ನಕಲಿ ಡೀಸೆಲ್ ನೀಡಿ ವಂಚನೆ
ಕ.ಪ್ರ.ವಾರ್ತೆ, ಭದ್ರಾವತಿ, ಜು.29
ಶಾಸಕ ಎಂ.ಜೆ.ಅಪ್ಪಾಜಿ ಅವರಿಗೆ ಸೇರಿದ ಪೆಟ್ರೋಲ್ ಪಂಪ್ನಲ್ಲಿ ರಾಜ್ಯ ಸಾರಿಗೆ ಬಸ್ಗಳಿಗೆ ನೀರು ಸೇರಿದ ಡೀಸೆಲ್ ಸರಬರಾಜು ಮಾಡಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ್ ಆರೋಪಿಸಿದರು.
ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಜನಪ್ರತಿನಿಧಿಯಾಗಿ ಸರ್ಕಾರಕ್ಕೆ ಮೋಸ ಮಾಡುತ್ತಿರುವ ಇವರು ಜನ ಸಾಮಾನ್ಯರಿಗೆ ಯಾವ ರೀತಿ ನ್ಯಾಯ ಒದಗಿಸಿಯಾರು ಎಂದು ಸಂಗಮೇಶ್ವರ ಪ್ರಶ್ನಿಸಿದರು.
ಶಾಸಕರಿಗೆ ಸವಾಲು: ಎಂ.ಜೆ. ಅಪ್ಪಾಜಿ ನಗರಸಭೆ ಕಾಮಗಾರಿಗಳಿಗೆ ರು. 35 ಕೋಟಿ ಅನುದಾನ ತಂದಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಇದು ನಿಜವಾದರೆ ತಾವು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಸಂಗಮೇಶ್ವರ ಸವಾಲೆಸೆದರು.
ಪಟ್ಟಣದಲ್ಲಿ 2 ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಢ ಸಂಕಷ್ಟಕ್ಕೀಡಾಗಿದ್ದಾರೆ. ಭದ್ರಾ ಜಲಾಶಯದಿಂದ ಬಿಡಲ್ಪಟ್ಟ ನೀರು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿದ್ದು ಸಂತ್ರಸ್ತರ ಅನುಕೂಲಕ್ಕಾಗಿ ಗಂಜಿ ಕೇಂದ್ರಗಳನ್ನು ಕೂಡಲೇ ತೆರೆಯಬೇಕು ಎಂದು ಅವರು ಆಗ್ರಹಿಸಿದರು.
ಪಟ್ಟಣದಲ್ಲಿ ನಿಜವಾದ ಕಾಂಗ್ರೆಸ್ಸಿಗರು ಯಾರೆಂದು ಮುಂಬರುವ ಮೂರು ನಾಲ್ಕು ತಿಂಗಳುಗಳಲ್ಲಿ ಜನರಿಗೆ ತಿಳಿಯಲಿದೆ ಎಂದ ಸಂಗಮೇಶ್ವರ ಕಾಂಗ್ರೆಸ್ ಮುಖಂಡರೆಂದು ಹೇಳಿಕೊಂಡು ಓಡಾಡುತ್ತಿರುವ ದಾಸೇಗೌಡ, ಕೆ.ಟಿ.ಗಿರಿಯಪ್ಪ, ಮಂಜಪ್ಪಗೌಡ, ಜಹೀರ್ಖಾನ್ ಅವರುಗಳ ಪಕ್ಷದ ಸದಸ್ಯರೇ ಆಗಿಲ್ಲವೆಂದು ತಿಳಿಸಿದರು. ಆದರೂ ಪಕ್ಷದ ವಿವಿಧ ಸ್ಥಾನಮಾನಗಳ ಹೆಸರು ಹೇಳಿಕೊಂಡಿರುವುದು ಸರಿಯಲ್ಲವೆಂದು ಹೇಳಿದರು.ಭದ್ರಾ ಜಲಾಶಯದಲ್ಲಿ ಭದ್ರಾನದಿಗೆ ತಾವು ಆ.3ರಂದು ಬಾಗಿನ ಅರ್ಪಿಸುವುದಾಗಿ ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ.ಟಿ. ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

