ಗುರುಗುಹದಿಂದ ವೀಣಾ ಮಹೋತ್ಸವ ದಶಮಾನೋತ್ಸವ
ಶಿವಮೊಗ್ಗ: ಗುರುಗುಹ ವಾಗ್ಗೇಯ ಪ್ರತಿಷ್ಠಾನ ಹಾಗೂ ಸಂಗೀತ ಮಹಾವಿದ್ಯಾಲಯವು ಡಿ. 8ರಿಂದ 17ರವರೆಗೆ ಮಾರ್ಗಶಿರ ವೀಣಾ ಮಹೋತ್ಸವ ದಶಮಾನೋತ್ಸವ ಹಮ್ಮಿಕೊಂಡಿದ್ದು, ಇದರಂಗವಾಗಿ 10 ದಿನಗಳ ಕಾಲ ವೀಣಾ ಕಾರ್ಯಕ್ರಮ, ವೀಣಾ ನಾದ ಧ್ಯಾನ ಯಜ್ಞ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ವಿವರಣೆ ನೀಡಿದ ಮಹಾವಿದ್ಯಾಲಯದ ಪ್ರಾಂಶುಪಾಲ ವಿದ್ವಾನ್ ಶೃಂಗೇರಿ ಎಚ್.ಎಸ್.ನಾಗರಾಜ್, ಕರ್ನಾಟಕ ಸಂಗೀತದ ಇತಿಹಾಸದಲ್ಲಿಯೇ ಒಂದು ವಾರ ಪೂರ್ಣ ಪ್ರಸಿದ್ಧ ವೀಣಾ ವಿದ್ವಾಂಸರ ವೀಣಾ ಕಾರ್ಯಕ್ರಮದ ಸಂಭ್ರಮ ಸಪ್ತಾಹ ಆಚರಣೆಯು ನಡೆಯುವುದು ಕಂಡುಬರುವುದಿಲ್ಲ ಎಂದರು. ಗುರುಗುಹ ಸಂಸ್ಥೆಯಿಂದ ನಿರಂತರವಾಗಿ 9 ವರ್ಷಗಳಿಂದ ವೀಣಾ ಉತ್ಸವ ನಡೆಸಿಕೊಂಡುಬರಲಾಗಿದೆ. ಈ ಬಾರಿ ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ದಶಮಾನೋತ್ಸವದ ಅಂಗವಾಗಿ, 10 ದಿನ ಕಾರ್ಯಕ್ರಮ ನಡೆಯಲಿದೆ. ಈ ಉತ್ಸವ ಶಿವಮೊಗ್ಗೆಯ ಹಿರಿಯ ಸಂಗೀತ ವಿದ್ವಾಂಸ, ಕೀರ್ತಿಶೇಷ ವಿ.ಎಚ್.ಆರ್. ಪ್ರಸನ್ನ ವೆಂಕಟೇಶ್ ಅವರಿಗೆ ಸಮರ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ನಾದ ಧ್ಯಾನ ಯಜ್ಞ: ವೀಣಾ ನಾದ ಧ್ಯಾನ ಯಜ್ಞವು ನ. 9ರಿಂದ 18ರವರೆಗೆ ರವೀಂದ್ರ ನಗರದ 1ನೇ ತಿರುವಿನಲ್ಲಿರುವ ಅನುಗ್ರಹದಲ್ಲಿ (ಡಾ.ವೆಂಕಟರಾವ್ ನಿವಾಸ) ಬೆಳಗ್ಗೆ 6.30ರಿಂದ 8ರವರೆಗೆ ನಡೆಯುವುದು. ಸರಸ್ವತಿ ಹಾಗೂ ವೀಣೆಗೆ ಪೂಜಾ ಕೈಂಕರ್ಯದೊಂದಿಗೆ ವಿಶೇಷವಾಗಿ ಧ್ವನಿವರ್ಧಕ ರಹಿತವಾಗಿ ವೀಣಾ ವಾದನ ಆಯೋಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

