ಕೆಜೆಪಿ ಜಿಲ್ಲಾ ಸಮಿತಿ ಸಭೆ
ಶಿವಮೊಗ್ಗ: ಕೆಜೆಪಿ ಜಿಲ್ಲಾ ಸಮಿತಿ ಸಭೆಯು ಜೂ.18 ರಂದು ಬೆಳಿಗ್ಗೆ 11 ಗಂಟೆಗೆ ಪಕ್ಷದ ಕಚೇರಿಯಲ್ಲಿ ನಡೆಯಲಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್, ಎಸ್. ರುದ್ರೇಗೌಡ ಮತ್ತಿತರರು ಸಭೆಯಲ್ಲಿ ಭಾಗವಹಿಸುವರು. ಈ ಸಭೆಗೆ ಎಲ್ಲಾ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪ್ರಮುಖರು ಆಗಮಿಸಬೇಕಾಗಿ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಕೋರಿದ್ದಾರೆ.
ಉದ್ಘಾಟನೆ
ಶಿವಮೊಗ್ಗ: ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ 22ರಂದು ಬೆಳಿಗ್ಗೆ 11ಗಂಟೆಗೆ ಟಿಪ್ಪುನಗರದಲ್ಲಿ ಸ್ತ್ರೀಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಉದ್ಘಾಟನಾ ಸಮಾರಂಭ ಏರ್ಪಡಿಸಿದೆ. ಎಸ್ಎಂಎಸ್ಎಸ್ಎಸ್ ನಿರ್ದೇಶಕ ವೀರೇಶ್ ಮೋರಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಯಎಕ್ರಮದಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಪ್ರತಿಭಾ ಪುರಸ್ಕಾರ
ಶಿವಮೊಗ್ಗ: ನಗರ ದೇವಾಂಗ ಸಮಾಜ 2012-13ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 75ಕ್ಕೂ ಅಧಿಕ ಅಂಕ ಪಡೆದವರು ಮತ್ತು ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪಡೆದ ಸಮುದಾಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ತಮ್ಮ ಅಂಕ ಪಟ್ಟಿ ಮತ್ತು ವಾಸ ದೃಢೀಕರಣ, ವರ್ಗಾವಣೆ ಪತ್ರಗಳ ನಕಲು ಪ್ರತಿ 25ರೊಳಗೆ ಅಧ್ಯಕ್ಷರು ನಗರ ದೇವಾಂಗ ಸಮಾಜ ಮಲೆನಾಡು ದೇವಾಂಗ ಹಾಸ್ಟೆಲ್ ಆವರಣ, ಬಾಪೂಜಿ ನಗರ ಶಿವಮೊಗ್ಗ ಇಲ್ಲಿಗೆ ತಲುಪಿಸಲು ಸಂಘದ ಅಧ್ಯಕ್ಷ ಪಿ.ಆರ್. ಗಿರಿಯಪ್ಪ ತಿಳಿಸಿದ್ದಾರೆ. ವಿವರಗಳಿಗಾಗಿ- 9449327344.
ಪದಾಧಿಕಾರಿ ಆಯ್ಕೆ
ಶಿವಮೊಗ್ಗ: ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಮಿತಿ ಸದಸ್ಯರ ಪಟ್ಟಿ ಪ್ರಕಟಗೊಂಡಿದೆ. ಜಿಲ್ಲಾಧ್ಯಕ್ಷರಾಗಿ ಖಂಡೋಬಾರಾವ್ ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿಯಾಗಿ ಡಾ. ಸಾಸ್ವೆಹಳ್ಳಿ ಸತೀಶ್, ಸಹ ಕಾರ್ಯದರ್ಶಿ ಗೀತಾ ದಾತಾರ್, ಆರ್.ಎಸ್. ಹಾಲಸ್ವಾಮಿ, ಸದಸ್ಯರಾಗಿ ಕೆ. ಯುವರಾಜ್, ಡಾ. ಪರಿಸರ ನಾಗರಾಜ್, ಅಣ್ಣಪ್ಪ ಒಂಟಿಮಾಳಿಗೆ, ಅಜೇಯ್ಗೌಡ, ಸಮನ್ವಯ ಕೆ. ಕಾಶಿನಾಥ್, ಮಂಜುನಾಥ ನೇಮಕಗೊಂಡಿದ್ದು, ತಾಲೂಕು ಅಧ್ಯಕ್ಷರಾಗಿ ಗುರುಪ್ರಸಾದ್ (ಶಿಕಾರಿಪುರ), ಎಂ.ಎನ್. ಸುರೇಶ್ (ಹೊಸನಗರ), ಸಂದೇಶ ಜವಳಿ (ತೀರ್ಥಹಳ್ಳಿ), ಶ್ರೀಪಾದ ಬಿಚ್ಚುಗತ್ತಿ (ಸೊರಬ), ಸಂಗಪ್ಪ ಹೊಳೆಹೊನ್ನೂರು (ಶಿವಮೊಗ್ಗ ಗ್ರಾಮಾಂತರ), ಬಾರಂದೂರು ಪ್ರಕಾಶ್ (ಭದ್ರಾವತಿ)ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

