ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ
ಶಿವಮೊಗ್ಗ: ಅಗಜೆ ಸಂಗೀತ ವಿದ್ಯಾಲಯ ನಗರದ ವಿವೇಕಾನಂದ ಬಡಾವಣೆಯ ಶ್ರೀ ನಾಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ ಆಯೋಜಿಸಿತ್ತು.
ಪಾಶ್ಚತ್ಯ ಸಂಗೀತವನ್ನಾಧರಿಸಿ ಕರ್ನಾಟಕ ಸಂಗೀತದಲ್ಲಿ ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ನೊಟ್ಟು ಸ್ವರಗಳ ಗೋಷ್ಠಿ ಗಾಯನವನ್ನು ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಎಂ.ಯು. ರಾಘವೇಂದ್ರಪ್ರಭು ತಬಲ ಸಹಕಾರ ನೀಡಿದರು.
ನಂತರ ವಿದುಷಿ ಕೃಪಾ ದೀಕ್ಷಿತರು ರಚಿಸಿದ ವಿಶೇಷ ಕೃತಿಗಳನ್ನು ಪ್ರಸ್ತುತಪಡಿಸಿದರು. ವಯೋಲಿನ್‌ನಲ್ಲಿ ವಿದ್ವಾನ್ ಮತ್ತೂರು ಮಧುಮುರಳಿ, ಮೃದಂಗದಲ್ಲಿ ಮೈಸೂರಿನ ವಿದ್ವಾನ್ ಪಿ.ಎಸ್. ಶ್ರೀಧರ್ ಸಹಕಾರ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಂಶುಪಾಲ ವಿ ಶೃಂಗೇರಿ ಎಚ್.ಎಸ್. ನಾಗರಾಜ್, ಮುತ್ತುಸ್ವಾಮಿ ದೀಕ್ಷಿತರು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರನ್ನು ಸ್ಮರಿಸುತ್ತಿರುವುದು ಪುಣ್ಯದ ಕೆಲಸವೆಂದರು.
ಅಗಜೆ ಸಂಗೀತ ಮಹಾವಿದ್ಯಾಲಯದ ಅರ್ಪಿತ್ ಶೇಷಾದ್ರಿ, ಅನಶ್ರೀ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

