ಶಿವಮೊಗ್ಗ

ವಾಲಿಬಾಲ್: ಹೊಂಗಿರಣ, ರಾಮಕೃಷ್ಣ ಶಾಲೆಗೆ ಜಯ

Published On :

ಶಿವಮೊಗ್ಗ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಕ್ರೀಡಾ ಇಲಾಖೆ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪ್ರೌಢಶಾಲಾ ಬಾಲಕ- ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ಚುಂಚಾದ್ರಿ ಕಪ್‌ನ ಮೂರನೇ ದಿನ ಸಾಗರದ ಹೊಂಗಿರಣ, ರಾಮಕೃಷ್ಣ ಶಾಲೆ ಸೇರಿದಂತೆ ವಿವಿಧ ಶಾಲಾ ತಂಡಗಳು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ತಲುಪಿದವು. ಸಾಗರದ ರಾಮಕೃಷ್ಣ ಹಿರಿಯ ಶಾಲೆ ಹಾಗೂ ಶಿವಮೊಗ್ಗದ ಮಂದಾರ ಹಿರಿಯ ಶಾಲೆ ನಡುವಿನ ಪಂದ್ಯಾವಳಿಯಲ್ಲಿ ರಾಮಕೃಷ್ಣ ಹಿರಿಯ ಶಾಲೆ 50-29 (ಮೂರು ಸೆಟ್‌ಗಳಲ್ಲಿ) ಅಂತರದಿಂದ ಜಯಗಳಿಸಿದೆ.
ಶಿವಮೊಗ್ಗದ ಕೇಂಬ್ರಿಡ್ಜ್ ಹಿರಿಯ ಶಾಲೆ ಮತ್ತು ಕಿದ್ವಾಯಿ ಹಿರಿಯ ಶಾಲೆ ನಡುವಿನ ಪಂದ್ಯದಲ್ಲಿ ಕೇಂಬ್ರಿಡ್ಜ್ 50-27(ಮೂರು ಸೆಟ್‌ಗಳಲ್ಲಿ), ಹೊಸನಗರದ ಹೋಲಿ ರೆಡಿಮಿರ್ ಹಿರಿಯ ಶಾಲೆ ಮತ್ತು ಶಿವಮೊಗ್ಗದ ಶ್ರೀ ರಾಮಕೃಷ್ಣ ಹಿರಿಯ ಶಾಲೆ ಪಂದ್ಯದಲ್ಲಿ ಹೋಲಿ ರೆಡಿಮಿರ್ ಶಾಲೆ 50-22 (ಮೂರು ಸೆಟ್‌ಗಳಲ್ಲಿ), ಸಾಗರದ ಹೊಂಗಿರಣ ಹಿರಿಯ ಶಾಲೆ ಮತ್ತು ಶಿವಮೊಗ್ಗದ ಮಹಾವೀರ ಹಿರಿಯ ಶಾಲೆ ಪಂದ್ಯದಲ್ಲಿ ಹೊಂಗಿರಣ ಹಿರಿಯ ಸರ್ಕಾರಿ ಹಿರಿಯ ಶಾಲೆ  50-34 (ಮೂರು ಸೆಟ್‌ಗಳಲ್ಲಿ) ಅಂತರದಲ್ಲಿ ಜಯ ಸಾಧಿಸಿವೆ.

ನಾಳೆ ಉಪನ್ಯಾಸ
ಸಾಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀಮತಿ ಇಂದಿರಾ ಗಾಂಧಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಆ. 13ರಂದು ಬೆಳಿಗ್ಗೆ 11ಕ್ಕೆ ಕಾಲೇಜಿನ ಆವರಣದಲ್ಲಿ ಕನ್ನಡಾಭಿಮಾನ ಕುಸಿಯುತ್ತಿದೆಯೇ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಲಿದ್ದು, ವಿಷಯ ಕುರಿತು ಸಾಹಿತಿ ಡಾ.ನಾ. ಡಿಸೋಜ ಉಪನ್ಯಾಸ ನೀಡಲಿದ್ದಾರೆ. ಅಶೋಕ ಡಿ. ರೇವಣಕರ್ ಹಾಜರಿರುವರು.

ಕೌಶಲ್ಯ ತರಬೇತಿ
ಶಿವಮೊಗ್ಗ: ಕೌಶಲ್ಯ ತರಬೇತಿ ಕೇಂದ್ರ ಭಾರತ ಸರ್ಕಾರ, ರಾಜ್ಯ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಶ್ರಯದಲ್ಲಿ ನಗರದ ದೈವಜ್ಞ ವಿದ್ಯಾಸಂಸ್ಥೆಯಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಸ್ವಾವಲಂಭಿಯಾಗಿ ಕಾರ್ಯನಿರ್ವಹಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಅಲ್ಫಾವಧಿಯ ಕೌಶಲ್ಯ ತರಬೇತಿ ಹಮ್ಮಿಕೊಂಡಿದೆ.
ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೇಂದ್ರ ತಿಳಿಸಿದೆ. ತರಬೇತಿ ಪಡೆಯುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಂಪ್ಲಾಯಬಲ್ ಸ್ಕಿಲ್ ಪರೀಕ್ಷೆ ಬರೆದು ಉತ್ತೀರ್ಣರಾದವರಿಗೆ ಭಾರತ ಸರ್ಕಾರದ ಕೌಶಲ್ಯ ತರಬೇತಿ ಅರ್ಹತೆಯ ಎಂಇಎಸ್ ಪ್ರಮಾಣ ಪತ್ರ ನೀಡಲಾಗುವುದು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅನುಗುಣವಾಗಿ ಕೇಂದ್ರ ಸರ್ಕಾರದಿಂದ ತರಬೇತಿ ವೆಚ್ಚ ಮರುಪಾವತಿ ಸೌಕರ್ಯ ಹೊಂದಿರುತ್ತದೆ.
14 ವರ್ಷ ಮೇಲ್ಪಟ್ಟವರು ಅರ್ಜಿಗಳನ್ನು ತರಬೇತಿ ಕೇಂದ್ರದಲ್ಲಿ ಪಡೆದು ಸಲ್ಲಿಸಬಹುದು. ಟೈಲರ್ ಬೇಸಿಕ್ ಸೇವಿಂಗ್ ಆಪರೇಟರ್), ಕಂಪ್ಯೂಟರ್ ಫಂಡಮೆಂಟಲ್, ಬ್ಯುಟಿಷಿಯನ್ ಬೇಸಿಕ್ ಆಫ್ ಬ್ಯುಟಿ) ಕುರಿತು ತರಬೇತಿ ನೀಡಲಾಗುವುದು ಎಂದು ದೈವಜ್ಞ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಿಳಿಸಿದ್ದಾರೆ. ವಿವರಗಳಿಗಾಗಿ- 08182-264847.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.