ಬಿಜೆಪಿ, ಲೇಖಕಿಯರ ಸಂಘ ಸಂತಾಪ
ಶಿವಮೊಗ್ಗ: ಕನ್ನಡ ಸಾಹಿತ್ಯದ ಸಾರಸ್ವತ ಲೋಕಕ್ಕೆ ಮುಕುಟ ಮಣಿಯಾಗಿದ್ದ ರಾಷ್ಟ್ರಕವಿ ಜಿಲ್ಲೆಯ ಹೆಮ್ಮೆಯ ಪುತ್ರ ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಜಿಲ್ಲಾ ಬಿಜೆಪಿ ಸಂತಾಪ ಸೂಚಿಸಿದೆ.
ಮಾನವೀಯ ಮೌಲ್ಯಗಳಿಗೆ ಪ್ರಾಧಾನ್ಯತೆ ನೀಡಿ ಬದುಕಿನ ಉದ್ದಗಲಕ್ಕೂ ಸೌಜನ್ಯದ ಪ್ರತೀಕವಾಗಿ ಬದುಕನ್ನು ಸವೆಸಿದ ಅಜಾತಶತ್ರು ದಿ. ಜಿಎಸ್ಎಸ್ ಅವರ ಆತ್ಮಕ್ಕೆ ಭಗವಂತ ಶಾಂತಿಯನ್ನು ನೀಡಿ, ಅವರ ಕುಟುಂಬದ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬಿಜೆಪಿ ಮುಖಂಡರು ಸ್ಮರಿಸಿದ್ದಾರೆ.
ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ಎಂ. ಭಾನುಪ್ರಕಾಶ್, ರಾಜ್ಯಸಭಾ ಸದಸ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ಧರಾಮಣ್ಣ, ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್, ಮಾಜಿ ಶಾಸಕ ಅರಗ ಜ್ಞಾನೇಂದ್ರ, ಕೆ.ಜಿ. ಕುಮಾರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಶಿವರಾಜ್, ಡಿ.ಎಸ್. ಅರುಣ್, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಶರಾವತಿ ಸಿ. ರಾವ್, ನಗರಸಭಾ ಮಾಜಿ ಅಧ್ಯಕ್ಷ ಎಂ. ಶಂಕರ್, ಎನ್.ಜೆ. ರಾಜಶೇಖರ್, ಎಸ್.ಎನ್. ಚನ್ನಬಸಪ್ಪ, ಸೂಡಾ ಮಾಜಿ ಅಧ್ಯಕ್ಷ ಎಸ್. ಜ್ಞಾನೇಶ್ವರ್, ಎಸ್. ದತ್ತಾತ್ರಿ, ಜಿಲ್ಲಾ ಮಾಧ್ಯಮ ಪ್ರಮುಖ್ ಬಿ.ಆರ್. ಮಧುಸೂಧನ್ ಹಾಗೂ ಪಕ್ಷದ ಎಲ್ಲಾ ವಿಭಾಗದ ಪದಾಧಿಕಾರಿಗಳು ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ಲೇಖಕಿಯರ ಸಂಘ ಸಂತಾಪ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಕರ್ನಾಟಕ ಲೇಖಕಿಯರ ಸಂಘ ಸಂತಾಪ ಸೂಚಿಸಿದೆ. ಸಂಘ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಅಧ್ಯಕ್ಷೆ ಎಸ್.ವಿ. ಚಂದ್ರಕಲಾ, ಜಿ.ಎಸ್.ಎಸ್ ಅವರು ನೂರಾರು ಗೀತೆಗಳನ್ನು ಬರೆದಿಟ್ಟು, ಸಂಗೀತ ಲೋಕಕ್ಕೆ, ಸಾರಸ್ವತ ಲೋಕಕ್ಕೆ ಬಹುದೊಡ್ಡ ಆಸ್ತಿಯಾಗಿದ್ದ ಜಿ.ಎಸ್.ಎಸ್ ಅವರು ಕಾಣದ ಕಡಲಿಗೆ ಸೇರಲು ಹೊರಟಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ವಿಷಾದ ವ್ಯಕ್ತಪಡಿಸಿದರು.
ಈ ವೇಳೆ ಸಂಘದ ಸದಸ್ಯರಾದ ಅನ್ನಪೂರ್ಣ, ಬನಶಂಕರಿಮೂರ್ತಿ, ಅಕ್ಷತ, ಮಲಾರಾಮಚಂದ್ರ ಅವರು ಜಿ.ಎಸ್.ಎಸ್ ಅವರ ಕವನಗಳನ್ನು ವಾಚಿಸಿದರು.
ಜಿಎಸ್ಎಸ್ ಶ್ರದ್ಧಾಂಜಲಿ ಸಭೆ
ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ ಡಿ.24
ಪಟ್ಟಣದ ಮದ್ಯಭಾಗದಲ್ಲಿರುವ ಕೋಟ್ಯಂತರ ರು. ವೆಚ್ಚದ ಸಾಂಸ್ಕೃತಿಕ ಭವನಕ್ಕೆ ಜಿ.ಎಸ್.ಶಿವರುದ್ರಪ್ಪನವರ ಹೆಸರನ್ನು ನಾಮಕರಣಗೊಳಿಸುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಸಂಸದ ರಾಘವೇಂದ್ರ ತಿಳಿಸಿದರು.
ಮಂಗಳವಾರ ಪಟ್ಟಣದ ಮಾಳೇರಕೇರಿಯಲ್ಲಿನ ಕೆಜೆಪಿ ಕಚೇರಿಯಲ್ಲಿ ಪಕ್ಷದ ವತಿಯಿಂದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯದ ಮೂಲಕ ನಾಡು ಕಟ್ಟುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಜಿಎಸ್ಎಸ್ ಶಿಕಾರಿಪುರ ಪಟ್ಟಣದಲ್ಲಿ ಜನಿಸಿ ಸಾಹಿತ್ಯ ಕೃಷಿಯಿಂದಾಗಿ ನಾಡಿನೆಲ್ಲೆಡೆ ಶಿಕಾರಿಪುರದ ಹೆಸರನ್ನು ಶಾಶ್ವತವಾಗಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕೆಜೆಪಿ ಅಧ್ಯಕ್ಷ ರುದ್ರಪ್ಪಯ್ಯ, ಜಿಪಂ ಸದಸ್ಯ ಬಂಗಾರಿನಾಯ್ಕ, ಪುರಸಭಾ ಸದಸ್ಯ ಟಿ.ಎಸ್. ಮೋಹನ್, ವಸಂತಗೌಡ, ಫಾಲಾಕ್ಷಪ್ಪ, ಮುಖಂಡ ಗುರುಮೂರ್ತಿ, ರಮಣಿ ಕೊಟ್ರೇಶಪ್ಪ, ಗುರುರಾಜ ಜಗತಾಪ್, ಬೆಣ್ಣೆ ದೇವೇಂದ್ರಪ್ಪ, ಯೋಗೀಶ್, ಕೋಡಿಕೊಪ್ಪ ಮಂಜಪ್ಪ, ಅನ್ವರ್ ಸಾಬ್, ಕಬಾಡಿ ರಾಜು,ನಾಗರಾಜಪ್ಪ, ತಿಮ್ಮಾರೆಡ್ಡಿ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

