪ ಹಳೇನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಕ್ಷಿಣೆ ಕಿರುಕುಳ
ಸುಭಾಶ್ನಗರ ವಾಸಿ ಸವಿತಾ ಎಂಬವರಿಗೆ ಪತಿ ಬಸವರಾಜಪ್ಪ ದಿನನಿತ್ಯ ಪಾನಮತ್ತನಾಗಿ ಬಂದು ಅವಾಚ್ಯವಾಗಿ ನಿಂದಿಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುವುದಲ್ಲದೆ ತವರುಮನೆಯಿಂದ ಕೊಟ್ಟಂತಹ ಬಂಗಾರದ ಒಡವೆಗಳನ್ನು ಮಾರಾಟ ಮಾಡಿ ಬಂದ ಹಣವನ್ನು ತನ್ನ ದುಶ್ಟಟಗಳಿಗೆ ವ್ಯಯಮಾಡಿ ಪುನಃ ತವರು ಮನೆಯಿಂದ ಹಣ ತರಲು ಹಿಂಸಿಸುತ್ತಿರುವುದಾಗಿ ಸವಿತಾ ಹಳೇನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

