ಮೋಟರ್ ಸೈಕಲ್ ರೇಸ್
ಶಿವಮೊಗ್ಗ: ಆಗರದಹಳ್ಳಿಯಲ್ಲಿ ಭಾನುವಾರ ಮೋಟಾರ್ ಸೈಕಲ್ನದ್ದೇ ಸದ್ದು. ಅಪರೂಪದ ಸ್ಪರ್ಧೆಯೊಂದು ಆ ಪುಟ್ಟಹಳ್ಳಿಯಲ್ಲಿ ಆಯೋಜನೆಗೊಂಡಿತ್ತು.
ಅಗರದಹಳ್ಳಿಯ ಫ್ರೆಂಡ್ಸ್ ಮೋಟಾರ್ ಸ್ಪೋರ್ಟ್ಸ್ ಆಕಾಡೆಮಿ ಭಾನುವಾರ ಮೋಟಾರ್ ಸೈಕಲ್ ರೈಡಿಂಗ್ ಸ್ಪರ್ಧೆ ಆಯೋಜಿಸಿತ್ತು. ಈ ಭಾಗಕ್ಕೆ ಅಪರೂಪವಾದ ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಸ್ಪರ್ಧೆ ಗೆಲ್ಲುವ ಉತ್ಸಾಹವಾದರೆ, ಅಪರೂಪದ ಸ್ಪರ್ಧೆಯನ್ನು ವೀಕ್ಷಿಸಿದ ಹಳ್ಳಿಗರಿಗೆ ಕಾತರ.
ಮೋಟರ್ ಸೈಕಲ್ ಸವಾರರ ವೇಗದ ಚಾಲನೆ, ಕರಾರುವಾಕ್ ಟರ್ನಿಂಗ್ಗಳು ಹಳ್ಳಿಗರನ್ನು ಮೂಕವಿಸ್ಮಿತವನ್ನಾಗಿಸಿತು. ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ಬೈಕ್ ಸವಾರರ ಸಾಹಸ ರಂಜಿಸಿತು. ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಹುಬ್ಬಳ್ಳಿಯ ವಿವಿಧ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಅಂತಿಮವಾಗಿ ಶಿವಮೊಗ್ಗದ ಆರ್-14 ತಂಡದ ಆರ್.ಇ. ರಾಜೇಂದ್ರ ಬೆಸ್ಟ್ ಬೈಕ್ ರೈಡರ್ ಸ್ಥಾನ ಪಡೆದುಕೊಂಡರು. ನೋವಿಸ್ ಕ್ಲಾಸ್ವಿಭಾಗದಲ್ಲಿ ಹಾಸನದ ಮಣಿ ಪ್ರಥಮ, ಚಿಕ್ಕಮಗಳೂರಿನ ಅಮೂಲ್ ದ್ವಿತೀಯ, ಚಿಕ್ಕಮಗಳೂರಿನ ಆಸೀಫ್ ಆಲಿ ತೃತೀಯ. ಇಂಟರ್ ಮಿಡಿಯೇಟ್ ಕ್ಲಾಸ್ವಿಭಾಗದಲ್ಲಿ ಹಾಸನದ ಹತೀಕ್ ಖಾನ್ ಪ್ರಥಮ, ಬೆಂಗಳೂರಿನ ರಾಕೇಶ್ ದ್ವಿತೀಯ, ಚಿಕ್ಕಮಗಳೂರಿನ ಸಮೀರ್ ಸೇಟ್ ತೃತೀಯ ಸ್ಥಾನ ಪಡೆದರು.
ಫ್ರೆಂಡ್ಸ್ ಮೋಟಾರ್ ಓಪನ್ ಕ್ಲಾಸ್ವಿಭಾಗದಲ್ಲಿ ಶಿವಮೊಗ್ಗದ ಆರ್.ಇ. ರಾಜೇಂದ್ರ ಪ್ರಥಮ, ಬೆಂಗಳೂರಿನ ಮಧು ದ್ವಿತೀಯ, ನಟರಾಜ್ತೃತೀಯ, ಇಂಡಿಯನ್ ಓಪನ್ ವಿಭಾಗದಲ್ಲಿ ಬೆಂಗಳೂರಿನ ಮಧು ಪ್ರಥಮ, ಶಿವಮೊಗ್ಗದ ಆರ್.ಇ. ರಾಜೇಂದ್ರ ದ್ವಿತೀಯ, ಬೆಂಗಳೂರಿನ ರಾಕೇಶ್ ತೃತೀಯ ಸ್ಥಾನಪಡೆದುಕೊಂಡರು.
ಲೋಕನ್ ಬಾಯ್ಸ್ ವಿಭಾಗದಲ್ಲಿ ಶಿವಮೊಗ್ಗದ ನಥಾಯಿನ್ ಸೋನ ಪ್ರಥಮ, ಸಲ್ಮಾನ್ ಶೇಕ್ ದ್ವಿತೀಯ, ವಿಲ್ವಿನ್ ಕೌಂಡ್ಸ್ ಜಯಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

