ಬಲಿಜ ಸಮಾಜದರು ಶೈಕ್ಷಣಿಕವಾಗಿ ಸಂಘಟಿತರಾಗಿ
ಶಿವಮೊಗ್ಗ: ಬಲಿಜ ಸಮಾಜದರು ಶೈಕ್ಷಣಿಕವಾಗಿ ಸಂಘಟಿತರಾಗಿ ಸಮಾಜದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ವೈದ್ಯ ಡಾ.ಎಂ. ನಾಗೇಂದ್ರ ಹೇಳಿದರು.
ಜಿಲ್ಲಾ ಬಲಿಜ ಸಂಘ ಲಗಾನ್ ಮಂದಿರದಲ್ಲಿ ಆಯೋಜಿಸಿದ್ದ ಬಲಿಜ ವಿದ್ಯಾರ್ಥಿ ನಿಲಯ ಮತ್ತು ಬಲಿಜ ಸೌಹಾರ್ದ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು, ಸಮಾಜದ ಎಲ್ಲರೂ ಶಿಕ್ಷಣ ಪಡೆಯಬೇಕು. ಸಮಾಜ ಬಾಂಧವರು ತಮ್ಮ ಮಕ್ಕಳಿಗೂ ಹೆಚ್ಚಿನ ಶಿಕ್ಷಣವನ್ನು ಕೊಡಿಸಬೇಕು ಎಂದರು.
ಜಿಲ್ಲೆಯಲ್ಲಿ 40 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರಿದ್ದು, ಜನಪ್ರತಿನಿಧಿಗಳಿಗೆ ತಮ್ಮ ಶಕ್ತಿ ತೋರಿಸಬೇಕು ಎಂದ ಅವರು, ಸಮಾಜದ ಎಲ್ಲರೂ ಸಂಘಟಿತರಾಗಿರಬೇಕು ಎಂದು ಕರೆ ನೀಡಿದರು.
ವೈದ್ಯರ ಶುಲ್ಕ ಇಲ್ಲ: ಪುರಲೆಯಲ್ಲಿರುವ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಸುಬ್ಬಯ್ಯ ಆರೋಗ್ಯ ಕಾರ್ಡ್ನ್ನು ಬಲಿಜ ಸಂಘದ ಸದಸ್ಯರಿಗೆ ಉಚಿತವಾಗಿ ನೀಡಲಾಗುವುದು. ಪುರಲೆಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅಧುನಿಕ ಸೌಲಭ್ಯಗಳಿವೆ. ಬಲಿಜ ಸಂಘದ ಸದಸ್ಯರಿಗೆ ಇಲ್ಲಿ ನೊಂದಣಿ ಶುಲ್ಕ, ವೈದ್ಯರ ಶುಲ್ಕ ಇರುವುದಿಲ್ಲ. ಇನ್ನುಳಿದ ಚಿಕಿತ್ಸೆಗಳ ವೆಚ್ಚದಲ್ಲೂ ರಿಯಾಯಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಸದಸ್ಯ ಶಿವಣ್ಣ ಮಾತನಾಡಿ, ಹಿಂದುಳಿದ ಸಮಾಜಗಳು ಮುಖ್ಯವಾಹಿನಿಗೆ ಬರಬೇಕು. ನಗರಸಭೆಯಲ್ಲಿ ವಿದ್ಯಾಭ್ಯಾಸ, ಕಾಯಿಲೆಗೆ ಚಿಕಿತ್ಸೆ ಪಡೆಯಲು ಹಣ ಕೊಡುವ ವ್ಯವಸ್ಥೆ ಇದೆ. ಇದನ್ನು ಹಿಂದುಳಿದ ವರ್ಗದವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಬಲಿಜ ಸಂಘದ ವಿವಿಧ ಚಟುವಟಿಕೆಗಳಿಗಾಗಿ 25 ಲಕ್ಷ ಬಜೆಟ್ನಲ್ಲಿ ಮೀಸಲಿಡಲಾಗಿದೆ. ಹಣ ಮೀಸಲಿರಿಸದಿದ್ದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣೆ ಬಳಿಕ 25 ಲಕ್ಷ ಸಂಘಕ್ಕೆ ದೊರೆಯಲಿದೆ ಎಂದರು.
ಇದೇ ವೇಳೆ ಸಮಾಜದ ಪ್ರಮುಖರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆರ್. ಗೋವಿಂದರಾಜು, ಸುಬ್ಬರಾಮಯ್ಯ, ಕುಪ್ಪಸ್ವಾಮಿ ನಾಯ್ಡು, ಎಂ. ರಾಮು ನಾಯ್ಡು, ಎಂ.ಎಲ್. ಸತ್ಯನಾರಾಯಣ, ಚಂದ್ರಶೇಖರ, ಪಾಂಡುರಂಗ, ಸುಬ್ರಹ್ಮಣ್ಯ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

