ಶಿವಮೊಗ್ಗ

ಕ್ರೀಡಾ, ಸಾಂಸ್ಕೃತಿಕ ವೇದಿಕೆ ಸಮಾರೋಪ ಸಮಾರಂಭ

Published On :

ಶಿರಾಳಕೊಪ್ಪ: ಗುರು ಮತ್ತು ಪೋಷಕರು ಸಮಾಜದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬೇಕು, ವಿದ್ಯಾವಂತರಾಗಬೇಕು ಎಂದು ಬುದ್ದಿವಾದ ಹೇಳುತ್ತಾರೆ. ಆದರೆ ಸಮಾಜದಲ್ಲಿ ಉತ್ತಮ ಪ್ರಜೆ ಆಗಬೇಕು ಎನ್ನುವ ಗುರು ಮತ್ತು ಪೋಷಕರನ್ನು ದ್ವೇಷಿಸುವ ಯುವಕರ ಗುಂಪು ಬೆಳೆಯುತ್ತಿರುವದು ಆತಂಕದ ಸಂಗತಿ ಎಂದು ಆನವಟ್ಟಿ ಸಪಪೂ ಕಾಲೇಜು ಪ್ರಾಂಶುಪಾಲ ಜಯಪ್ಪ ಎಚ್. ವಿಷಾದ ವ್ಯಕ್ತಪಡಿಸಿದರು.
  ಶಿರಾಳಕೊಪ್ಪ ಸಪಪೂ ಕಾಲೇಜು ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಸಮಾರೋಪ ಸಮಾರಂಭ ಹಾಗೂ ವಿವಿಧ  ಯೋಜನೆಗಳಲ್ಲಿ ಪ್ರಥಮ ಸ್ಥಾನಪಡೆದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿ ಮಾತನಾಡಿದರು.
   ಶಿಕ್ಷಣ ಜ್ಞಾನಕ್ಕಾಗಿ ಎಂಬ ಅರಿವು ವಿದ್ಯಾರ್ಥಿಗಳಿಗೆ ಇರಬೇಕು. ಒಟ್ಟು ಅಧ್ಯಯನ 20 ವರ್ಷಮಾತ್ರ ಎಂದ ಅವರು ಇದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ. ವಿದ್ಯಾರ್ಥಿಗಳು ಕಾಲೇಜು ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರಿತಿ-ಪ್ರೇಮ ಎಂಬ ಬಲೆಗೆ ಬಿದ್ದು ಹಾಳಾಗಬೇಡಿ, ಮೊಬೈಲ್, ಟೀವಿ ಮೊರೆ ಹೋಗದಿರಿ ಎಂದರು.
  ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚೆನ್ನವೀರಶೆಟ್ಟಿ, ಶಾಲಾಸಮಿತಿ ಸದಸ್ಯೆ ವಸಂತಮ್ಮ ಜೋಗು ಬಂಡಾರಿ ಪಪಂ ಉಪಾಧ್ಯಕ್ಷೆ ಸುಜಾತ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಬಸವರಾಜಜ್ದಡ್‌ಡಿಕೊಪ್ಪ ವಹಿಸಿ ಮಾತನಾಡಿದರು.
   ವೇದಿಕೆ ಮೇಲೆ ಕಾಲೇಜು ಸಮಿತಿ ಸದಸ್ಯ ಮಂಚಿ ಶಿವಾನಂದ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಜಂಗಮಶೆಟ್ಟಿ, ಪಪಂ ಸ್ಥಾಯಿಸಮಿತಿ ಅಧ್ಯಕ್ಷ ಎಸ್.ಎಲ್. ಸದಾಶಿವ ಇದ್ದರು. ಕಾರ್ಯಕ್ರಮದ ನಂತರ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.