ಶಿವಮೊಗ್ಗ

ಖಾಸಗಿ ಬ್ರಾಂಡ್ ಹಾಲು ಮಾರಾಟ ವಿರುದ್ಧ ಕಾನೂನು ಕ್ರಮ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಡಿ.18
ಶಿಮುಲ್‌ನಿಂದ ಅಧಿಕೃತವಾಗಿ ನೇಮಕಗೊಂಡಿರುವ ಕೆಲವು ಡೀಲರ್‌ಗಳು ನಂದಿನಿ ಹಾಲಿನ ಜೊತೆಗೆ ಖಾಸಗಿ ಬ್ರಾಂಡ್ ಹಾಲನ್ನು ಮಾರಾಟ ಮಾಡುತ್ತಿರುವುದು ಆಡಳಿತ ಮಂಡಳಿ ಗಮನಕ್ಕೆ ಬಂದಿದೆ. ಅಂತಹ ಡೀಲರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿಮುಲ್ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.
ಶಿಮುಲ್ ಡೀಲರ್‌ಗಳು ಅಧಿಕೃತವಾಗಿ ನಂದಿನಿ ಹಾಲಿನ ಬ್ರಾಂಡ್ ಹಾಲನ್ನು ಮಾರಾಟ ಮಾಡಲು ಪರವಾನಿಗೆ ಪಡೆದಿದ್ದಾರೆ. ಆದರೆ, ಕೆಲ ಡೀಲರ್‌ಗಳು ಒತ್ತಾಯ ಪೂರ್ವಕವಾಗಿ ಕಳಪೆ ಬ್ರಾಂಡ್‌ನ ಹಾಲು ಮಾರಾಟ ಮಾಡುತ್ತಿದ್ದಾರೆ ಎಂದು ಆಡಳಿತ ಮಂಡಳಿಗೆ ದೂರುಗಳು ಬಂದಿವೆ. ಒಂದು ವೇಳೆ ಡೀಲರ್‌ಗಳು ಈ ರೀತಿ ಮಾಡಿದಲ್ಲಿ ಒಕ್ಕೂಟದೊಡನೆ ಮಾಡಿಕೊಂಡಿರುವ ಕರಾರಿನ ಉಲ್ಲಂಘನೆ ಆಗುತ್ತದೆ ಎಂದು ಶಿಮುಲ್ ಹೇಳಿದೆ.
ಅಧಿಕೃತ ಮಾರಾಟ ಸ್ಥಳದಲ್ಲಿ ಮಾರಾಟದ ಅಗತ್ಯ ದಾಖಲೆಗಳಿಲ್ಲದೆ ಖಾಸಗಿ ಬ್ರಾಂಡ್ ಹಾಲನ್ನು ಮಾರಾಟ ಮಾಡುವುದು. ಕೇಂದ್ರ ಸರ್ಕಾರದ ಆಹಾರ ಸುರಕ್ಷತಾ ಮತ್ತು ಪ್ರಮಾಣ ಕಾಯ್ದೆ 2006-2011ರ ಅನ್ವಯ ಕಲಬೆರಕೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ, ದಾಸ್ತಾನು ಮಾಡುವುದು ಶಿಕ್ಷಾರ್ಹ ಅಪರಾಧ. ಕಾಯ್ದೆ ಅನ್ವಯ ಬಹುತೇಕ ಖಾಸಗಿ ಬ್ರಾಂಡ್‌ನ ಹಾಲು ಪ್ರಮಾಣಿಕರಿಸಿದ ಅನುಪಾತದಲ್ಲಿ ಇಲ್ಲ. ಕಲಬೆರಕೆ ಆಗಿರುವುದು ದೃಢಪಟ್ಟಿದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಸಹಕಾರಿ ಸಂಸ್ಥೆಯ ರೈತರ ಉತ್ಪನ್ನತಗಳಾಗಿದೆ ಎಂದು ಶಿಮುಲಲ್ತಿಳಿಸಿದೆ.
ಗ್ರಾಹಕರ ಆರೋಗ್ಯ ಹಿತದೃಷ್ಟಿಯಿಂದ ಖಾಸಗಿ ಬ್ರಾಂಡ್ ಮಾರಾಟ ಮಾಡುತ್ತಿರುವ ನಂದಿನಿ ಡೀಲರ್‌ಗಳಿಗೆ ಹಲವಾರು ಬಾರಿ ತಿಳಿವಳಿಕೆ, ಎಚ್ಚರಿಕೆ ನೀಡಲಾಗಿದೆ. ಆದರೆ, ಕಲಬೆರಕೆ ಖಾಸಗಿ ಹಾಲಿನ ಮಾರಾಟ ಮಾಡುತ್ತಿರುವ ಅಂತಹ ಡೀಲರ್‌ಗಳ ಪರವಾನಿಗೆ ಅನಿವಾರ್ಯವಾಗಿ ರದ್ದುಗೊಳಿಸಲಾಗುವುದು ಎಂದು ಶಿಮುಲ್ ನಿರ್ವಾಹಕ ನಿರ್ದೇಶಕರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.