ಶಿವಮೊಗ್ಗ

ಕಳಪೆ ಕಾಮಗಾರಿಗೆ ತಡೆಯೊಡ್ಡಿದ ನಿವಾಸಿಗಳು

Published On :

ಶಿವಮೊಗ್ಗ: ಕನ್ಸರ್‌ವೆನ್ಸಿ ರಸ್ತೆಯಲ್ಲಿ ನಡೆಯುತ್ತಿದ್ದ ಕಳಪೆ ಕಾಮಗಾರಿಗೆ ತಡೆಯೊಡ್ಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ಸಂಜೆ ಹೊಸಮನೆ ಬಡಾವಣೆಯಲ್ಲಿ ನಡೆಯಿತು.
ಬಡಾವಣೆಯ ದೊಡ್ಡಮ್ಮ ದೇವಸ್ಥಾನ ಸಮೀಪದಲ್ಲಿ ಕನ್ಸರ್‌ವೆನ್ಸಿ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿತ್ತು. ಆದರೆ, ಅಲ್ಲಿ ನಡೆದಿದ್ದು ಕಣ್ಕಟ್ಟಿನ ಕೆಲಸ. ಜಲ್ಲಿ, ಮರಳಿಗೆ ಶಾಸ್ತ್ರಕ್ಕೆ ಸಿಮೆಂಟ್ ಸೋಕಿಸಿ ಕಾಮಗಾರಿ ನಡೆಯುತ್ತಿತ್ತು.     ಮಣ್ಣಿನ ರಾಶಿಯ ಮಿಶ್ರಣ ಮಾಡಿಕೊಂಡು ಕಾಟಾಚಾರಕ್ಕೆ ಕಾಮಗಾರಿ ಮಾಡಲಾಗುತ್ತಿತ್ತು. ಇದನ್ನು ಕಂಡ ಸ್ಥಳೀಯರು ಕಾಮಗಾರಿ ಸರಿಯಾಗಿ ನಡೆಸುವಂತೆ ಹೇಳಿದ್ದಾರೆ. ಇದಕ್ಕೆ ಸೊಪ್ಪುಹಾಕದ ಕಾಮಗಾರಿ ನಿರ್ವಹಿಸುತ್ತಿದ್ದ ಕಾರ್ಮಿಕರು, ನಾವು ಮಾಡೋದೇ ಹೀಗೆ... ನಮಗೆ ಹೀಗೆ ಕಾರ್ಯನಿರ್ವಹಿಸಲು ನಿರ್ದೇಶನ ಕೊಟ್ಟಿದ್ದಾರೆ ಎಂದು ಜವಾಬುಕೊಟ್ಟು ಕೆಲಸ ಮುಂದುವರಿಸಿದರು. ಇದರಿಂದ ಕೆರಳಿದ ಸ್ಥಳೀಯ ನಿವಾಸಿಗಳು ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಮುಂದುವರಿಸುವುದಿಲ್ಲ.  ಕಾಮಗಾರಿ ಮಾಡುವುದಿದ್ದರೆ ಸರಿಯಾಗಿ ಮಾಡಬೇಕು, ಇಲ್ಲವಾದಲ್ಲಿ ಕೆಲಸ ನಿಲ್ಲಿಸಿ ಎಂದು ಪಟ್ಟುಹಿಡಿದರು. ಅಂತಿಮವಾಗಿ ಜನರ ಒತ್ತಡದಿಂದ ಕಾರ್ಮಿಕರು ಕೆಲಸ ನಿಲ್ಲಿಸಿದರು.
-

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.