ಶಿವಮೊಗ್ಗ

ಡಂಬಾಚಾರ ನೈತಿಕತೆ ಕುಗ್ಗಿಸುತ್ತದೆ: ಪಾಷಾ

Published On :

ಕ.ಪ್ರ.ವಾರ್ತೆ ಟಿ ಸೊರಬ ಟಿ  ಜು.30
ಢಂಬಾಚಾರದ ಆಚರಣೆಗಳು ನಮ್ಮ ನೈತಿಕ ತಳಹದಿಯನ್ನು ಎಂದಿಗೂ ಗಟ್ಟಿಗೊಳಿಸಲಾರದು ಎಂದು ಹಾಸನ ಡಯಟ್ನ ಹಿರಿಯ ಉಪನ್ಯಾಸಕ ಸಲೀಂ ಪಾಷ ತಿಳಿಸಿದರು.
ಪಟ್ಟಣದ ಶಾದಿ ಮಹಲ್ನಲ್ಲಿ ನಡೆದ ಇಫ್ತಿಯಾರ್ ಸೌಹಾರ್ದ ಕೂಟದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.
ಪ್ರತಿಯೊಂದು ಧರ್ಮದಲ್ಲಿನ ಆಚರಣೆಗಳಲ್ಲೂ ಉದಾತ್ತ ಚಿಂತನೆಗಳಿವೆ. ಆದರೆ, ಸ್ಥೂಲ ಚಿಂತನೆ ಇಲ್ಲದೆ ಕೇವಲ ತೋರಿಕೆಗೋಸ್ಕರ ಅಳವಡಿಸಿಕೊಂಡಿರುವುದರಿಂದ ಎಂದಿಗೂ ಅವು ನಮ್ಮ ನಿಲುವು, ಆಚರಣೆಗಳಲ್ಲಿ ಆಳವಾಗಿ ಅಡಕಗೊಳ್ಳುವುದಿಲ್ಲ ಎಂದರು.
ನ್ಯೂನತೆ ಸರಿಪಡಿಸೋಣ: ಮಾನವ ಸಮೂಹದಲ್ಲಿ ಎದ್ದು ಕಾಣುತ್ತಿರುವ ಹಲವಾರು ಸ್ವಾರ್ಥಲಾಲಸೆ, ಅಪರಿಪಕ್ವತೆ ಮುಂತಾದ ಕ್ಲೇಷಗಳ ಅವಲೋಕನಕ್ಕೆ ಇಂತಹ ಕೂಟಗಳು ಅಗತ್ಯ. ಕೂಟಗಳಲ್ಲಿ ಭಾಗವಹಿಸುವ ಮೂಲಕ ನಮ್ಮಲ್ಲಿನ ನ್ಯೂನತೆ ಸರಿಪಡಿಸಿಕೊಳ್ಳಲು ಸಾಧ್ಯವಿದೆ ಎಂದರು.
ರಂಜಾನ್ ಮಹತ್ವ, ಆಚರಣಾ ವಿಧಾನ, ಉಲ್ಲೇಖಾರ್ಹ ಸಂಗತಿಗಳನ್ನು ಉದಾಹರಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಇಲ್ಲಿನ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಡಿ. ರವಿಶಂಕರ್ ಮಾತನಾಡಿದರು. ಅರಿಶಡ್ವರ್ಗಗಳ ನಿಗ್ರಹಕ್ಕೆ ಉಪವಾಸ ಪ್ರಮುಖ ಸಾಧನ. ಸಂಸ್ಕಾರವಂತನಾಗಲು ನಿಗದಿತ, ನಿಯಮಿತ ಅವಧಿಯಲ್ಲಿ ಉಪವಾಸ ಆಚರಣೆ ಅಗತ್ಯ ಮಾಡಬೇಕು ಎಂದರು.
ಜಮಾಅತೆ ಇಸ್ಲಾಮಿ ಹಿಂದ್, ಅಂಜುಮಾನ್ ಮುಸ್ಲಿಮೀನ್, ದಾರುಸ್ಸಲಾಂ ಟ್ರಸ್ಟ್ ಹಾಗೂ ಎಸ್ಐಒ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ವಕೀಲ ಸೈಯದ್ ಅಬ್ದುಲ್ ರೆಹಮಾನ್, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಇನಾಯತುಲ್ಲಾ ಎಂ. ಶಹಬಾಝ್, ಖುತುಬುದ್ದೀನ್, ಶಹಬುದ್ದೀನ್, ಮಾಸ್ತರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.