ಶಿವಮೊಗ್ಗ

ಸುದ್ದಿ ಸಂಕ್ಷೇಪ

Published On :

ಮಾ. 12ರಂದು ಕುವೆಂಪು ವಿವಿ ಘಟಿಕೋತ್ಸವ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದ 23ನೇ ಘಟಿಕೋತ್ಸವ ಮಾರ್ಚ್ 12ರಂದು ಬೆಳಿಗ್ಗೆ 11ಕ್ಕೆ ವಿವಿ ಆವರಣದಲ್ಲಿ ನಡೆಯಲಿದೆ. ಈ ಹಿಂದೆ ಫೆ. 26ರಂದು ಘಟಿಕೋತ್ಸವ ನಡೆಸಲು ಉದ್ದೇಶಿಸಲಾಗಿತ್ತು. ಬಳಿಕ ಅನಿವಾರ್ಯ ಕಾರಣದಿಂದಾಗಿ ಮುಂದೂಡಲಾಗಿತ್ತು.
ಇಂದು ಯಕ್ಷಸಂಜೆ  ಭಾವನಾ
ಸಾಗರ: ಇಲ್ಲಿನ ವಿಜಯ ಸೇವಾ ಟ್ರಸ್ಟ್ ಅಂಗಸಂಸ್ಥೆ ಯಕ್ಷಶ್ರೀ ಆಶ್ರಯದಲ್ಲಿ ಫೆ.24 ಭಾನುವಾರ ಸಂಜೆ 6 ಗಂಟೆಗೆ ಪಟ್ಟಣದ ಸಂತ ಜೋಸೆಫರ ಸಂಗಮಂಟಪದಲ್ಲಿ ಯಕ್ಷಸಂಜೆ - ಭಾವನಾ (ವೈವಿಧ್ಯಮಯ ಯಕ್ಷಗಾನ ಸನ್ನಿವೇಶ) ಕಾರ್ಯಕ್ರಮ ನಡೆಯಲಿದೆ.
ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ಪರಮೇಶ್ವರ ಹೆಗಡೆ, ನಾಗಭೂಷಣ, ಸಂಪ ಲಕ್ಷ್ಮೀನಾರಾಯಣ ಭಾಗವಹಿಸಲಿದ್ದು, ಮುಮ್ಮೇಳದಲ್ಲಿ ಕರ್ಕಿ ಕೃಷ್ಣ ಹಾಸ್ಯಗಾರ, ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ, ಚಪ್ಪರಮನೆ ಶ್ರೀಧರ್, ಸುಜಯೀಂದ್ರ ಹಂದೆ, ಸಂಜಯ ಬೆಳೆಯೂರು, ಸೌಮ್ಯ ಅರುಣ ಪಾಲ್ಗೊಳ್ಳಲಿದ್ದಾರೆ.
ಹರಿಪ್ರಸಾದ್ ಭೇಟಿ
ಸಾಗರ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಶನಿವಾರ ಸಾಗರಕ್ಕೆ ದಿಢೀರ್ ಭೇಟಿ ನೀಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಭೇಟಿ ವಿಷಯ ತಾಲೂಕು ಕಾಂಗ್ರೆಸ್ ಘಟಕ ಹಾಗೂ ಮುಖಂಡರಿಗೆ ತಿಳಿದಿರಲಿಲ್ಲ.
ಶನಿವಾರ ಮಧ್ಯಾಹ್ನ ತಾಲೂಕಿನ ಜೋಗಕ್ಕೆ ಭೇಟಿ ನೀಡಿ ಆಯ್ದ ಕೆಲವು ಕಾಂಗ್ರೆಸ್ಸಿಗರೊಂದಿಗೆ ಸಭೆ ನಡೆಸಿದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ನಂತರ ಹರಿಪ್ರಸಾದ್ ಸಾಗರದ ಮಾಜಿ ಸಂಸದ ದಿವಂಗತ ಕೆ.ಜಿ. ಶಿವಪ್ಪ ಅವರ ಮನೆಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಕೆ.ಜಿ. ಶಿವಪ್ಪ ಅವರ ಪುತ್ರ ಕೆ.ಜಿ.ಎಸ್. ಪ್ರಶಾಂತ್ ಹರಿಪ್ರಸಾದ್ ಅವರಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ತಾವು ಹೆಚ್ಚು ಶ್ರಮಿಸುತ್ತಿರುವ ಬಗ್ಗೆ ವ್ಯಾಪಕ ಸುದ್ದಿಯಿದ್ದು, ಸ್ಪಷ್ಟನೆಗೆ ಒತ್ತಾಯಿಸಿದರು.
 ಈ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್ ಜಿಲ್ಲೆಯಲ್ಲಿ ಹಾಗೂ ಸಾಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಕಾಂಗ್ರೆಸ್ ಸದೃಢವಾಗಿದ್ದು, ಕಾಗೋಡು ಈ ಭಾಗದ ಪ್ರಶ್ನಾತೀತ ನಾಯಕರಾಗಿದ್ದಾರೆ. ಪಕ್ಷಕ್ಕೆ ಯಾರೆ ಸೇರ್ಪಡೆಗೊಳ್ಳಬೇಕಾದರೂ ಜಿಲ್ಲೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಮೂಲಕವೆ ಬರಬೇಕು. ಕಾಗೋಡು ಸಹಮತವಿಲ್ಲದೆ ಪಕ್ಷಕ್ಕೆ ಯಾರ ಪ್ರವೇಶವೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಮಚಂದ್ರಪ್ಪ, ಸುಮಂಗಲ ರಾಮಕೃಷ್ಣ, ಕೆ. ಹೊಳೆಯಪ್ಪ, ಕಾಗೋಡು ಅಣ್ಣಪ್ಪ, ಮಹಮದ್ ಖಾಸಿಂ, ಕರುಣಾಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.