ಶಿವಮೊಗ್ಗ

ಅಕ್ರಮ ಬೀಟೆ ನಾಟ ವಶ: ಇಬ್ಬರ ಬಂಧನ

Published On :

ಹೊಸನಗರ: ಅಕ್ರಮವಾಗಿ ಬೆಲೆಬಾಳುವ ಬೀಟೆ ನಾಟ ಸಾಗಿಸುತ್ತಿದ್ದ ವೇಳೆ ನಗರ ವಲಯ ಅರಣ್ಯಾಧಿಕಾರಿ ಮೃತ್ಯುಂಜಯಪ್ಪ ಮತ್ತು ತಂಡ ದಾಳಿ ನಡೆಸಿ ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಮತ್ತಿಮನೆ ಸಮೀಪ ಎಮ್ಮೆಹೊಂಡದ ಬಳಿ ನಡೆದಿದೆ.
ಹಾಲುಗುಡ್ಡೆ ಕಾಳೇಶ್ವರ ವಾಸಿ ಪ್ರದೀಪ್(23), ಕಟ್ಟಿನಹೊಳೆ ಕಾಕಡಜಡ್ಡು ವಾಸಿ ಕೆ.ಎಸ್. ಸುರೇಂದ್ರ (24) ಬಂಧಿತ ಆರೋಪಿಗಳು. ಮಾವಿನಕಟ್ಟೆ ವಾಸಿ ಸುರೇಶ್ ಶಾನೆ ಗುಂಡ ಮತ್ತು ಮಾವಿನಕಟ್ಟೆ ಪ್ರಕಾಶ್ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ವಾಹನ ಸಮೇತ ಸುಮಾರು 50 ಸಾವಿರ ಬೆಲೆಬಾಳುವ ಬೀಟೆ ತುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಅಕ್ರಮವಾಗಿ ಬೀಟೆ ನಾಟ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಇಲಾಖೆ ಬಂದ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಆರ್‌ಎಫ್‌ಒ ಮೃತ್ಯುಂಜಯಪ್ಪ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದರು.
ಅಧಿಕಾರಿಗಳು ಬರುವ ಸುಳಿವು ದೊರೆತ ಹಿನ್ನಲೆಯಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಅವರನ್ನು ಹಿಂಬಾಲಿಸಿದ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.
ಕಾರ್ಯಾಚರಣೆಯಲ್ಲಿ ಫಾರೆಸ್ಟ್‌ರ್ ದಿಲೀಪ್, ಮಧುಕರ್, ಎಡ್ವರ್ಡ್ ವನಪಾಲಕ ಅಶೋಕ, ವಸಂತ್, ಚಾಲಕ ರಾಮು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.