ಕೆಜೆಪಿ ಜಿಲ್ಲಾಧ್ಯಕ್ಷರಾಗಿ ಜ್ಯೋತಿ ಪ್ರಕಾಶ್
ಶಿವಮೊಗ್ಗ: ಕೆಜೆಪಿ ಜಿಲ್ಲಾ ಘಟಕದ ನೊಗವನ್ನು ಜ್ಯೋತಿಪ್ರಕಾಶ್ ಹೊತ್ತಿದ್ದಾರೆ.
ಕೆಜೆಪಿ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಕುಮಾರ್ ಇಂದಿಲ್ಲಿ ಬಿಡುಗಡೆ ಮಾಡಿದ್ದು, ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಜ್ಯೋತಿ ಪ್ರಕಾಶ್ರನ್ನು ನೇಮಿಸಲಾಯಿತು.
ಉಪಾಧ್ಯಕ್ಷರು- ಭದ್ರಾಪುರದ ಹಾಲಪ್ಪ(ಶಿಕಾರಿಪುರ), ಏಸುದಾಸ್(ಶಿವಮೊಗ್ಗ), ಲಕ್ಷ್ಮಣಗೌಡ(ರಿಪ್ಪನಪೇಟೆ), ಜೆ. ಶಿವಾನಂದಪ್ಪ(ಸೊರಬ), ನವನೀತ್(ಭದ್ರಾವತಿ), ತಸ್ವೀರ್ ಅಹಮದ್(ಕುಂಸಿ), ರಾಜಶೇಖರ್ (ಶಿವಮೊಗ್ಗ), ಜಗದೀಶ್ ಗೌಡ(ಆನವೇರಿ), ಹೊನ್ನಪ್ಪ(ಮಲವಗೊಪ್ಪ), ಬಸವರಾಜಪ್ಪ(ಶಿವಮೊಗ್ಗ), ಷರೀಫ್ (ಚಕ್ಕಲ್), ಚೂಡಾನಾಯ್ಕ್(ಹೊಳೆಹೊನ್ನೂರು).
ಪ್ರಧಾನ ಕಾರ್ಯದರ್ಶಿ- ಗಂಗಾಧರ.
ಕಾರ್ಯದರ್ಶಿ- ಎಚ್. ಮಹೇಂದ್ರಪ್ಪ, ಪ್ರಸನ್ನಕುಮಾರ್, ಜಗದೀಶ್, ಎನ್. ಹೊನ್ನಪ್ಪ, ವಾಟಗೋಡು ಸುರೇಶ್, ಕರಿಗೌಡ, ಮಲ್ಲಿಕಾರ್ಜುನ ದ್ವಾರಳ್ಳಿ, ಬಿ.ಎಸ್. ನಾಗರಾಜ, ಮಹಮದ್ ಏಜಾಜ್.
ಭೇರೂಲಾಲ್ ಖಜಾಂಚಿಯಾಗಿದ್ದು, ಇವರೊಂದಿಗೆ 12 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ.
ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಸತೀಶ್ ಗೌಡ, ಸುಬ್ರಹ್ಮಣ್ಯ, ಮಾಧನ ಮಿಶ್ರ, ಉಪಾಧ್ಯಕ್ಷರಾಗಿ ರವಿ (ಸಂತೇ ಕಡೂರು), ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಶರೀಫ್, ಜಿಲ್ಲಾ ರೈತ ಘಟಕದ ಪಾಲಾಕ್ಷಪ್ಪ, ಜಿಲ್ಲಾ ಎಸ್.ಟಿ. ಘಟಕದ ಹಾಲೇಶಪ್ಪ, ಜಿಲ್ಲಾ ಎಸ್.ಸಿ.ಘಟಕದ ವೀರಭದ್ರ ಪೂಜಾರಿ, ಜಿಲ್ಲಾ ಮಹಿಳಾ ಘಟಕದ ಗಾಯಿತ್ರಿ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಶಂಷಾದ್ ಬೇಗಂ, ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಜಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ರನ್ನು ನೇಮಿಸಲಾಗಿದೆ.
ಆರಂಭದಲ್ಲೇ ಆಸ್ಫೋಟ
ಶಿವಮೊಗ್ಗ ಕೆಜೆಪಿ ಜಿಲ್ಲಾ ಘಟಕ, ತಾಲೂಕು ಹಾಗೂ ನಗರ ಘಟಕಗಳ ಪದಾಧಿಕಾರಿಗಳ ಘೋಷಣೆಯಾದ ಕೆಲವೇ ಕ್ಷಣದಲ್ಲಿ ಅಸಮಾಧಾನ ಆಸ್ಫೋಟಗೊಂಡಿದೆ.
ಅದರಲ್ಲೂ ಪ್ರಮುಖವಾಗಿ ಶಿವಮೊಗ್ಗ ನಗರ ಘಟಕದ ಪದಾಧಿಕಾರಿಗಳ ನೇಮಕ ಪ್ರಶ್ನಿಸಿ ಕೆಲವು ಕಾರ್ಯಕರ್ತರು ಬಹಿರಂಗವಾಗಿಯೇ ತೀವ್ರ ಆಕ್ರೋಶವ್ಯಕ್ತಪಡಿಸಿದರು. ಒಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ, ಯಡಿಯೂರಪ್ಪನವರನ್ನು ನಂಬಿಕೊಂಡು ಬಂದ ನಮಗೆ ಅನ್ಯಾಯಮಾಡಲಾಗುತ್ತಿದೆ ಎಂದು ಏರಿದ ದನಿಯಲ್ಲೇ ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಪಕ್ಷದ ಕಚೇರಿಯಲ್ಲಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

