ಶಿವಮೊಗ್ಗ

'ಜ್ಞಾನ ಮಾತೃಬಾಷೆಯಲ್ಲೇ ದೊರೆತರೆ ಪರಿಣಾಮಕಾರಿ'

Published On :

ಸಾಗರ:  ಇಲ್ಲಿನ ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಭಾನುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಕನ್ನಡ ವಿಕಿಪಿಡಿಯಾ ಕುರಿತಾದ ಮಾಹಿತಿ ಕಾರ್ಯಾಗಾರವನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಉದ್ಘಾಟಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸ್ಕೃತ ಜಗತ್ತಿನ ಮೂಲ ಭಾಷೆಯಾದರೂ ಈ ಭಾಷೆಯಲ್ಲಿ  ಜಗತ್ತಿನಾದ್ಯಂತ ಜ್ಞಾನ ಪ್ರಸಾರ ಆಗಲಿಲ್ಲ. ಹಿಂದೆ ರಾಜ, ಮಹಾರಾಜರು ಈ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಜಗತ್ತಿನ ಜ್ಞಾನ ವಿಸ್ತಾರವಾಗುತ್ತಿದೆ. ಈ ಜ್ಞಾನ ನಮ್ಮ ನಮ್ಮ ಭಾಷೆಯಲ್ಲಿ ದೊರಕುವಂತಾದರೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.
ಜ್ಞಾನ ಎಲ್ಲರ ಸೊತ್ತು: ಸಾಹಿತಿ ಡಾ.ನಾ.ಡಿಸೋಜ, ಮನುಷ್ಯನಿಗೆ ಲಾಗಾಯ್ತಿನಿಂದಲೂ ಮಾಹಿತಿಯನ್ನು ಕಲೆ ಹಾಕುವ ಪ್ರವೃತ್ತಿ ಇತ್ತು. ಅದನ್ನೇ ಜ್ಞಾನ ಎಂದು ಕರೆಯಲಾಗುತ್ತಿದೆ. ಈ ಜ್ಞಾನಕ್ಕೆ ಹಿಂದೆ ಜಾತಿ, ಧರ್ಮ, ಭಾಷೆ, ಬಡವ, ಶ್ರೀಮಂತ ಎನ್ನುವ ಬಂಧನಗಳಿತ್ತು. ಆದರೆ ವಿದ್ಯುನ್ಮಾನ ಮಾಧ್ಯಮ ಬಂದ ಮೇಲೆ ಜ್ಞಾನ ಎಲ್ಲರ ಸೊತ್ತಾಗುತ್ತಿದೆ. ಕಂಪ್ಯೂಟರ್ ಬಂದ ಮೇಲೆ ಇದು ತಂತ್ರಜ್ಞಾನವಾಗಿ ಬದಲಾಗಿದೆ ಎಂದು ಹೇಳಿದರು.
ಕನ್ನಡ ವಿಕಿಪಿಡಿಯಾ ಸಂಪಾದಕ ಡಾ.ಪವನಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘಟನೆಯ ಅಧ್ಯಕ್ಷ ಜಿ.ಟಿ.ಶರ್ಮ ಅಧ್ಯಕ್ಷತೆ ವಹಿಸಿದ್ದರು. ವಿ.ಟಿ.ಸ್ವಾಮಿ, ಬಿ.ವಿ.ರಂವೀದ್ರನಾಥ್, ವೀಣಾ ಬೆಳೆಯೂರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.