ಶಿವಮೊಗ್ಗ

ಧ್ವಜಾರೋಹಣದಲ್ಲಿ ತಪ್ಪು ನಡೆದಿಲ್ಲ: ಅಣ್ಣಾಜಿಗೌಡ

Published On :

ಸೊರಬ: ಆಗಸ್ಟ್ 15 ರಂದು ನಡೆದ ಧ್ವಜಾರೋಹಣದಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ಪಿಎಲ್‌ಡಿಸಿಬಿ ಅಧ್ಯಕ್ಷ ಅಣ್ಣಾಜಿ ಗೌಡ ತಿಳಿಸಿದ್ದಾರೆ.
ಪಟ್ಟಣದಲ್ಲಿ ಕೆಲವು ಸಂಸ್ಥೆಗಳವರು ಬೇಕಾಬಿಟ್ಟಿ ಧ್ವಜಾರೋಹಣ ನೆರವೇರಿಸಿದ್ದಾರೆ ಎಂಬ ಆಕ್ಷೇಪ ಕನ್ನಡಪ್ರಭ ಪತ್ರಿಕೆಯಲ್ಲಿ ವ್ಯಕ್ತವಾಗಿದ್ದನ್ನು ಗಮನಿಸಿರುವ ಅವರು ಪತ್ರಿಕಾ ಹೇಳಿಕೆ ನೀಡಿ, ಈ ಹಿಂದಿನಿಂದಲೂ ನಡೆಸಿಕೊಂಡು ಬಂದಂತೆ ನಾವೂ ಧ್ವಜಾರೋಹಣ ನೆರವೇರಿಸಿದ್ದೇವೆ. ಅಕಸ್ಮಾತ್‌ಧ್ವಜಾರೋಹಣ ಸಂದರ್ಭದಲ್ಲಿ ತಪ್ಪಾಗುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ.
ಪಟ್ಟಣದ ಅನೇಕ ಸಂಸ್ಥೆಗಳವರು ಕಟ್ಟಡದ ಮೇಲ್ಭಾಗದಲ್ಲಿ, ಇಕ್ಕಟ್ಟಾದ ಜಾಗೆಯಲ್ಲಿ ಧ್ವಜಾರೋಹಣ ನೆರವೇರಿಸುತ್ತಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿತ್ತು.
ಶ್ರೀ ಕೃಷ್ಣ ಸಂಧಾನ
ಶಿವಮೊಗ್ಗ: ಕಲ್ಲಗದ್ದೆಯ ಶಂಭು ಶಿಷ್ಯ ಯಕ್ಷಗಾನ ಪ್ರತಿಷ್‌ಠಾನ ಆ17ರಂದು ಸಂಜೆ 5.30ರಿಂದ ಕುವೆಂಪು ರಂಗಮಂದಿರದಲ್ಲಿ  ಶ್ರೀ ಕೃಷ್ಣ ಸಂಧಾನ ಯಕ್ಷಗಾನ ಪ್ರದರ್ಶನ ಏರ್ಪಡಿಸಿದೆ. ಹಿಮ್ಮೇಳದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಾರಾಯಣ ಭಾಗವತರು ನೆಬ್ಬೂರು, ಕೇಶವ ಹೆಗಡೆ, ಮೃದಂಗ ಶಂಕರ ಭಾಗವತರು ಯಲ್ಲಾಪುರ, ಚಂಡೆ ಗಣೇಶ ಹೆಗಡೆ ಹಾಗೂ ಮುಮ್ಮೇಳದಲ್ಲಿ ಉಮಾಕಾಂತ ಭಟ್ಟ ಮೇಲುಕೋಟೆ, ಕೆ.ಜಿ. ಮಂಜುನಾಥ ಕೆಳಮನೆ, ವೆಂಕಟೇಶ ಹೆಗಡೆ ಓಜಗಾರ, ವಿನಾಯಕ ಹೆಗಡೆ ಕಲ್ಲಗದ್ದೆ, ದತ್ತಮೂರ್ತಿ ಭಟ್ಟ, ಶ್ರೀಧರ ಹೆಗಡೆ ಚಪ್ಪರಮನೆ, ಸ್ತ್ರೀ ವೇಷವನ್ನು ಈಶ್ವರ್ ಪ್ರಸಾದ್ ಧರ್ಮಸ್ಥಳ ಇವರು ಧರಿಸುವರು ಎಂದು ನೆಬ್ಬೂರು ನಾರಾಯಣ ಭಾಗವತ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.